ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಒಸಾಟ್ ನೆರವಿಗೆ ಶ್ಲಾಘನೆ
ನೂರು ವರ್ಷಗಳ ಇತಿಹಾಸ ಇರುವಂತಹ ಶಾಲೆಯನ್ನು ಅಭಿವೃದ್ದಿ ಮಾಡಬೇಕಾದ ಅನಿವಾರ್ಯವಿತ್ತು. ಬಂಗಾರಪೇಟೆಯಲ್ಲಿ ಹುಟ್ಟಿ ಬೆಳೆದು ಅಮೆರಿಕದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಡಾ.ರವೀಂದ್ರಕುಮಾರ್ ಮತ್ತು ಅವರ ಪತ್ನಿ ನಿರ್ಮಲಮ್ಮ ದಂಪತಿ ತಾವು ಹುಟ್ಟಿದ ಊರಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಒಸಾಟ್ ಮೂಲಕ ೨ ಕೋಟಿ ವೆಚ್ಚದಲ್ಲಿ ೧೦ ಕೊಠಡಿಗಳನ್ನು ನಿರ್ಮಿಸಲಿದ್ದಾರೆ ಎಂದು ಶಾಸಕರು ಶ್ಲಾಘಿಸಿದರು.ದಾನಿಗಳ ನೆರವಿನಿಂದ ನಿರ್ಮಾಣವಾಗುವ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುವ ಲಕ್ಷಾಂತರ ವಿದ್ಯಾರ್ಥಿಗಳು ಮುಂದೆ ಚೆನ್ನಾಗಿ ಓದಿ ರ‍್ಯಾಂಕ್‌ಗಳನ್ನು ಪಡೆಯುವ ಮೂಲಕ ದಾನಿಗಳಿಗೆ ಕೃತಜ್ಞತೆ ಸಲ್ಲಿಸಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿ ಉನ್ನತ ಸ್ಥಾನಕ್ಕೇರಿದ ಮೇಲೆ ಡಾ.ರವೀಂದ್ರಕುಮಾರ್ ರವರ ರೀತಿ ಮುಂದೆ ದಾನಗಳನ್ನು ಮಾಡಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.
ಸ್ಮಾರ್ಟ್ ಕ್ಲಾಸ್ ಆರಂಭಿಸುವ ಉದ್ದೇಶಒಸಾಟ್ ಸಂಸ್ಥೆಯ ಮೂಲಕ ನೆಲಮಹಡಿ ಮತ್ತು ಮೊದಲ ಮಹಡಿ ನಿರ್ಮಿಸಿದರೆ ಅದರ ಮೇಲೆ ಮತ್ತೊಂದು ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಆಧುಕತೆ ಬೆಳೆದಂತೆ ಕೋಟ್ಯತರ ರೂಗಳನ್ನು ಖರ್ಚು ಮಾಡಿ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿಯೂ ಸಹ ಮುಂದಿನ ೪ ತಿಂಗಳಲ್ಲಿ ದಾನಿಗಳ ನೆರವಿನಿಂದ ಸ್ಮಾರ್ಟ್ ಕ್ಲಾಸ್ ನಿರ್ಮಿಸಲಾಗುತ್ತದೆ. ಅದರೊಟ್ಟಿಗೆ ಮಾದರಿ ಶಾಲೆಯನ್ನು ನಿರ್ಮಿಸಬೇಕು ಎಂಬ ಕನಸು ಕಂಡಿದ್ದು, ಕೇಸರನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ೧೦ ಎಕರೆ ಪ್ರದೇಶದಲ್ಲಿ ಮಾದರಿ ಶಾಲೆಯನ್ನು ನಿರ್ಮಿಸಲಾಗುತ್ತದೆ ಎಂದರು.
೧೧೭ ಶಾಲೆ ನಿರ್ಮಿಸಿದ ಓಸಾಟ್ಒಸಾಟ್ ಸಂಸ್ಥೆಯ ಬಾಲಕೃಷ್ಣರಾವ್ ಮಾತನಾಡಿ, ಅನಿವಾಸಿ ಭಾರತೀಯರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದು, ಇದರಿಂದ ಮಕ್ಕಳಲ್ಲಿ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಸಂಸ್ಥೆಯ ಮೂಲಕ ಈಗಾಗಲೇ ೧೧೭ ಶಾಲೆಗಳನ್ನು ನಿರ್ಮಿಸಿದ್ದು, ಮಕ್ಕಳ ಸಂಖ್ಯೆ ಹೆಚ್ಚಿರುವ ಕಾಮಸಮುದ್ರ ಮತ್ತು ಬಂಗಾರಪೇಟೆ ಸರಕಾರಿ ಶಾಲೆಗಳನ್ನು ಸಹ ಅಭಿವೃದ್ದಿ ಮಾಡಲಾಗುತ್ತಿದೆ ಎಂದರು.
ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತುಸಂಸ್ಥೆಯಿಂದ ೧೩೭ನೇ ಶಾಲೆಯಾಗಿ ಬಂಗಾರಪೇಟೆ ಶಾಲೆಯನ್ನು ಅಭಿವೃದ್ದಿ ಮಾಡುತ್ತಿದ್ದು, ೧೦ ಕೊಠಡಿಗಳನ್ನು ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಲಿಸಲು ಒತ್ತು ನೀಡಲಾಗುತ್ತದೆ ಎಂದರು.
ಈ ವೇಳೆ ಒಸಾಟ್ ಸಂಸ್ಥೆಯ ಸದಸ್ಯರಾದ ನಾಗಭೂಷಣ, ನಾಗೇಶ್, ಮದನ್, ಶಿಕ್ಷಣ ಇಲಾಖೆಯ ಅಧಿಕಾರಿ ಪರ್ವೀನ್ ತಾಜ್, ಬಿಇಒ ಶಶಿಕಲಾ, ಪ್ರಾಂಶುಪಾಲ ನಾಗಾನಂದ ಕೆಂಪರಾಜ, ಉಪ ಪ್ರಾಂಶುಪಾಲ ಶಂಕರಪ್ಪ ಮುಂತಾದವರು ಹಾಜರಿದ್ದರು.