ಕನ್ನಡಪ್ರಭ ವಾರ್ತೆ ಇಂಡಿ
ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22 ಎಕರೆ ಪ್ರದೇಶದಲ್ಲಿ ₹14.22 ಕೋಟಿಯಲ್ಲಿ ಅಭಿವೃದ್ಧಿ ಆಗುತ್ತಿರುವ ಕೈಗಾರಿಕಾ ಪ್ರದೇಶ ಕೆಲವೇ ದಿನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಪ್ರದೇಶವನ್ನು 371 ಜೆ ಮೀಸಲಿಗೆ ಒಳಪಡಿಸಬೇಕು. ಇಲ್ಲವೆ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಈಗಾಗಲೇ ಸಿಎಂ, ಡಿಸಿಎಂ ಹಾಗೂ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜಕೀಯ ಸ್ಥಾನಮಾನ ತ್ಯಾಗ ಮಾಡಿದ್ದೇನೆ. 40 ವರ್ಷ ರಾಜಕೀಯದಲ್ಲಿ ಬೆಳೆಸಿದ ಈ ಭಾಗದ ಜನರಿಗಾಗಿ ಸರ್ವತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದರು.ಎಐ, ರೊಬೋಟ್‌ಗಳಂತ ಹೊಸ ತಂತ್ರಜ್ಞಾನ ಅವಿಷ್ಕಾರ ನಡೆಯುತ್ತಿದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ನೀತಿಗಳು ಜಾರಿಗೆ ಬರಬೇಕು. ಸಂಶೋಧಕರು ಶಿಕ್ಷಣಕ್ಕೆ ಒತ್ತು ನೀಡಬೇಕು. ರಾಜ್ಯದ 8 ಜನರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ. ಒಳ್ಳೆಯ ಸಾಧಕರನ್ನು ಆಯ್ಕೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದಿಸಿದರು.
ತೋಟಗಾರಿಕೆ, ಕೃಷಿಯಲ್ಲಿ ಸಾಧನೆ ಮಾಡಲಾಗಿದ್ದು, ನೆರೆ ಹಾವಳಿಯಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಸ್ಲಂ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇಂದು ನಿಂಬೆನಾಡು ಇಂಡಿ ನಿತ್ತೋತ್ಸವದ ಸಂಭ್ರಮದಲ್ಲಿ ಇದೆ ಎಂದರು.ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಎಇಇ ದಯಾನಂದ ಮಠ, ಎಸ್.ಆರ್.ಮೆಡೆಗಾರ, ಶಿವಾಜಿ ಬನಸೋಡೆ, ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ಗೀತಾ ಗುತ್ತರಗಿಮಠ, ಶಿವಾನಂದ ಪೂಜಾರಿ, ಉಮೇಶ ಲಮಾಣಿ ಸೇರಿ ಇತರರಿದ್ದರು.