ಕನ್ನಡಪ್ರಭ ವಾರ್ತೆ ಮಾಲೂರು
ರಾಜಕೀಯ ಕಾರಣದಿಂದ ನಿಂತು ಹೋಗಿದ್ದ ಇಲ್ಲಿನ ಇಂದಿರಾ ಕ್ಯಾಂಟೀನ್ ಮತ್ತೇ ಪ್ರಾರಂಭಿಸಲು ಮುಖ್ಯ ಮಂತ್ರಿಗಳು ಹಣ ಮಂಜೂರು ಮಾಡಿದ್ದು, ಇನ್ನೊಂದು ತಿಂಗಳಲ್ಲಿ ೮೭ ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದ ಬಳಿಯ ತಾ.ಪಂ.ವಸತಿ ಸಂರ್ಕಿಣ ಬಳಿದ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಎಲ್ಲ ಇಲಾಖೆಗಳ ಅನುಮತಿಈ ಹಿಂದೆ ಪಟ್ಟಣದಲ್ಲಿ ಇದೇ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಹೊರಟಾಗ ವಿರೋಧ ಪಕ್ಷದವರ ರಾಜಕೀಯದಿಂದ ಕೋರ್ಟ್‌ಗೆ ಹೋದ ಪರಿಣಾಮ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಅದೇ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಅವಶ್ಯ ಇರುವ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಈಗ ಮತ್ತೇ ವಿರೋಧಿ ಪಕ್ಷದವರು ಅಡ್ಡಿಪಡಿಸಿದರೆ ಬಡ ಜನರ ಹಸಿದ ಹೊಟ್ಟೆಗೆ ಮೇಲೆ ಹೊಡೆಯುವ ಇವರಿಗೆ ಜನರೇ ಛೀಮಾರಿ ಹಾಕಲಿದ್ದಾರೆ. ಈ ಸಲ ನಮ್ಮದೇ ಸರ್ಕಾರ ಇರುವುದರಿಂದ ಅವರ ಆಟ ನಡೆಯುವುದಿಲ್ಲ. ಮತ್ತೇ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರಕ್ಕೂ ಹಾಗೂ ಕಾಂಗ್ರೆಸ್ ಸರ್ಕಾರ ಇರುವಾಗ ಕಾಂಗ್ರೆಸ್ ಪಕ್ಷದನಾದ ನನ್ನನ್ನು ಮತ್ತೇ ಶಾಸಕನಾಗಿ ಆರಿಸಿದ ತಾಲೂಕಿನ ಜನತೆಗೂ ಧನ್ಯವಾದ ತಿಳಿಸುತ್ತೇನೆ ಎಂದರು.ಉಚಿತ ಭರವಸೆಗಳ ಈಡೇರಿಕೆ
ಚುನಾವಣೆ ಪೂರ್ವ ನೀಡಲಾಗಿದ್ದ ಎಲ್ಲ ಉಚಿತ ಭರವಸೆ ಗಳನ್ನು ಈಡೇರಿಸಿರುವ ಸಿದ್ದರಾಮಯ್ಯ ಸರ್ಕಾರವು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ನೀಡುತ್ತಿದ್ದು,ಈ ತಕ್ಷಣ ಪಟ್ಟಣದಲ್ಲಿ ಭೂಗತ ತೊಟ್ಟಿ ಸೇರಿದಂತೆ ಆರು ಶೌಚಾಲಯ ನಿರ್ಮಿಸಲು ೯೭.೫೦ ಲಕ್ಷ ರು.ಗಳ್ನನು ಬಿಡುಗಡೆ ಮಾಡಿದ್ದು,ಎಲ್ಲದಕ್ಕೂ ಇಂದೇ ಚಾಲನೆ ನೀಡಲಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ರಮೇಶ್ ,ಇಓ ಕೃಷ್ಣಪ್ಪ ,ಮುಖ್ಯಾಧಿಕಾರಿ ಪ್ರದೀಪ್ ,ಪುರಸಭೆ ಸದಸ್ಯರಾದ ಮುರಳಿಧರ್,ಪರಮೇಶ್,ಬುಲೆಟ್ ವೆಂಕಟೇಶ್, ಇಂತಿಯಾಜ್,ಕಾರ್ಮಿಕ ರಾಜಪ್ಪ,ಕೋಕಿಲ ನಾರಾಯಣ್,ಭಾರತಿ ಶಂಕರಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ್,ವಿಜಯನರಸಿಂಹ,ಅಶ್ವಥ್ ರೆಡ್ಡಿ ,ವೆಂಕಟಶ್ಯಾಮಿ, ರತ್ಮಮ್ಮ,ಮಾಸ್ತಿ ಪ್ರವೀಣ್ , ಮಂಜುನಾಥ್ ಜಾಕಿ,ಶಬ್ಬೀರ್ ಉಲ್ಲಾ ,ಎಂ.ಪಿ.ವಿ.ಮಂಜುನಾಥ್ ಇನ್ನಿತರರು ಇದ್ದರು.
ಶಿರ್ಷಿಕೆ-೨೦ಕೆ.ಎಂ.ಎಲ್.ಅರ್.೧-ಮಾಲೂರಿನ ಶ್ರೀ ಜಗಜೋತಿ ಬಸವೇಶ್ವರ ವೃತ್ತದ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಶಾಸಕ ಕೆ.ವೈ.ನಂಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು.