ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಸುಳ್ಳು: ಮಾಜಿ ಸಚಿವ ವಿ.ಸೋಮಣ್ಣ

KannadaprabhaNewsNetwork |  
Published : Dec 14, 2023, 01:30 AM IST
ಪೋಟೋ 6 : ಮಾಜಿ ಸಚಿವ ವಿ.ಸೋಮಣ್ಣ | Kannada Prabha

ಸಾರಾಂಶ

ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಸುಳ್ಳು ವಿಚಾರ, ಚುನಾವಣೆ ನಿಲ್ಲೋದು ಬಿಡೋದು ಅನ್ನುವುದಕ್ಕಿಂತ ಹೆಚ್ಚಾಗಿ ನನಗೆ ಅದರ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಮಾತನಾಡಿದ ಅವರು, ರಾಷ್ಟ್ರಕ್ಕೆ ಮೋದಿಯವರ ಅವಶ್ಯಕತೆ ಇದೆ. ದೇಶದ ಜನ ಅಲ್ಲ ಇಡೀ ಜಗತ್ತಿನ ಜನ ಇವತ್ತಿನ ಸಂದರ್ಭ, ಸನ್ನಿವೇಶಕ್ಕೆ ಮೋದಿಯವರ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ದೇಶದ ಪರಿಸ್ಥಿತಿ ಬೇರೆಯಾಗುತ್ತಿತ್ತು ಹಾಗಾಗಿ ದೇಶದ ಬಗ್ಗೆ ಚಿಂತನೆ ಮಾಡೋಣ ಎಂದರು.

ಇಡೀ ದೇಶಕ್ಕೆ ಮೋದಿಯವರ ಅವಶ್ಯಕತೆ ಬಹಳಷ್ಟಿದೆ । ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಮಾಜಿ ಸಚಿವರ ಮಾತು

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಸುಳ್ಳು ವಿಚಾರ, ಚುನಾವಣೆ ನಿಲ್ಲೋದು ಬಿಡೋದು ಅನ್ನುವುದಕ್ಕಿಂತ ಹೆಚ್ಚಾಗಿ ನನಗೆ ಅದರ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಮಾತನಾಡಿದ ಅವರು, ರಾಷ್ಟ್ರಕ್ಕೆ ಮೋದಿಯವರ ಅವಶ್ಯಕತೆ ಇದೆ. ದೇಶದ ಜನ ಅಲ್ಲ ಇಡೀ ಜಗತ್ತಿನ ಜನ ಇವತ್ತಿನ ಸಂದರ್ಭ, ಸನ್ನಿವೇಶಕ್ಕೆ ಮೋದಿಯವರ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ದೇಶದ ಪರಿಸ್ಥಿತಿ ಬೇರೆಯಾಗುತ್ತಿತ್ತು ಹಾಗಾಗಿ ದೇಶದ ಬಗ್ಗೆ ಚಿಂತನೆ ಮಾಡೋಣ ಎಂದರು.

ಸೂಕ್ತ ಸಮಯದಲ್ಲಿ ಉತ್ತರ:

ತುಮಕೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವುದನ್ನು ಕನಸಿನಲ್ಲಿಯೂ ಕಂಡಿಲ್ಲ. ಯೋಚನೆಯೂ ಮಾಡಿಲ್ಲ. ಚುನಾವಣೆ ನಿಲ್ಲೋದು ಬಿಡೋದು ಅನ್ನುವುದಕ್ಕಿಂತ ಹೆಚ್ಚಾಗಿ ಅದರ ಅವಶ್ಯಕತೆಯಿಲ್ಲ. ವೈಯಕ್ತಿಯ ರಾಜಕೀಯ ಇದೀಗ ಮಾತನಾಡಲಾರೆ, ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ ಎಂದರು.

ಸರ್ವಾಂಗೀಣ ಅಭಿವೃದ್ದಿಗೆ ಮೋದಿ ಬೇಕಾಗಿದೆ:

ಮೋದಿ ಸರ್ಕಾರ ಆರ್ಟಿಕಲ್ 370 ರದ್ದುಪಡಿಸಿತ್ತು. ಆದರೆ, ಅದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರೂ ಆಗ ಸುಪ್ರೀಂಕೋರ್ಟ್ ನಲ್ಲಿ ಏನಾಗುತ್ತದೋ ಎಂಬ ಆತಂಕ ಎಲ್ಲರಲ್ಲಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಒಳ್ಳೇಯ ತೀರ್ಪು ನೀಡಿದೆ. ದೇಶದ ಅಭೀವೃದ್ದಿಗೆ ಪೂರಕವಾಗಿದೆ. ಸರ್ವಾಂಗೀಣ ಅಭಿವೃದ್ದಿಗೆ ಮೋದಿಯವರು ಬೇಕಾಗಿದೆ ಎಂದರು.

ಸಿದ್ದಗಂಗಾ ಶ್ರೀಗಳ ಆಶೀರ್ವದಿಸಿದ್ದಾರೆ:

ನಾನೊಬ್ಬ ಆಶಾವಾದಿಯಾಗಿದ್ದೇನೆ. ಯಾವುದೇ ಕಾರಣಕ್ಕೂ ವಿಚಲಿತನಾಗಬೇಡ, ನೀನು ಮಾಡುವ ಕೆಲಸದಲ್ಲಿ ಒಳ್ಳೆಯದೆಷ್ಟು, ಕೆಟ್ಟದೆಷ್ಟೊ ಎಂದು ತೀರ್ಮಾನ ಮಾಡುವುದು ನೀನಲ್ಲ, ದೇವರು ಮಾಡುತ್ತಾನೆ. ಯಾರೋ ಏನೋ ಅನ್ನುತ್ತಾರೆಂದು ಭಾವಿಸಿ ಮನೆಯಲ್ಲಿ ಕುಳಿತುಕೊಂಡರೆ ನಿನ್ನಲ್ಲಿರುವ ಪ್ರತಿಭೆ ಸತ್ತು ಹೋಗುತ್ತದೆ. ಅದಕ್ಕೆ ಅವಕಾಶ ಕೊಡಬೇಡ ಎಂದು ಸಿದ್ದಗಂಗಾ ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದರು.

ಕೆಲ ಸ್ವಾಮೀಜಿಗಳಿಗೆ ನನ್ನನ್ನು ಕಂಡರೆ ಕೋಪ:

ನಾನು ಸತ್ಯ ಮಾತನಾಡುತ್ತೇನೆ ಅದಕ್ಕೆ ಕೆಲವು ಸ್ವಾಮೀಜಿಗಳಿಗೆ ನನ್ನನ್ನು ಕಂಡರೆ ಕೋಪ ಇದೆ. ಅದಕ್ಕೆ ನಾನೇನು ಮಾಡಲಿ, ನನ್ನ ನಡವಳಿಕೆಯೇ ಹಾಗೆ, ನನ್ನ ಜೀವನ ತೆರೆದ ಪುಸ್ತಕವಾಗಿದ್ದು ಒಂದು ಅಪಚಾರ ಮಾಡಿಲ್ಲ, ಸಂಸ್ಕಾರವನ್ನು ಬಿಟ್ಟು ಹೋಗಿಲ್ಲ. ನಾನು ಸ್ವಲ್ವ ಕಠಿಣವಾಗಿ ಮಾತಾಡುತ್ತೇನೆ, ಅದು ಕೆಲವರಿಗೆ ಹಿಡಿಸುವುದಿಲ್ಲ. ಸತ್ಯ ಹೇಳುತ್ತೇನೆ, ಕೆಲವರಿಗೆ ಕೋಪ ಬರುತ್ತದೆ, ವಾಸ್ತವಾಂಶ ಹೇಳುತ್ತೇನೆ, ಎಲ್ಲೊ ಒಬ್ಬ ಬೇರೆಯವರನ್ನು ಸೃಷ್ಟಿ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

ಸಮಾಜಕ್ಕೆ ಕೈಲಾದ ಸೇವೆ ನೀಡಿ:

ನನ್ನಲ್ಲಿರುವ ಸಂಪಾದನೆಯಲ್ಲಿ ದಾನ ಮಾಡುತ್ತಾ ಬರುತ್ತಿದ್ದೇನೆ, ಆದರೆ ಕೆಲವರು ಹಣ ಇದ್ದರೆ ಏನೋನೋ ಮಾಡುತ್ತಾರೆ. ನಾನು ಆ ಕ್ಯಾಟಗರಿಯವನಲ್ಲ. ನನ್ನ ಶ್ರೀಮತಿಯವರು ನನಗೆ ಗೊತ್ತಿಲ್ಲದೆ ಸಿದ್ದಗಂಗಾ ಮಠದಲ್ಲಿ ಗುರುಭವನ ನಿರ್ಮಿಸಿದ್ದಾರೆ. ದಾನ, ಧರ್ಮ ಮಾಡುವುದನ್ನು ಪ್ರಚಾರ ಮಾಡುತ್ತಾ ಹೋದರೆ ಅವರಂತ ದಡ್ಡ ಇನ್ನೊಬ್ಬರಿಲ್ಲ. ನಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ನೀಡಬೇಕಾಗಿರುವ ಎಲ್ಲರ ಕರ್ತವ್ಯ ಎಂದರು.

---

ಮಾಜಿ ಸಚಿವ ವಿ.ಸೋಮಣ್ಣ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!