ನರೇಗಾ ಯೋಜನೆಯಡಿ ಕಟ್ಟೇಹುಂಡಿ ಅಂಗನವಾಡಿ ಕೇಂದ್ರ ನಿರ್ಮಾಣ

KannadaprabhaNewsNetwork |  
Published : May 20, 2025, 01:33 AM IST
44 | Kannada Prabha

ಸಾರಾಂಶ

ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟೇಹುಂಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡದಿಂದ ಗ್ರಾಮದ ಅನೇಕ ಪುಟ್ಟ ಮಕ್ಕಳ ಲಾಲನೆ, ಪಾಲನೆ, ಪೋಷಣೆಯೊಂದಿಗೆ ಕಲಿಕೆಗೆ ನೆರವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬರ ಬಾಲ್ಯದ ಬುದ್ಧಿವಿಕಾಸ ಕೇಂದ್ರವಾಗಿರುವ ಅಂಗನವಾಡಿಯು ಎಳೆಯ ಕಂದಮ್ಮಗಳಿಗೆ ಮೂಲಭೂತ ಶಿಕ್ಷಣ, ಕಥೆ, ಹಾಡು ಆಟದ ಕಲಿಕೆಯ ಆಶಕ್ತಿಯೊಂದಿಗೆ ಶಾಲೆಗೆ ಸಿದ್ಧಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ದಿಶೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಿಸುವ ಮೂಲಕ ಸುಸಜ್ಜಿತ, ಸುಭದ್ರ ಕಟ್ಟಡಗಳಲ್ಲಿ ಕೇಂದ್ರವನ್ನು ಮುನ್ನಡೆಸಲು ಸಾಧ್ಯವಾಗುತ್ತಿದೆ.

ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟೇಹುಂಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡದಿಂದ ಗ್ರಾಮದ ಅನೇಕ ಪುಟ್ಟ ಮಕ್ಕಳ ಲಾಲನೆ, ಪಾಲನೆ, ಪೋಷಣೆಯೊಂದಿಗೆ ಕಲಿಕೆಗೆ ನೆರವಾಗುತ್ತಿದೆ.

ನೂತನ ಕಟ್ಟಡದಿಂದ ಪೋಷಕರಲ್ಲಿ ಸುರಕ್ಷತೆ ಮನೋಭಾವ ಮೂಡಿದ್ದು, ತಮ್ಮ ಕಂದಮ್ಮಗಳನ್ನು ಅಂಗನವಾಡಿಗೆ ಕಳುಹಿಸಿ ನಿರ್ಭಯದಿಂದ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ.

ಅಂಗನವಾಡಿ ಕಟ್ಟಡದಲ್ಲಿರುವ ಬಣ್ಣ ಬಣ್ಣದ ಚಿತ್ತಾಕರ್ಷಕ ಬೊಂಬೆಗಳು, ಗಿಳಿ, ನವಿಲು ಸೇರಿದಂತೆ ಗಿಡ, ಮರಗಳು, ಕಾಡು ಪ್ರಾಣಿಗಳ ಚಿತ್ರವು ಮಕ್ಕಳನ್ನು ಬಹುಬೇಗ ಆಕರ್ಷಿಸುತ್ತದೆ. ವನ್ಯಜೀವಿಗಳ ಬಗ್ಗೆ ಮಕ್ಕಳಲ್ಲಿರುವ ಕೌತುಕತೆಗೆ ಮತ್ತಷ್ಟು ಹಿಂಬು ನೀಡುತ್ತದೆ. ಪುಟಾಣಿಗಳ ಒಳ ಮನಸ್ಸು ಕಾಡಿನ ಪ್ರಪಂಚಕ್ಕೆ ತೆರೆದುಕೊಳ್ಳಲು ಈ ಚಿತ್ರಗಳು ಸಹಕಾರಿಯಾಗಿವೆ. ಅಲ್ಲದೆ, ಗೋಡೆಯಲ್ಲಿ ರಚಿಸಿರುವ ಕನ್ನಡ ಹಾಗೂ ಆಂಗ್ಲ ಭಾಷೆಯ ವರ್ಣಮಾಲೆಯು ಮಕ್ಕಳ ಅಕ್ಷರಾಭ್ಯಾಸಕ್ಕೂ ಉಪಯೋಗವಾಗಲಿದೆ.

ಉತ್ತಮ ಮೂಲಭೂತ ಸೌಕರ್ಯ:

ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಅತ್ಯತ್ತಮ ಗುಣಮಟ್ಟದ ಸಾಮಾಗ್ರಿಗಳಿಂದ ನಿರ್ಮಿಸಿರುವ ಕಟ್ಟಡದ ಒಳಗೆ ದಿನಪೂರ್ತಿ ನೀರಿನ ಸೌಲಭ್ಯವಿದೆ. ಪ್ರತ್ಯೇಕ ಅಡುಗೆ ಕೋಣೆ, ದಿನಿಸಿ ಕೋಣೆ, ಮಕ್ಕಳ ಅಕ್ಷರ ಕಲಿಕೆಗೆ ಕಪ್ಪು ಹಲಗೆ, ಮಕ್ಕಳು ಮಲಗಲು ವಿಸ್ತಾರವಾದ ಜಾಗವಿದೆ. ಮಕ್ಕಳ ಸ್ನೇಹಿ ಶೌಚಾಲಯವೂ ಇದ್ದು, ಮಕ್ಕಳು ಎಳೆ ವಯಸ್ಸಿನಿಂದಲೇ ಸ್ವಚ್ಛತೆ ಹಾಗೂ ನೈರ್ಮಲ್ಯ ಪಾಠ ಕಲಿಯುತ್ತಿದಾರೆ.ಮೈಸೂರು ತಾಲೂಕು ವ್ಯಾಪ್ತಿಯ ಕೊನೆಯ ಗ್ರಾಮವಾಗಿರುವ ಕಟ್ಟೇಹುಂಡಿಯ ಮಕ್ಕಳಿಗೆ ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಸಹಕಾರಿಯಾಗಲು ನರೇಗಾ ಯೋಜನೆಯಲ್ಲಿ ಅಂಗನವಾಡಿ ನಿರ್ಮಿಸಿರುವುದು ಶ್ಲಾಘನಿಯ.

- ದಾಸಯ್ಯ, ಸದಸ್ಯ, ದೊಡ್ಡಮಾರಗೌಡನಹಳ್ಳಿ ಗ್ರಾಪಂಪುಟ್ಟ ಮಕ್ಕಳ ಪಾಲನೆಗಾಗಿ ನಮ್ಮ ಗ್ರಾಪಂ ವ್ಯಾಪ್ತಿಯ ಕಟ್ಟೆಹುಂಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಉತ್ತಮ, ಸುಸಜ್ಜಿತ ಅಂಗವಾಡಿ ಕಟ್ಟಡ ನಿರ್ಮಿಸಿರುವುದು ನಮಗೆ ಹೆಮ್ಮೆ ಇದೆ. ಅಲ್ಲದೆ, ಗ್ರಾಪಂ ವತಿಯಿಂದ 50 ಸಾವಿರ ರೂ. ಅಗತ್ಯ ಮೂಲಭೂತ ಸಾಮಾಗ್ರಿಗಳನ್ನು ಖರೀದಿಸಿ ಕೊಡಲಾಗಿದೆ.

- ಕೆ.ರುಕ್ಮಾಂಗದ, ಪಿಡಿಒ, ದೊಡ್ಡಮಾರಗೌಡನಹಳ್ಳಿ ಗ್ರಾಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ