ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಬಿಝಟೆಕ್ ಎಕ್ಸ್ಟ್ರಾವೆಗಾನ್ಝಾ- ವಿದ್ವತ್- 2025 ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬೇಕಾದರೇ ಮೊದಲು ತಮ್ಮ ಗುರಿಯನ್ನು ನಿರ್ಧಾರ ಮಾಡಬೇಕು. ತಾವು ಏನಾಗಬೇಕೆಂಬುದು ಅವರ ನಿರ್ಧಾರವೇ ಆಗಿರುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಸದಾ ಸತತ ಪ್ರಯತ್ನದಲ್ಲಿ ತೊಡಗಿರಬೇಕು. ಅದು ಅವರ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಎಂದರು.
ವಿದ್ವತ್ ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧೆಗಳು ಇರುವುದರಿಂದ ಅದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ತೋರ್ಪಡಿಸಬೇಕಾಗುತ್ತದೆ. ನೀವು ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು. ಸಂವಹನ ಕೌಶಲವೆಂದರೆ ಕೇವಲ ಮಾತನಾಡುವುದಲ್ಲ. ನಮ್ಮ ಅಧ್ಯಯನ, ನಾವು ಹೇಗೆ ವಿವರಿಸಬೇಕು ಎಂಬ ಜ್ಞಾನ, ಇತರರಿಗೆ ಹೇಗೆ ಅರ್ಥಮಾಡಿಸಬೇಕು ಎಂಬುದು ಸಂವಹನ ಕೌಶಲವೇ ಆಗಿದೆ ಎಂದರು.ವಿದ್ಯಾರ್ಥಿಗಳು ಐದು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುರಿ, ಪ್ರಯತ್ನ, ನಿರಂತರ ಕೆಲಸ, ಸತತ ಅಭ್ಯಾಸ, ವಿಫಲಗಳ ಬಗ್ಗೆ ಯೋಚಿಸದೇ ಇರುವುದು. ಇವುಗಳ ಅಳವಡಿಕೆಯಿಂದ ನೀವು ಏನನ್ನಾದರೂ ಸಾಧಿಸಬಹುದು ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ. ವಿಶ್ವನಾಥ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ. ನಾಗರಾಜು, ವಿದ್ವತ್ ಸಂಚಾಲಕಿ ಎನ್. ಗೀತಾ, ಅಧ್ಯಾಪಕ ಸಂಯೋಜಕರಾದ ಎಂ.ಟಿ. ಶ್ರುತಿ, ವಿ. ಚಂದನ್ ಇದ್ದರು. ಸುಶ್ಮಿತಾ ಪ್ರಾರ್ಥಿಸಿದರು. ಡಿ.ಆರ್. ಕಿರಣ ನಿರೂಪಿಸಿದರು. ಸುಹೇಬಿಯಾ ಸ್ವಾಗತಿಸಿದರು. ಮೊಹಮ್ಮದ್ ಸಫ್ರೀದ್ ವಂದಿಸಿದರು.
- ಪಿ.ವಿಶ್ವನಾಥ್, ಕಾರ್ಯದರ್ಶಿ, ವಿದ್ಯಾವರ್ಧಕ ಸಂಘ