ದೇವದುರ್ಗ: ತಾಲೂಕಿನಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕನ್ನಡ ಭವನ ನಿರ್ಮಾಣ ಅಗತ್ಯವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಪ್ರಯತ್ನಿಸಬೇಕೆಂದು ಎಂಆರ್‌ಎಚ್ಎಸ್ ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರಿ ತಿಳಿಸಿದರು.
ಮಹನೀಯರ ಜನ್ಮ ದಿನಾಚರಣೆ, ಪುಣ್ಯಸ್ಮರಣೋತ್ಸವದಂತಹ ಕಾರ್ಯಕ್ರಮಗಳಿಗಾಗಿ ಸ್ಥಳದ ಸಮಸ್ಯೆಯಿದೆ. ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ತಾಲೂಕು ಕಸಾಪ ಪದಾಧಿಕಾರಿಗಳು ನಿಗಾ ವಹಿಸಬೇಕೆಂದು ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರಿ ತಿಳಿಸಿದರು.
ದಿವಾನ ಮಿರ್ಜಾ ಇಸ್ಮಾಯಿಲ್‌ರ ಭಾವಚಿತ್ರಕ್ಕೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನರಸಿಂಗರಾವ್ ಸರಕೀಲ್ ಪುಷ್ಪಾರ್ಚನೆ ಮಾಡಿದರು.ತಾಲೂಕು ಕಸಾಪ ಅಧ್ಯಕ್ಷ ಹೆಚ್.ಶಿವರಾಜ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ಮತ್ತು ಕಸಾಪ ಕಚೇರಿ ನಿರ್ಮಾಣಕ್ಕಾಗಿ ನಿವೇಶನಕ್ಕಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಂದನಕೇರಿ ರಸ್ತೆ ಮಾರ್ಗದಲ್ಲಿ ಉದ್ಯಮಿ ಫಜುಲುಲ್ಲಾ ಸಾಜೀದ್ ತಮ್ಮ ತಂದೆಯವರ ಸ್ಮರಣಾರ್ಥ ಉಚಿತವಾಗಿ ನಿವೇಶನ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ಶಾಸಕರು, ಸಂಸದರನ್ನು ಸಂಪರ್ಕಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಪಾಲರೆಡ್ಡಿ ಕೋಳೂರ, ಸುನಿಲ್ ಕುಮಾರ, ಈಶ್ವರ ಭವಾನಿ, ತಿರುಪತಿ, ವಿಜಯಕುಮಾರದಾಸ, ಸುಂದರೇಶ, ಸುಂದರೇಶ, ಸಂಗಮೇಶ ಹರವಿ, ಕೃಷ್ಣಕುಮಾರ, ಡಿ.ಜೆ.ತಿಮ್ಮು, ಬಂದೇನವಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.