ಕನ್ನಡಪ್ರಭ ವಾರ್ತೆ ನಿಪ್ಪಾಣಿ: ಗಡಿ ಪ್ರದೇಶದ ಪ್ರಮುಖ ನಗರ ನಿಪ್ಪಾಣಿಯಲ್ಲಿ ಸರ್ಕಾರಿ ಕಾಲೇಜು ಇಲ್ಲದ ಕಾರಣ ಬಡ ಮತ್ತು ರೈತರ ಮಕ್ಕಳು ಖಾಸಗಿ ಕಾಲೇಜುಗಳ ಶೈಕ್ಷಣಿಕ ವೆಚ್ಚವನ್ನು ಭರಿಸಲು ಸಾಧ್ಯವಾಗದೆ, ಶಿಕ್ಷಣಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾರೆ. ಇದನ್ನು ಗಮನಿಸಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಪ್ಪಾಣಿಯಲ್ಲಿ ಸರ್ಕಾರಿ ಪದವಿ ಕಾಲೇಜಿಗೆ ಮಂಜೂರು ನೀಡಲಾಗಿತ್ತು. ಅಕ್ಕೋಳ ರಸ್ತೆ ಬಸವೇಶ್ವರ ನಗರದಲ್ಲಿ ಈ ಕಾಲೇಜಿಗೆ 2 ಎಕರೆ ಭೂಮಿಯನ್ನು ಅನುಮೋದಿಸಲಾಗಿದೆ. ಈ ಸ್ಥಳದಲ್ಲಿ ಅತ್ಯಾಧುನಿಕ ಸುಸಜ್ಜಿತ ಸರ್ಕಾರಿ ಕಾಲೇಜು ನಿರ್ಮಿಸಲಾಗುವುದು. ಅದಕ್ಕಾಗಿ ಮೂರು ಕೋಟಿ ನಿಧಿಯನ್ನು ಮಂಜೂರು ಮಾಡಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.
ಈ ವೇಳೆ ಪ್ರಾಂಶುಪಾಲ ಡಾ.ವಿಶ್ವನಾಥ ಕಟ್ಟಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜಯವಂತ ಭಾಟಲೆ, ಮಾಜಿ ಉಪನಗರಾಧ್ಯಕ್ಷ ಸುನಿಲ ಪಾಟೀಲ, ರಾಜು ಗುಂಡೆಷ, ದತ್ತಾ ಜೋತ್ರೆ, ಗಜೇಂದ್ರ ತಾರಳೆ, ಸುಜಾತಾ ಕದಂ, ಸಂಗೀತಾ ಪರೀಟ, ಬಸವರಾಜ್ ಮುತ್ನಾಳ್ ಮುಂತಾದವರು ಉಪಸ್ಥಿತರಿದ್ದರು.