ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ಗಚ್ಚಿನ ಮಠದಲ್ಲಿ ಮಲ್ಲಿಕಾರ್ಜುನ ದೇವರ ನೂತನ ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಶತಮಾನ ಕಂಡ ರಥ ಶಿಥಿಲವಾದ ಹಿನ್ನೆಲೆಯಲ್ಲಿ ಭಕ್ತರ ಸಹಕಾರದಿಂದ 1 ಕೋಟಿ ರು. ವೆಚ್ಚದಲ್ಲಿ ನೂತನ ರಥ ನಿರ್ಮಾಣ ಮಾಡಲಾಗಿದೆ. ಈ ರಥವು ಶತಮಾನ ಪೂರೈಸಿ ಮುಂದಿನ ಜನಾಂಗಕ್ಕೆ ನಮ್ಮ ಪರಂಪರೆಯನ್ನು ಕೊಂಡೊಯ್ಯುವ ದ್ಯೂತಕವಾಗಿದೆ ಎಂದರು.
ರಥ ನಿರ್ಮಾಣ ಸಮಿತಿಯ ಮುಖ್ಯಸ್ಥ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ರಥ ನಿರ್ಮಾಣ ಸಮಿತಿಯ ಪ್ರಮುಖರಾದ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿದರು.ಗ್ರಾಮದ ಮುಖಂಡರು ರಥ ನಿರ್ಮಾಣ ಸಮಿತಿಯ ಪ್ರಮುಖರುಗಳಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಡಾ. ಬಿ.ಎಚ್.ದಿವಟರ್, ಅಂದಾನಪ್ಪ ಗುಂಡಳ್ಳಿ, ಎಚ್.ಬಿ ಮುರಾರಿ, ಅಪ್ಪಾಜಿಗೌಡ ಪಾಟೀಲ್, ಪಂಚಾಕ್ಷರಯ್ಯ ಕಂಬಾಳಿಮಠ, ಘನಮಠದಯ್ಯ ಸಾಲಿಮಠ, ಉಮೇಶ ನಾಗಲಿಕರ್ ಮಾತನಾಡಿದರು. ವರ್ತಕರಾದ ಮಲ್ಲಪ್ಪ ಕುಡತನಿ ಉಪಸ್ಥಿತರಿದ್ದರು.