ನಿಡಗುಂದಿ ಪಟ್ಟಣದ ಕೇಂದ್ರ ಸ್ಥಾನದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಾಣ

KannadaprabhaNewsNetwork |  
Published : Nov 27, 2026, 03:00 AM IST
ನಿಡಗುಂದಿ | Kannada Prabha

ಸಾರಾಂಶ

ಪಟ್ಟಣದ ಕೇಂದ್ರ ಸ್ಥಾನದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಾಣವಾಗಲಿದ್ದು, ಬೇರೆಡೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಪ್ರಜಾಸೌಧವನ್ನು ನಿಡಗುಂದಿಯಿಂದ ಬೇರೆಡೆ ನಿರ್ಮಿಸಲಾಗುತ್ತದೆಂಬ ವದಂತಿಗಳು ಹರಡುತ್ತಿದ್ದು, ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಬಸವರಾಜ ವಂದಾಲ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ನಿಡಗುಂದಿ

ನಿಡಗುಂದಿ ಪಟ್ಟಣದ ಕೇಂದ್ರ ಸ್ಥಾನದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಾಣವಾಗಲಿದ್ದು, ಬೇರೆಡೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಪ್ರಜಾಸೌಧವನ್ನು ನಿಡಗುಂದಿಯಿಂದ ಬೇರೆಡೆ ನಿರ್ಮಿಸಲಾಗುತ್ತದೆಂಬ ವದಂತಿಗಳು ಹರಡುತ್ತಿದ್ದು, ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಬಸವರಾಜ ವಂದಾಲ ಮನವಿ ಮಾಡಿದರು.

ಪಟ್ಟಣದಲ್ಲಿ ಪ.ಪಂ ಅಧ್ಯಕ್ಷ ಜಂಬಕ್ಕ ದೇಸಾಯಿ ವಿಭೂತಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ಇಲ್ಲಸಲ್ಲದ ವಿಷಯಗಳನ್ನು ಸೃಷ್ಠಿಸಿ ಜನರ ಗಮನ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಶಾಸಕರ ಹಾಗೂ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಿಡಗುಂದಿ ತಾಲೂಕು ಜನರ ಆಸೆಯದಂತೆ ನಿಡಗುಂದಿಯಲ್ಲಿಯೇ ಪ್ರಜಾಸೌಧ ನಿರ್ಮಾಣ ಶತಸಿದ್ಧವಾಗಲಿದೆ ಎಂದರು.ಪ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಜು ರಾಠೋಢ ಮಾತನಾಡಿ, ನಿಡಗುಂದಿ ತಾಲೂಕು ಕೇಂದ್ರಕ್ಕೆ ಅಗತ್ಯ ಕಚೇರಿಗಳು ಒಂದೇ ಸೂರಿನಡಿ ದೊರೆಯುವ ನಿಟ್ಟಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಜಾಗ ಮೀಸಲಿಡಲಾಗಿತ್ತು. ಆದರೆ, ಕೆಲ ಕಾನೂನುಗಳು ತೊಂದರೆ ಪರಿಣಾಮ ಮೀಸಲಿಟ್ಟ ಜಾಗ ಕೈಬಿಟ್ಟಿದ್ದು, ಪಟ್ಟಣದಲ್ಲಿಯೇ ಈಗಾಗಲೇ ಕೆಲ ಜಾಗಗಳನ್ನು ಸಮೀಕ್ಷೆ ಮಾಡಲಾಗಿದೆ. ಶೀಘ್ರದಲ್ಲಿಯೇ ಅದರಲ್ಲಿ ಸೂಕ್ತ ಜಾಗವನ್ನು ಅಂತಿಮಗೊಳಿಸಲಾಗುವುದು. ಕಟ್ಟಡ ಕಾಮಗಾರಿಗೆ ಅಗತ್ಯ ಹಣ ಮಂಜೂರಾಗಿದ್ದು, ಜಾಗದ ಆಯ್ಕೆ ಪೂರ್ಣಗೊಂಡ ನಂತರ ಕಾಮಗಾರಿ ಆರಂಭವಾಗಲಿದೆ. ಪ್ರಜಾಸೌಧ ನಿಡಗುಂದಿಯಲ್ಲಿಯೇ ನಿರ್ಮಾಣವಾಗಲಿದ್ದು, ಸಾರ್ವಜನಿಕರು ಅತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಈ ಯೋಜನೆಗೆ ಸಂಭಂದಿಸಿದಂತೆ ಹರಡುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಕೋರಿದರು.ಪ.ಪಂ ಅಧ್ಯಕ್ಷೆ ಜಂಬಕ್ಕ ದೇಸಾಯಿ ವಿಭೂತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕರಿಯಪ್ಪ ಸಿಂದಗಿ, ಸದಸ್ಯರಾದ ಆರ್.ರಾಜು, ನಬಿರಸೂಲ್‌ ಬಾಣಕಾರ, ಶರಣಮ್ಮ ವಾರದ, ದಾವಲಮ್ಮ ಪೆಂಡಾರಿ ಸೇರಿದಂತೆ ಇತರರಿದ್ದರು.

ಪ್ರಜಾಸೌಧ ತಾಲೂಕು ಕೇಂದ್ರ ಬಿಟ್ಟು ಬೇರೆಡೆ ನಿರ್ಮಾಣವಾಗುತ್ತದೆ ಎನ್ನುವ ವಿರೋಧ ಪಕ್ಷದವರ ಸುಳ್ಳು ವದಂತಿಗಳನ್ನು ತಾಲೂಕು ಹೋರಾಟ ಸಮಿತಿ ಮುಖಂಡರು ನಂಬದೆ, ಶಾಸಕರು ನೀಡಿರುವ ಸ್ಪಷ್ಟ ಭರವಸೆಯನ್ನು ಪರಿಗಣಿಸಿ ಜನರಲ್ಲಿ ಗೊಂದಲ ನಿವಾರಿಸಬೇಕು. ನಿಡಗುಂದಿ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು.

-ಶರಣಮ್ಮ ವಾರದ, ಪ.ಪಂ ಸದಸ್ಯೆ ನಿಡಗುಂದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗುರಿ
ರೈತರಿಗೆ ಪ್ರತಿ ಟನ್‌ಗೆ ₹3,825 ರಂತೆ ಬಿಲ್ ಪಾವತಿ