ಸತತ ಪರಿಶ್ರಮ, ಪ್ರಯತ್ನ ಗುರಿ ಮುಟ್ಟಲು ಸಾಧ್ಯ

KannadaprabhaNewsNetwork |  
Published : Nov 23, 2025, 02:30 AM IST
4545 | Kannada Prabha

ಸಾರಾಂಶ

ನಿಮ್ಮ ತಲೆಯಲ್ಲಿರುವ ಆಲೋಚನೆಗಳ ಕುರಿತು ಯೋಚಿಸಿ, ಅದರಲ್ಲಿ ಒಂದನ್ನು ಆಯ್ಕೆ ಮಾಡಿ ನೋಟ್‌ ಮಾಡಿಟ್ಟಕೊಳ್ಳಬೇಕು. ಆ ಗುರಿಯನ್ನು ಮುಟ್ಟಲು ಏನೆಲ್ಲ ಪ್ರಯತ್ನ ಬೇಕೋ ಅದನ್ನು ಮಾಡಲೇಬೇಕು. ಗುರಿ ಮುಟ್ಟುವವರೆಗೆ ವಿರಮಿಸಬಾರದು ಎಂದು ಮಾಹಿ ಪ್ರಿಯಾಂಕಾ ಕೋಲ್ವೇಕರ್‌ ಹೇಳಿದರು.

ಹುಬ್ಬಳ್ಳಿ:

ಜೀವನದಲ್ಲಿ ಉತ್ತಮ ಗುರಿ ಹೊಂದಿ ಅದನ್ನು ಸಾಧಿಸಲು ಪ್ರಾಮಾಣಿಕತೆ, ಶ್ರದ್ಧೆಯಿಂದ ಸತತ ಪ್ರಯತ್ನ ಪಡಬೇಕು. ಹೀಗೆ ಮಾಡಿದರೆ ಮಾತ್ರ ನಮ್ಮ ಜೀವನದ ಗುರಿ ತಲುಪಲು ಸಾಧ್ಯ ಎಂದು ಮಿಸ್ ಕ್ವೀನ್‌ ಯುನಿವರ್ಸ್ -2024 ಮಾಹಿ ಪ್ರಿಯಾಂಕಾ ಕೋಲ್ವೇಕರ್‌ ಹೇಳಿದರು.

ನಗರದ ಇಂದಿರಾ ಗಾಜಿನ ಮನೆಯಲ್ಲಿ ಶನಿವಾರ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 7ನೇ ವರ್ಷದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಿಂಚನಾ ನಿಮ್ಮ ಜೀವನದಲ್ಲಿ ಗುರಿ ಹೇಗೆ ಸಾಧಿಸಿದಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಮ್ಮ ತಲೆಯಲ್ಲಿರುವ ಆಲೋಚನೆಗಳ ಕುರಿತು ಯೋಚಿಸಿ, ಅದರಲ್ಲಿ ಒಂದನ್ನು ಆಯ್ಕೆ ಮಾಡಿ ನೋಟ್‌ ಮಾಡಿಟ್ಟಕೊಳ್ಳಬೇಕು. ಆ ಗುರಿಯನ್ನು ಮುಟ್ಟಲು ಏನೆಲ್ಲ ಪ್ರಯತ್ನ ಬೇಕೋ ಅದನ್ನು ಮಾಡಲೇಬೇಕು. ಗುರಿ ಮುಟ್ಟುವವರೆಗೆ ವಿರಮಿಸಬಾರದು ಎಂದರು.

ವಿದ್ಯಾರ್ಥಿನಿಯೊಬ್ಬಳು ಐಎಎಸ್‌ ಅಧಿಕಾರಿಯಾಗಲು ಯಾವ ಕಡೆಗೆ ಗಮನ ಕೇಂದ್ರಿಕರಿಸಬೇಕು ಎಂದು ಕೇಳಿದಾಗ, ನಿಮ್ಮಲ್ಲಿ ಆತ್ಮವಿಶ್ವಾಸವಿರಬೇಕು. ದೈಹಿಕ, ಶಾರೀರಿಕ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ನಿಮ್ಮ ಸುತ್ತಲಿನ ಎಲ್ಲರ ಸಹಾಯ-ಸಹಕಾರ ಪಡೆದು ಅಧ್ಯಯನ ಮಾಡಿ, ಅಂತರ್ಜಾಲದಲ್ಲಿ ಎಲ್ಲ ವಿಷಯದ ಕುರಿತು ಮಾಹಿತಿ ಸಿಗುತ್ತದೆ. ಅದನ್ನೆಲ್ಲ ಅಧ್ಯಯನ ಮಾಡಿ ತಿಳಿದುಕೊಂಡರೆ ಯಶಸ್ವಿಯಾಗುತ್ತೀರಿ ಎಂದು ಮಕ್ಕಳಲ್ಲಿ ವಿಶ್ವಾಸ ತುಂಬಿದರು.

ವಿದ್ಯಾರ್ಥಿನಿ ಐಶ್ವರ್ಯಾ, ಮಿಸ್‌ ಕ್ವೀನ್‌ ಯುನಿವರ್ಸ್‌ ಆಗಲು ಏನೆಲ್ಲ ಮಾಡಬೇಕು ಎಂದು ಕೇಳಿದಾಗ, ಮಿಸ್‌ ಕ್ವೀನ್‌ ಯುನಿವರ್ಸ್‌ ಸಹ ಮಿಸ್‌ ಯುನಿವರ್ಸ್‌ ಸ್ಪರ್ಧೆ ತರಹವೇ ಇರುತ್ತದೆ. 49 ದೇಶಗಳ ಸ್ಪರ್ಧಿಗಳ ಜತೆ ಸ್ಪರ್ಧಿಸಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲ ಹಲವು ಫ್ಯಾಷನ್‌ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದೇನೆ. ಮಿಸ್‌ ಸೌತ್‌, ಮಿಸ್‌ ನಾರ್ಥ್ ಸೇರಿ ಹಲವಾರು ಸ್ಪರ್ಧೆಗಳನ್ನು ದಾಟಿ ದೇಶವನ್ನು ಪ್ರತಿನಿಧಿಸಿ ನಾನು ಮಿಸ್‌ ಯುನಿವರ್ಸ್‌ ಕ್ವೀನ್‌ ಕಿರಿಟ ಧರಿಸಿದೆ. ನೀವು ಹೊಂದಿದ ಗುರಿ ಸಾಧಿಸಿ ಎಂದು ವಿದ್ಯಾರ್ಥಿಗ‍ಳಿಗೆ ಶುಭ ಹಾರೈಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ