ಸೂಲಿಬೆಲೆ: ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಂಕ್ ಟಾಯ್ಲೆಟ್ ನಿರ್ಮಾಣ ಮಾಡಿಕೊಡುತ್ತಿರುವುದಾಗಿ ತೋರಿಷಿಮಾ ಪಂಪ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಗ್ರೋವರ್ ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿರ್ಮಾಣ ಹಂತದಲ್ಲಿರುವ ಪಿಂಕ್ ಟಾಯ್ಲೆಟ್(ಶೌಚಾಲಯ) ಕಾಮಗಾರಿ ವೀಕ್ಷಿಸಿ ಶೀಘ್ರದಲ್ಲಿಯೇ ಉಪಯೋಗಕ್ಕೆ ನೀಡಲಾಗುವುದು ಎಂದರು. ಕಂಪನಿ ವ್ಯವಸ್ಥಾಪಕಿ ಡಿಂಪಲ್, ಕಾಲೇಜಿನ ಪ್ರಾಚಾರ್ಯ ಮಂಜುನಾಥ್, ಉಪನ್ಯಾಸಕ ಕುಮಾರ್, ವಿಜಯಗಂಗಾಧರ್, ವಸತಿ ಶಾಲೆ ರುತ್‌ಜೆಸೆಂತ್ ಗ್ರಾಪಂ ಉಪಾಧ್ಯಕ್ಷ ಜಿಯಾವುಲ್ಲಾ, ಗುತ್ತಿಗೆದಾರ ಸೋನು, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಚೌಡೇಗೌಡ, ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್ ಇತರರಿದ್ದರು.