ಎರಡು ವರ್ಷ ಕಳೆದರೂ ಮುಗಿಯದ ಪಶು ಚಿಕಿತ್ಸಾಲಯ ನಿರ್ಮಾಣ ಕಾಮಗಾರಿ

KannadaprabhaNewsNetwork |  
Published : May 28, 2025, 12:30 AM IST
ಹಾರನಹಳ್ಳಿ ಇಲ್ಲಿನ ಪಶು ಚಿಕಿತ್ಸಾಲಯ ಹೊಸ  ಕಟ್ಟಡನಿರ್ಮಾಣಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ ಕಾಮಗಾರಿ ಮುಗಿಯದೆ ಹಳೆ ಪಶು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಉದ್ಭವವಾಗಿದೆ. | Kannada Prabha

ಸಾರಾಂಶ

ಸುಮಾರು 42 ಲಕ್ಷ ರು. ವೆಚ್ಚದಲ್ಲಿ ಪಶು ಇಲಾಖೆ ಕಟ್ಟಡ ಆರಂಭವಾಗಿ ಎರಡು ವರ್ಷವಾದರೂ ಹಣದ ಕೊರತೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಹೊಸ ಕಟ್ಟಡದ ನೆಲಹಾಸು ಹಾಗೂ ಕಟ್ಟಡ ಮೇಲಿನ ಕೊಠಡಿ ಕಾಮಗಾರಿ ಕೆಲಸಗಳು ಬಾಕಿ ಇದೆ. ಹಾಲಿ ಕಟ್ಟಿದ ರೂಮ್‌ನಲ್ಲಿ ಬಾಗಿಲು ಇಲ್ಲದೆ ಇರುವುದರಿಂದ ಕೆಲವು ಖಾಸಗಿ ವ್ಯಕ್ತಿಗಳು ಹಳೇಯ ವಸ್ತುಗಳನ್ನು ಹಾಕಿದರೂ ಹೇಳುವವರು, ಕೇಳುವರು ಇಲ್ಲದ ಸ್ಥಿತಿಯಾಗಿದೆ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಧೂಮಪಾನ, ಮದ್ಯಪಾನ ಮಾಡುವ ಕೇಂದ್ರವಾಗಿದೆ. ಇದು ಸರ್ಕಾರದ ಆಡಳಿತ ವ್ಯವಸ್ಥೆ ಅಂತ ರೈತಾಪಿ ಜನರು ಪಶುಸಂಗೋಪನೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹಾರನಹಳ್ಳಿ

ಹಾರನಹಳ್ಳಿಯ ಪಶು ಚಿಕಿತ್ಸಾಲಯ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ ಕಾಮಗಾರಿ ಮುಗಿಯದೆ ಹಳೇ ಪಶು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಉದ್ಭವವಾಗಿದೆ.

ಸುಮಾರು 42 ಲಕ್ಷ ರು. ವೆಚ್ಚದಲ್ಲಿ ಪಶು ಇಲಾಖೆ ಕಟ್ಟಡ ಆರಂಭವಾಗಿ ಎರಡು ವರ್ಷವಾದರೂ ಹಣದ ಕೊರತೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಹೊಸ ಕಟ್ಟಡದ ನೆಲಹಾಸು ಹಾಗೂ ಕಟ್ಟಡ ಮೇಲಿನ ಕೊಠಡಿ ಕಾಮಗಾರಿ ಕೆಲಸಗಳು ಬಾಕಿ ಇದೆ. ಹಾಲಿ ಕಟ್ಟಿದ ರೂಮ್‌ನಲ್ಲಿ ಬಾಗಿಲು ಇಲ್ಲದೆ ಇರುವುದರಿಂದ ಕೆಲವು ಖಾಸಗಿ ವ್ಯಕ್ತಿಗಳು ಹಳೇಯ ವಸ್ತುಗಳನ್ನು ಹಾಕಿದರೂ ಹೇಳುವವರು, ಕೇಳುವರು ಇಲ್ಲದ ಸ್ಥಿತಿಯಾಗಿದೆ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಧೂಮಪಾನ, ಮದ್ಯಪಾನ ಮಾಡುವ ಕೇಂದ್ರವಾಗಿದೆ. ಇದು ಸರ್ಕಾರದ ಆಡಳಿತ ವ್ಯವಸ್ಥೆ ಅಂತ ರೈತಾಪಿ ಜನರು ಪಶುಸಂಗೋಪನೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಾರನಹಳ್ಳಿ ಮುಖ್ಯರಸ್ತೆಯಲ್ಲಿರುವ ಪಶು ಇಲಾಖೆಯ ಹಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಇದನ್ನು ಮನಗಂಡ ಇಲಾಖೆ ಹೊಸ ಕಟ್ಟಡಕ್ಕೆ ಕಟ್ಟಿಸಲು ಆರಂಭ ಮಾಡಿದ್ದು, ಹಾರನಹಳ್ಳಿ ಎರೆಹಳ್ಳಿಗುತ್ತಿನಕೆರೆ ಮಾಕನಹಳ್ಳಿ ಹೆಬ್ಬಾರನಹಳ್ಳಿ ಕನ್ನಕಂಚೇನಹಳ್ಳಿ, ದೂಡ್ಡೇನಹಳ್ಳಿ ಸುತ್ತಮುತ್ತಲಿನ ಗ್ರಾಮದ ಜಾನುವಾರು ಹಾರನಹಳ್ಳಿ ಪಶು ಇಲಾಖೆಯ ನಿರ್ವಹಣೆಯಲ್ಲಿ ನಡೆಯುತ್ತಿದ್ದು, ಈ ಆರೋಗ್ಯ ಕೇಂದ್ರ ಜಾನುವಾರುಗಳಿಗೆ ಸಂಜೀವಿನಿ ಕೇಂದ್ರ ಇದ್ದ ಹಾಗೆ. ತಕ್ಷಣ ಪಶು ಇಲಾಖೆಯ ಕಾಮಗಾರಿಯನ್ನು ಮುಗಿಸಿ ಅನುಕೂಲ ಮಾಡಿಕೊಡುವಂತೆ ರೈತ ನಾಗರಾಜು ಅವರು ಆಗ್ರಹಿಸಿದ್ದಾರೆ.

ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರಿಗೆ ಗ್ರಾಮದ ಅಗತ್ಯ ಕಾಮಗಾರಿಗೆ ಮಾಡಿಸುವಷ್ಟು ಸಮಯ ಇಲ್ಲ, ತಕ್ಷಣ ಶಾಸಕರು ಈ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಿಸಿ ಹೊಸ ಕಟ್ಟಡಕ್ಕೆ ಕಾಮಗಾರಿ ಕಾಯ್ದು ನೋಡಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ