ಅನಧಿಕೃತ ಬಡಾವಣೆ ನಿರ್ಮಾಣ: ಹುಡಾ ತೆರವು

KannadaprabhaNewsNetwork |  
Published : Jul 11, 2024, 01:30 AM IST
ತೆರವು | Kannada Prabha

ಸಾರಾಂಶ

ಸಾರ್ವಜನಿಕರು ನಿವೇಶನ ಖರೀದಿಸುವ ಪೂರ್ವದಲ್ಲಿ ಪ್ರಾಧಿಕಾರದಿಂದ ಮಾಹಿತಿ ಪಡೆದು ಅಧಿಕೃತ ಬಡಾವಣೆಯಲ್ಲಿನ ನಿವೇಶನ ಮಾತ್ರ ಖರೀದಿಸಬೇಕೆಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಜನರಿಗೆ ಮನವಿ ಮಾಡಿದೆ.

ಹುಬ್ಬಳ್ಳಿ

ಇಲ್ಲಿಯ ಬಿಡ್ನಾಳ ಗ್ರಾಮ ವ್ಯಾಪ್ತಿಯಲ್ಲಿ 4 ಜಮೀನಿನಲ್ಲಿ ನಿರ್ಮಿಸಿದ್ದ ಅನಧಿಕೃತ ಬಡಾವಣೆಯನ್ನು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಬುಧವಾರ ತೆರವುಗೊಳಿಸಿತು.

ಬಿಡ್ನಾಳ ಗ್ರಾಮದ ಸರ್ವೇ ನಂ.42/3 ಹಾಗೂ 42/4 ಕೃಷಿ ಜಮೀನನಲ್ಲಿ ಅನಧಿಕೃತ ಬಡಾವಣೆ ನಿರ್ಮಾಣದ ಕುರಿತು ಮಾಲೀಕರಿಗೆ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ನೋಟಿಸ್‌ ಜಾರಿ ಮಾಡಿತ್ತು. ಆದರೆ ಜಮೀನು ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಅನಧಿಕೃತ ಬಡಾವಣೆ ತೆರವುಗೊಳಿಸಲಾಗಿದೆ.

ಅದರಂತೆ ಇತರೆ ಪ್ರದೇಶದ ಕೃಷಿ ಜಮೀನನಲ್ಲಿ ತಲೆ ಎತ್ತಿರುವ ಬಡಾವಣೆಗಳಿಗೆ ನಿಯಮಾನುಸಾರ ನೋಟಿಸ್‌ ಜಾರಿಗೊಳಿಸಿ ತೆರವುಗೊಳಿಸಲು ಪ್ರಾಧಿಕಾರ ಕ್ರಮವಹಿಸಿದ್ದು, ಸಾರ್ವಜನಿಕರು ನಿವೇಶನ ಖರೀದಿಸುವ ಪೂರ್ವದಲ್ಲಿ ಪ್ರಾಧಿಕಾರದಿಂದ ಮಾಹಿತಿ ಪಡೆದು ಅಧಿಕೃತ ಬಡಾವಣೆಯಲ್ಲಿನ ನಿವೇಶನ ಮಾತ್ರ ಖರೀದಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ
ಕಡಿಮೆಯಾಗಲಿದೆ ಬೆಂಗಳೂರು - ದಾವಣರೆ ಮಧ್ಯೆ ಅಂತರ : ಎರಡೂ ಗಂಟೆ ಪ್ರಯಾಣ ಸಮಯ ಉಳಿತಾಯ