25 ಎಕರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ: ಸಚಿವ ಖಂಡ್ರೆ

KannadaprabhaNewsNetwork |  
Published : Oct 25, 2026, 01:45 AM IST
ಚಿತ್ರ 24ಬಿಡಿಆರ್5ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ರೋಟರಿ ಕ್ರಿಕೆಟ್‌ ಪ್ರಿಮಿಯರ್‌ ಲೀಗ್‌ 3.0 ಟ್ರೋಫಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ನಗರಕ್ಕೆ ಸಮೀಪವೇ 25 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ನಗರಕ್ಕೆ ಸಮೀಪವೇ 25 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ನಗರದ ಗುರುನಾನಕ ದೇವ ಎಂಜಿನಿಯರಿಂಗ್‌ ಕಾಲೇಜು ಕ್ರೀಡಾಂಗಣದಲ್ಲಿ ರೋಟರಿ ಕ್ಲಬ್‌ ಆಫ್‌ ಬೀದರ್‌ ಸಿಲ್ವರ್‌ ಸ್ಟಾರ್‌ ವತಿಯಿಂದ ಬೇಟಿ ಪಡಾವೋ, ಬೇಟಿ ಬಚಾವೋ ಘೋಷವಾಕ್ಯದಡಿ ಹಮ್ಮಿಕೊಳ್ಳಲಾದ ರೋಟರಿ ಕ್ರಿಕೆಟ್‌ ಪ್ರಿಮಿಯರ್‌ ಲೀಗ್‌ 3.0 ಟ್ರೋಫಿ ಶನಿವಾರ ಅನಾವರಣಗೊಳಿಸಿ ಮಾತನಾಡಿ, ಕ್ರೀಡಾಂಗಣಕ್ಕಾಗಿ ಸ್ಥಳ ಹುಡುಕಾಟ ನಡೆಸಲಾಗುತ್ತಿದೆ. ಸೂಕ್ತ ಸ್ಥಳ ದೊರೆತ ನಂತರ ಸಚಿವ ಸಂಪುಟದ ಅನುಮೋದನೆ ಪಡೆದು, ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಭಾಲ್ಕಿಯಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕ್ರೀಡೆಗೆ ಉತ್ತೇಜನ ನೀಡಲು ಜಿಲ್ಲೆಯ ಎಲ್ಲ ಹೋಬಳಿಗಳಲ್ಲೂ ಕ್ರೀಡಾಂಗಣ ನಿರ್ಮಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ 10 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಅತಿಯಾದ ಮೊಬೈಲ್‌ ಬಳಕೆಯಿಂದ ಯುವಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಯುವಕರು ಉತ್ತಮ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸದೃಢ ರಾಷ್ಟ್ರ ಕಟ್ಟಲು ಕೈಜೋಡಿಸಬೇಕು ಎಂದರು.

ಶಾಸಕ ರಹೀಮ್‌ಖಾನ್‌ ಮಾತನಾಡಿ, ನಗರದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ಕ್ಲಬ್‌ ಅಧ್ಯಕ್ಷೆ ಸ್ಫೂರ್ತಿ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಲಬ್‌ನಿಂದ 25 ಲಕ್ಷ ರು.ವೆಚ್ಚದಲ್ಲಿ ಅನೇಕ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಕ್ಯಾನ್ಸರ್‌ ರೋಗಿಗಳಿಗೆ ನೆರವು ನೀಡಲಾಗಿದೆ. ಕ್ರಿಕೆಟ್‌ ಟೂರ್ನಿಯಿಂದ ಸಂಗ್ರಹವಾಗುವ ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಬಳಸಲಾಗುವುದು ಎಂದು ಹೇಳಿದರು.

ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರ್ದಾರ್‌ ಬಲಬೀರಸಿಂಗ್‌, ದಿ ಗ್ರೇನ್‌ ಆ್ಯಂಡ್‌ ಸೀಡ್ಸ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಬಸವರಾಜ ಧನ್ನೂರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ ಕಾಮಶೆಟ್ಟಿ, ರೋಟೆರಿಯನ್‌ಗಳಾದ ರವಿ ಮೂಲಗೆ, ಹಾವಶೆಟ್ಟಿ ಪಾಟೀಲ್‌, ಸುರೇಶ ಚನಶೆಟ್ಟಿ, ತರುಣ್‌ ನಾಗಮಾರಪಳ್ಳಿ, ಜಹೀರ್‌ ಅನ್ವರ್‌, ನಾಗರಾಜ ಕರ್ಪೂರ, ಮಂಜುನಾಥ ಹೂಗಾರ, ಸುವರ್ಣಾ ಧನ್ನೂರ, ಕೀರ್ತಿ ವಾಲೆ, ನೆಹಾಲ್‌ ಸಿಂಗ್‌, ಅಮಯ್‌ ಸಿಂದೋಲ್, ಪುನೀತ್ ಸಿಂಗ್, ಡಾ. ಸಂಗಮೇಶ ವಡಗಾವೆ, ಜೈಕಿಶನ್‌ ಬಿಯಾನಿ, ಕಿರಣ್‌ ಬೆಲ್ದಾಳೆ, ಅಶೋಕ ಹೆಬ್ಬಾಳೆ, ನಿಖಿಲ್‌ ಖಂಡ್ರೆ, ಶುಭಂ ಶರ್ಮಾ ಹಾಗೂ ದೀಪಕ ಪಾಂಚಾಳ್ ಇದ್ದರು. ಕ್ಲಬ್ ಕಾರ್ಯದರ್ಶಿ ಅಭಿಷೇಕ ಚಿಂತಾಮಣಿ ಸ್ವಾಗತಿಸಿ ಸಹನಾ ಪಾಟೀಲ್‌ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಪತ್ರಕರ್ತರ ಕೊಡುಗೆ ಅಪಾರ: ಬಸವಂತಪ್ಪ
ದಲಿತ ಸಚಿವರ ತಡೆದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ