ಕನ್ನಡಪ್ರಭ ವಾರ್ತೆ ಗುರುಮಠಕಲ್
ಸೈದಾಪುರ ಪಟ್ಟಣದ ವಿಶ್ವನಾಥ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ಅಯೋಧ್ಯೆ ಮಂತ್ರಾಕ್ಷತಾ ಕಳಶ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮನಲ್ಲಿರುವ ಅತ್ಯುತ್ತಮ ಗುಣಗಳಿಂದಾಗಿ ಆತನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಅವರಲ್ಲಿದ್ದ ಗುಣ ನಾವು ಅಳವಡಿಸಿಕೊಂಡರೆ ಜೀವನ ಪಾವನವಾಗುವುದು ಎಂದು ಆಶೀರ್ವಚನ ನೀಡಿದರು.
ಮಂತ್ರಾಕ್ಷತಾ ಕಳಶ ವಿತರಣಾ ಅಭಿಯಾನದ ಜಿಲ್ಲಾ ಸಂಯೋಜಕ ಮಲ್ಲರೆಡ್ಡಿ ಪಾಟೀಲ್ ಮಾತನಾಡಿ, ಜ.1ರಿಂದ ಜ.15ರ ತನಕ ದೇಶದಾದ್ಯಂತ ಮನೆ ಮನೆಗೆ ಮಂತ್ರಾಕ್ಷತೆ, ಕರಪತ್ರ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ವಿವಿಧ ವಾದ್ಯಗಳ ಮೂಲಕ ವಿಶೇಷ ಶೋಭಯಾತ್ರೆ:
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಬನದೇಶ್ವರ ವಾರದ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಕಾರ್ಯವಾಹಕ ಸೂಗಪ್ಪ ಮಂದಲ್, ನಿತಿನ್ ತಿವಾರಿ, ಹೋಬಳಿ ಪ್ರಮುಖ ಚಂದ್ರಕಾಂತ ತಿಮೋಜಿಕರ್, ಗುರುಮಠಕಲ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಡಿವಾಳಕರ್, ಪ್ರೇಮನಾಥ ಕದಂಬ, ಕೆ.ಬಿ. ಗೋವರ್ಧನ, ಕೆಪಿ ವಸಂತಕುಮಾರ, ರಾಕೇಶ ಕೋರೆ, ಅಂಬರೀಶ ನಾಯಕ್, ರವಿ ಪಾಟೀಲ್ ಸೇರಿ ಇತರರಿದ್ದರು.