ಹೊಸಕೋಟೆ: ಕೊಳತೂರು ಗೇಟ್ ಬಳಿ ಚೆನೈ ಎಕ್ಸ್‌ಪ್ರೆಸ್ ಹೈವೇಗೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ ನಿರ್ಮಾಣ ಮಾಡಿ ಅಂಡರ್ ಪಾಸ್ ಮೂಲಕ ಕೊಳತೂರು ಗ್ರಾಮಕ್ಕೆ ಪ್ರವೇಶ ಮಾಡಲು ಅನುವು ಮಾಡಿ ಕೊಡುವಂತೆ ಗ್ರಾಮಸ್ಥರು ಸಲ್ಲಿಸಿದ ಮನವಿ ಮೇರೆಗೆ ಸಂಸದ ಡಾ.ಕೆ ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಜನರಿಗೆ ಅನುಕೂಲವಾಗುವ ರೀತಿ ರಸ್ತೆ ನಿರ್ಮಾಣ ಮಾಡುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಗ್ರಾಮಸ್ಥರ ಮನವಿ ಮೇರೆಗೆ ಸ್ಥಳ ಪರಿಶೀಲಿಸಿದ್ದು, ಮುಂದಿನ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಜನರಲ್ ಮ್ಯಾನೇಜರ್ ಜತೆ ಸಭೆ ನೆಡೆಸಿ ಗ್ರಾಮಸ್ಥರ ಅನುಕೂಲಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್, ಯೋಜನಾ ಮುಖ್ಯಸ್ಥೆ ಆರ್ಚನಾ, ತಾಪಂ ಮಾಜಿ ಅಧ್ಯಕ್ಷ ಓರೋಹಳ್ಳಿ ಜಯಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್ ಗೌಡ, ಗ್ರಾಮದ ಮುಖಂಡರಾದ ಲಕ್ಷ್ಮಣಮೂರ್ತಿ, ರಮೇಶ್, ಬಸವರಾಜು, ಮುನಿರಾಜು, ಕೆ.ಎಚ್.ಸುರೇಶ್, ರವಿ, ಸೋಲೂರು ಮುನಿಯಪ್ಪ, ಮುನೇಗೌಡ, ಅಶ್ವಥ್, ಬೈರೇಗೌಡ, ಭಾಸ್ಕರ್, ಪಟೇಲ್ ಶ್ರೀನಿವಾಸ್, ಶ್ರೀನಿವಾಸ್, ಶುಬ್ರಾಯಪ್ಪ, ಪ್ರವೀಣ್, ಸುನಿಲ್ ಹಾಜರಿದ್ದರು.ಫೋಟೋ: 17 ಹೆಚ್‌ಎಸ್‌ಕೆ 3 ಮತ್ತು 4
ಹೊಸಕೋಟೆ ಬಳಿಯ ಕೊಳತೂರು ಗೇಟ್ ಬಳಿ ಅವೈಜ್ಞಾನಿಕ ರಸ್ತೆ ನಿರ್ಮಾಣದ ಬಗ್ಗೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸಂಸದ ಡಾ.ಸುಧಾಕರ್ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ಥಳ ಪರಿಶೀಲಿಸಿದರು.