ಪೌಷ್ಟಿಕ ಆಹಾರ ಸೇವಿಸಿ, ರೋಗ ಮುಕ್ತ ಸಮಾಜ ನಿರ್ಮಿಸಿ: ಡಾ. ಬಸನಗೌಡ ಪವಾಡಿಗೌಡರ

KannadaprabhaNewsNetwork |  
Published : Sep 23, 2026, 02:30 AM IST
 ಹೈಕೋರ್ಟ್‌ ನಿರೀಕ್ಷಣಾ ಜಾಮೀನು  | Kannada Prabha

ಸಾರಾಂಶ

ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ರೋಗ ಮುಕ್ತ ಸಮಾಜವನ್ನಾಗಿ ನಿರ್ಮಿಸಬೇಕು.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ರೋಗ ಮುಕ್ತ ಸಮಾಜವನ್ನಾಗಿ ನಿರ್ಮಿಸಬೇಕೆಂದು ಶಾಂತಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಸನಗೌಡ ಪವಾಡಿಗೌಡರ ಹೇಳಿದರು.

ತಾಲೂಕಿನ ಸರ್ಜಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಾಂತಗೇರಿ ವಲಯ ಮಟ್ಟದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿ, ದೇಹದ ಆರೋಗ್ಯಕ್ಕೆ ಸಮತೋಲಿತ ಆಹಾರ ಅತ್ಯಗತ್ಯ, ಆಹಾರದ ಕೊರತೆ ಮಾತ್ರವಲ್ಲದೆ ಅತಿಯಾದ ಪೌಷ್ಟಿಕಾಂಶವು ದೇಹಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಹಾಗಾಗಿ ಅತೀಪೌಷ್ಟಿಕ, ಅಪೌಷ್ಟಿಕ ಆಹಾರಗಳೆರಡು ದೇಹಕ್ಕೆ ಅಪಾಯಕಾರಿಯಾಗಿದೆ ಎಂದರು.

ಆರೋಗ್ಯವಾಗಿರಲು ಪೌಷ್ಟಿಕಾಂಶವುಳ್ಳ ಆಹಾರ, ಹಿತ, ಮಿತವಾದ ಮತ್ತು ಸಮತೋಲಿತ ಆಹಾರ ಅತ್ಯಗತ್ಯ. ನಿಮ್ಮ ದಿನ ನಿತ್ಯದ ಆಹಾರದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು, ವಿಟಮಿನ್ ಮತ್ತು ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕೆಂದು ಎಂದರು.

ಅಂಗನವಾಡಿ ಮೇಲ್ವಿಚಾರಕಿ ಸುವರ್ಣ ಹಾನಾಪೂರ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ರಕ್ತ ಹೀನತೆ ಅಲಕ್ಷ ಮಾಡಬಾರದು ಆದ್ದರಿಂದ ರಕ್ತ ಹೀನತೆ ತಡೆಗಟ್ಟಲು ದಿನ ನಿತ್ಯ ಸೇವಿಸುವ ಆಹಾರದಲ್ಲಿ ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಮೊಳಕೆ ಕಾಳು, ಬೇಳೆ ಕಾಳು, ದ್ವಿದಳ ಧಾನ್ಯಗಳು, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಉತ್ತಮ ಪೌಷ್ಟಿಕಾಂಶಗಳು ದೊರೆಯಲಿದ್ದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಈ ವೇಳೆ ಸುವರ್ಣ ಚಿಗರಿ, ಸುಜಾತಾ ಗೌಡ್ರು, ರೇಣುಕಾ ನಾರಾಯಣಪುರ, ಶರಣಮ್ಮ ಚಿಣಿ, ಅಕ್ಕಮಹಾದೇವಿ ಹಳಗೇರಿ, ನಿಂಗಮ್ಮ ಮಾದರ, ಲಕ್ಷ್ಮಿಬಾಯಿ ಮಾದರ, ಶ್ರೀದೇವಿ ಸಜ್ಜನ, ಸುಶೀಲಾ ಶಾಂತಗೇರಿ, ನಾಗರತ್ನ ಲಕ್ಕುಂಡಿ, ಚೆನ್ನಮ್ಮ ಕಾಶಣ್ಣನವರ, ಸುನಂದಾ ಇಟಗಿ, ಅನ್ನಕ್ಕ ಚಿಣಿ, ಅಕ್ಕಮ್ಮ ಜೋಗಿ, ಸವಿತಾ ಪೂಜಾರ, ಭಾರತಿ ಹಿರೇಮಠ, ಬಸಮ್ಮ ಬೇವಿನಕಟ್ಟಿ, ಅಕ್ಷತಾ ಟೆಕ್ಕೆದ, ಮಹಾಂತೇಶ ಮಾದರ, ವಿಜಯಕುಮಾರ ತುಕೋಳ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೀಲಾ ಪೂಜಾರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಬೀದಿಪಾಲು ಮಾಡುವ ಆದೇಶ ಕೈಬಿಡಲು ಒತ್ತಾಯ
ಬಡವರ ಒಕ್ಕಲೆಬ್ಬಿಸಲು ಹುನ್ನಾರ: ತಿಮ್ಮಪ್ಪ ಎಂ.ಕೆ.