ಜನೇವರಿ 22ಕ್ಕೆ ರೈಲ್ವೆ ಗೇಟ್ ಅಂಡರ್ ಪಾಸ್ ಅಳವಡಿಕೆ ಕಾಮಗಾರಿ: ಕೊಪ್ಪಳ ಸಂಸದ ಸಂಗಣ್ಣ ಕರಡಿ

KannadaprabhaNewsNetwork | Published : Jan 14, 2024 1:32 AM

ಸಾರಾಂಶ

ನಿತ್ಯ ಕೆಲಸದ ವೇಳೆ ರೈಲುಗಳ ಸಂಚಾರವನ್ನು ಸೌಥ್ ವೆಸ್ಟರ್ನ್ ರೈಲ್ವೆ ಇಲಾಖೆಯವರು ಸ್ಥಗಿತಗೊಳಿಸಿ ಕಾಮಗಾರಿ ಮಾಡಲು ಅವಕಾಶ ಮಾಡಿಕೊಡಿದ್ದಾರೆ.

ಕೊಪ್ಪಳ: ನಗರದ ಸ್ವಾಮಿ ವಿವೇಕಾನಂದ ಶಾಲೆಯ ರಸ್ತೆಯಲ್ಲಿರುವ ರೈಲ್ವೆ ಗೇಟ್ ನಂ.63ಕ್ಕೆ ಅಂಡರ್ ಬ್ರಿಡ್ಜ್ ಅಳವಡಿಕೆ ಕಾಮಗಾರಿ ಜ.22ರಿಂದ ಆರಂಭವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ನಗರದ ಸ್ವಾಮಿ ವಿವೇಕಾನಂದ ಶಾಲೆಯ ರಸ್ತೆಯಿಂದ ಸಮೀಪದ ಭಾಗ್ಯನಗರಕ್ಕೆ ತೆರಳಲು ಈ ರಸ್ತೆ ಮಾರ್ಗವನ್ನು ಜನರನ್ನು ಅವಲಂಬಿಸಿದ್ದರು. ರೈಲ್ವೆ ಗೇಟ್ ಇರುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಈ ರೈಲ್ವೆ ಗೇಟ್‌ಗೆ ಬ್ರಿಡ್ಜ್ ಮಾಡಿಕೊಡಬೇಕು ಎಂದು ಜನರ ಬಹಳ ದಿನದ ಬೇಡಿಕೆ ಇತ್ತು. ಕೆಲವು ದಿನಗಳಹಿಂದೆ ಈ ರಸ್ತೆಗೆ ಅಂಡರ್ ಪಾಸ್ ಬ್ರಿಡ್ಜ್ ಮಂಜೂರಾಗಿತ್ತು. ರೈಲ್ವೆ ಇಲಾಖೆಯಿಂದ ಬ್ರಿಡ್ಜ್ ಕಾಮಗಾರಿ ಮಾಡಲು ರೈಲುಗಳನ್ನು ಬಂದ್ ಮಾಡಿ ಕೆಲಸ ಮಾಡುವ ಅವಶ್ಯಕತೆ ಇದ್ದ ಕಾರಣ ಕಾಮಗಾರಿ ಪೂರ್ಣ ಆಗಿರಲಿಲ್ಲ. ಸದ್ಯ ಜ.22ರಿಂದ ರೈಲ್ವೆ ಗೇಟ್ ನಂ.63ರ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ಕೆಲಸ ಆರಂಭವಾಗಲಿದೆ ಎಂದರು.ನಿತ್ಯ ಕೆಲಸದ ವೇಳೆ ರೈಲುಗಳ ಸಂಚಾರವನ್ನು ಸೌಥ್ ವೆಸ್ಟರ್ನ್ ರೈಲ್ವೆ ಇಲಾಖೆಯವರು ಸ್ಥಗಿತಗೊಳಿಸಿ ಕಾಮಗಾರಿ ಮಾಡಲು ಅವಕಾಶ ಮಾಡಿಕೊಡಿದ್ದಾರೆ. ಸುಮಾರು ₹4 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ಬ್ರಿಡ್ಜ್ ನಿರ್ಮಾಣವಾಗುತ್ತಿದೆ. ಈ ಮಾರ್ಗದಲ್ಲಿ ಕೆಲಸದ ಸಮಯದಲ್ಲಿ ಜನರು ಸಂಚರಿಸದೇ ಕೆಲಸಕ್ಕೆ ಅನುಕೂಲ ಮಾಡಿಕೊಡಲು ರೈಲ್ವೆ ಅಧಿಕಾರಿಗಳು ಜನರಲ್ಲಿ ಕೇಳಿಕೊಂಡಿದ್ದಾರೆ. ಕಾಮಗಾರಿ ವೇಳೆ ರಸ್ತೆ ಸಂಚಾರ ಹಾಗು ರೈಲ್ವೆ ಸಂಚಾರ ಸಹ ಸ್ಥಗೀತಗೊಳಿಸಲಾಗಿದೆ ಎಂದರು.ನಗರದ ಈ ರೈಲ್ವೆ ಗೇಟಿಗೆ ಅಂಡರ್ ಪಾಸ್ ಬ್ರಿಡ್ಜ್ ನಿರ್ಮಾಣ ಆಗುವುದರಿಂದ ಸಮೀಪದ ಭಾಗ್ಯನಗರಕ್ಕೆಸಂಚರಿಸಲು ಜನರಿಗೆ ಅನುಕೂಲ ಆಗಲಿದೆ. ಬ್ರಿಡ್ಜ್ ಇಲ್ಲದ ಕಾರಣ ಜನರು ರೈಲ್ವೆ ಹಳಿ ದಾಟಿ ರೈಲು ಬರುವುದನ್ನು ಸಹ ಲೆಕ್ಕಿಸದೇ ಸಂಚರಿಸುತ್ತಿದ್ದರು ಎಂದರು.

Share this article