ಕನ್ನಡಪ್ರಭ ವಾರ್ತೆ ರಾಯಬಾಗದಿನೆ ದಿನೇ ವಕೀಲರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯ ಎಲ್ಲ ವಕೀಲರ ಸಂಘಗಳಿಗೆ ಸುಸಜ್ಜಿತ ಎಲ್ಲ ಸೌಲಭ್ಯವುಳ್ಳ ಕಟ್ಟಡಗಳ ಅವಶ್ಯಕತೆಯಿದೆ. ಪ್ರತೀ ವರ್ಷ 3 ಕಟ್ಟಡಗಳನ್ನು ಇಲಾಖೆಯಿಂದ ನಿರ್ಮಿಸಿ ಕೊಡುವ ಯೋಜನೆ ಹಾಕಿದ್ದು, ಅದನ್ನು 4 ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ನ್ಯಾಯವಾದಿ ಆರ್.ಎಸ್.ಶಿರಗಾಂವೆ ಪ್ರಸ್ತಾವಿಕವಾಗಿ ಮಾತನಾಡಿ, ರಾಯಬಾಗದಲ್ಲಿ ವಕೀಲರ ಸಂಘದ ಕಟ್ಟಡಕ್ಕಾಗಿ ಈಗಾಗಲೇ ₹1.50 ಕೋಟಿಗಳ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಕೂಡಾ ಮುಗಿದಿರುತ್ತದೆ. ಕಟ್ಟಡಕ್ಕೆಇನ್ನೂ ₹2.5 ಕೋಟಿ ಕ್ಕಿಂತ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು, ಅದನ್ನು ಕೂಡಲೇ ಸಚಿವರು ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಿ ವಕೀಲರ ಸಂಘಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.ವಕೀಲರ ಸಂಘಗಳಿಗೆ ಕಟ್ಟಡ ಹಾಗೂ ಕ್ಯಾಂಟೀನ್ ಸೌಲಭ್ಯಕ್ಕಾಗಿ ಅನುದಾನ ನೀಡಿದ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್.ಬಿ.ಘಾಟಗೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ್ ಕುಲಗುಡೆ, ಡಾ.ಎನ್.ಎ.ಮಗದುಮ್ಮ, ಕೆಪಿಸಿಸಿ ಸದಸ್ಯಅರ್ಜುನ ನಾಯಿಕವಾಡಿ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ.ಪೂಜೇರಿ, ವಕೀಲರಾದ ರಾಜು ಶಿರಗಾಂವೆ, ವಿ.ಎ.ಮೋರೆ, ವಿ.ಜಿ.ಖವಟಕೊಪ್ಪ, ಪಿ.ಐ.ಸವದತ್ತಿ, ಸಿ.ಬಿ.ಬುಸಗುಂಡೆ, ಎಸ್.ಎಸ್.ಚೌಗುಲಾ, ಪಿ.ಎಂ.ಪಾಟೀಲ, ಎನ್.ಎಂ.ಯಡವನ್ನವರ, ಎಸ್.ಬಿ.ಪಾಟೀಲ, ಎಂ.ಎಂ.ಚಿಂಚಲಿಕರ, ಎನ್.ಎಸ್.ಒಡೆಯರ, ಆರ್.ಎ.ಗೇನೆನ್ನವರ, ಎಸ್.ಟಿ.ಬಂತೆ, ಜಿ.ಡಿ.ಕುಲಕರ್ಣಿ, ಅಜಿತ ಖಿಚಡೆ, ಎಲ್.ಕೆ.ಖೋತ, ಡಿ.ಟಿ.ಉಮರಾಣಿ, ಆರ್.ಬಿ.ಪವಾರ, ಎಸ್.ಆರ್.ಮಾಂಗ ಹಾಗೂ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.