ಕೋಮಟೋಳ್ಳ ಕುಂಟ ಬಳಿ ಡ್ಯಾಂ ನಿರ್ಮಾಣ

KannadaprabhaNewsNetwork |  
Published : Nov 29, 2025, 12:30 AM IST
28ಬಿಜಿಪಿ-1a | Kannada Prabha

ಸಾರಾಂಶ

ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಸಂಗ್ರಹಣ ಮಾಡಿ ಕುಸಿದಿರುವ ಅಂರ್ಜಲದ ಮಟ್ಟ ಹೆಚ್ಚಳ ಮಾಡುವ ಮೂಲಕ ಫೋರೋಸಿಸ್ ಮುಕ್ತ ತಾಲೂಕನ್ನಾಗಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಈಗಾಗಲೇ 200 ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕಿನ ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಅನುಮೋದಿಸಿದೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ತಾಲೂಕಿನ ದೇವರಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಮುದ್ದಲಪಲ್ಲಿ-ಮಾಕಿರೆಡ್ಡಿಪಲ್ಲಿ ಸಮೀಪದಲ್ಲಿರುವ ಬೆಟ್ಟ-ಗುಡ್ಡದ ಪ್ರದೇಶದ ಕೋಮಟೋಳ್ಳ ಕುಂಟ ಪ್ರದೇಶದಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸ್ಥಳ ಪರಿಶೀಲಿಸಿದರು.

ಸುಮಾರು 5-6 ಕಿ.ಮೀ ದೂರ ದಾರಿಯನ್ನು ಕಾಲ್ನಡಿಗೆಯಲ್ಲೇ ಸಾಗಿ ತಲುಪಿ ಪರಿಶೀಲಿಸಿದ ಶಾಸಕರು ₹ 5 ಕೋಟಿ ರು.ಗಳ ವೆಚ್ಚದಲ್ಲಿ ಇನ್ನು 3 ತಿಂಗಳಲ್ಲಿ ಡ್ಯಾಂ ನಿರ್ಮಾಣದ ಕಾಮಗಾರಿ ಪ್ರಾರಂಭಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ

ಈ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಭದ್ರವಾದ ಅಡಿಪಾಯಕ್ಕೆ ಸೂಕ್ತವಾದ ಕಲ್ಲಿನ ಮಿಶ್ರಣ, ಮಣ್ಣು, ಜಲಧಾರೆಯ ದಿಕ್ಕು, ಮಳೆಯ ನೀರಿನ ಸಂಗ್ರಹಣಾ ಸಾಮರ್ಥ್ಯ ಹಾಗೂ ಡ್ಯಾಂ ಗೋಡೆಯ ಎತ್ತರ–ಅಗಲ ನಿಗದಿಗೆ ಬೇಕಾದ ಪ್ರಾಥಮಿಕ ತಾಂತ್ರಿಕ ಅಂಕಿಅಂಶಗಳನ್ನು ಸಣ್ಣ ನೀರಾವರಿ ಇಲಾಖೆ ಎಇಇ ಸುನಿಲ್ ಶಾಸಕರಿಗೆ ವಿವರಿಸಿದರು.

ಫ್ಲೋರೋಸಿಸ್‌ ಮುಕ್ತ ತಾಲೂಕಾಗಲಿ

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ವ್ಯರ್ಥವಾಗಿ ಹರಿಯುವ ಮಳೆ ನೀರನ್ನು ಸಂಗ್ರಹಣ ಮಾಡಿ ಕುಸಿದಿರುವ ಅಂರ್ಜಲದ ಮಟ್ಟ ಹೆಚ್ಚಳ ಮಾಡುವ ಮೂಲಕ ಫೋರೋಸಿಸ್ ಮುಕ್ತ ತಾಲೂಕನ್ನಾಗಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಈಗಾಗಲೇ 200 ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕಿನ ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಅನುಮೋದಿಸಿದೆ ಎಂದರು.

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಪಿ. ಮಂಜುನಾಥರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ವಿಷ್ಣುವರ್ಧನರೆಡ್ಡಿ, ಸಣ್ಣ ನೀರಾವರಿ ಇಲಾಖೆ ಎಇಇ ಸುನಿಲ್. ರವೆನ್ಯೂ ಇನ್ಸ್‌ಪೆಕ್ಟರ್ ಪ್ರಶಾಂತ್, ಪಿಡಿಓ ಶಂಕರಪ್ಪ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಾಜಿ ಜಯಂತಿ ವೇಳೆ ಗಲಾಟೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ
118ನೇ ದಿನದಲ್ಲಿ ಕಾರ್ಖಾನೆ ಅನಿರ್ದಿಷ್ಟಾವಧಿ ಧರಣಿ