ಕನ್ನಡಪ್ರಭ ವಾರ್ತೆ ಮಂಡ್ಯ
ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ ಹಾಗೂ ಡಿಎಪಿ ಗೊಬ್ಬರವನ್ನು ಅವುಗಳ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಪ್ರತಿ ವರ್ಷ ಸಾವಿರಾರು ಕೋಟಿ ರು. ಹಣವನ್ನು ಮಾರಾಟಗಾರರು, ಅಧಿಕಾರಿಗಳು, ರಾಜಕಾರಣಿಗಳು ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಯೂರಿಯಾ ರಸಗೊಬ್ಬರ ಗರಿಷ್ಠ ಮಾರಾಟ ಬೆಲೆ ಪ್ರತಿ ಚೀಲಕ್ಕೆ ೨೬೫ ರು. ಇದ್ದರೂ ರಾಜ್ಯದೆಲ್ಲೆಡೆ ೩೨೦ ರಿಂದ ೬೦೦ ರು. ವರೆಗೆ, ಬಿಎಪಿ ಗೊಬ್ಬರದ ಬೆಲೆ ಪ್ರತಿ ಚೀಲಕ್ಕೆ ೧೩೫೦ ರು. ಇದ್ದರೂ ಅದನ್ನು ೧,೪೫೦ ರಿಂದ ೨೧೦೦ ರು. ವರೆಗೆ ಮಾರಾಟ ಮಾಡಲಾಗುತ್ತಿದೆ. ಮೂಲದಲ್ಲಿ ಕ್ರಮ ಕೈಗೊಳ್ಳಬೇಕಿದ್ದ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತು ಅಕ್ರಮ ಮಾಡುತ್ತಿರುವ ಡೀಲರ್‌ಗಳಿಗೆ ಮತ್ತು ರಸಗೊಬ್ಬರ ಕಂಪನಿಗಳಿಗೆ ಬೆಂಬಲಿಸುತ್ತಾ ಬರುತ್ತಿದ್ದಾರೆ ಎಂದು ದೂರಿದರು.ಇಂತಹ ಅಕ್ರಮಗಳನ್ನು ನಿಲ್ಲಿಸಲು ಕೆಆರ್‌ಎಸ್ ಪಕ್ಷ ಸಹಾಯ ಮಾಡಿ ಎಂದು ಆರಂಭಿಸಿದೆ. ರೈತರಿಂದ ಬರುವ ದೂರುಗಳನ್ನು ಆದರಿಸಿ ಅಧಿಕಾರಿಗಳಿಗೆ ಒತ್ತಡ ಹೇರುವ ಮೂಲಕ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕೃಷಿ ಇಲಾಖೆ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ನಿರಂತರವಾಗಿ ಪತ್ರ ಮುಖಿಯನ್ನು ಕ್ರಮವಹಿಸುವಂತೆ ಒತ್ತಾಯ ಮಾಡುತ್ತಿದ್ದು ಕೃಷಿ ಇಲಾಖೆ ಮುಖ್ಯಸ್ಥರು ಕೂಡ ಈ ಅಕ್ರಮ ತಡೆಯುವ ನಿಟ್ಟಿನಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿರುವ ಕಾರಣ ಈ ಬಗ್ಗೆ ಕ್ರಮ ಕೈಗೊಳ್ಳಲು ಒಂದು ವಾರದ ಗಡುವು ನೀಡಿ ಮೇಲಧಿಕಾರಿಗಳಿಗೆ ಪತ್ರ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಗೋಷ್ಠಿಯಲ್ಲಿ ಅರುಣ್ ಕುಮಾರ, ಮಲ್ಲೇಶ, ಮಲ್ಲಯ್ಯ, ನಾಗರಾಜು, ಹರೀಶ ಇದ್ದರು.