ಏಕಾಗ್ರತೆ ಪರಿಶ್ರಮದಿಂದ ನಿರಂತರ ಯಶಸ್ಸು

KannadaprabhaNewsNetwork |  
Published : Jan 11, 2026, 01:30 AM IST
್ಿ | Kannada Prabha

ಸಾರಾಂಶ

ಏಕಾಗ್ರತೆ ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತೆ ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುಏಕಾಗ್ರತೆ ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತೆ ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅಭಿಪ್ರಾಯಪಟ್ಟರು. ಅವರು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ 33 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜೀವಂತ ದುರ್ಗಾಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾತಾಪಿತೃಗಳು ಅನಕ್ಷರಾದರೂ ಮಕ್ಕಳು ಜೀವನವನ್ನು ಸಮರ್ಥವಾಗಿ ಎದುರಿಸುವ ಧೈರ್ಯವನ್ನು ಕಲಿಸಿಕೊಟ್ಟರು. ಇಂತಹ ಸ್ವಾಭಿಮಾನದ ಛಲವೇ ಬಾಲ್ಯದಲ್ಲಿ ಬೆಳೆದ ನನಗೆ ತದನಂತರದಲ್ಲಿ ನನಗೆಲ್ಲವನ್ನೂ ಕೊಟ್ಟು ಪೋಷಿಸಿದ ಸಮಾಜಕ್ಕೆ ಕೃತಜ್ಞತೆಯಿಂದ ಮರುಪಾವತಿಸುವ ವಿವೇಚನೆಯನ್ನು ಜಾಗೃತಗೊಳಿಸಿತು ಎಂದರು.ಕೊಳೆಗೇರಿಯಲ್ಲಿ ಬೀದಿಬದಿಯಲ್ಲಿ ಹಣ್ಣು ಮಾರುವ ತಂದೆತಾಯಿಗಳಿಗೆ ಜನಿಸಿದ ನಾನು ಏಕಾಗ್ರತೆಯಿಂದ ಪರಿಶ್ರಮ ವಹಿಸಿದ್ದರಿಂದ ಕ್ಯಾನ್ಸರ್‌ ತಜ್ಞೆಯಾಗಿ ಯಶಸ್ಸು ಪಡೆಯಲು ಸಾಧ್ಯವಾಯಿತು. ಕರ್ಮಯೋಗದ ಸಿದ್ಧಾಂತವನ್ನು ಶ್ರೀಕೃಷ್ಣ ಪರಮಾತ್ಮನಿಂದ ಕಲಿತರೆ ಬದುಕಿನ ಪಯಣದಲ್ಲಿ ಎದುರಾದ ಹಲವು ಸನ್ನಿವೇಶಗಳಿಂದ ಧೃತಿಗೆಡದೆ ಏಕಾಗ್ರತೆಯಿಂದ ಬದುಕುವ ಜೀವನ ಕಲೆಯನ್ನು ಸ್ವಾಮಿ ವಿವೇಕಾನಂದರ ಬದುಕು ನನಗೆ ಕಲಿಸಿತು ಎಂದರು.ದಾರಿದ್ರ್ಯದ ಮಡುವಿನಲ್ಲಿ ಹೋರಾಡುತ್ತಾ ಸಾಗಿ ಬದುಕಿನ ಸಾರ್ಥಕತೆಯನ್ನು ನಮ್ಮದಾಗಿಸಿಕೊಂಡ ನಮ್ಮ ಕುಟುಂಬದ ಜೀವನವು ಘನತೆವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಂದಲೂ ಶ್ಲಾಘಿಸಲ್ಪಟ್ಟಿದೆ. ಜೀವನ ಹೋರಾಟದ ನಮ್ಮ ಬದುಕನ್ನುಜೀವನಾಂದೋಲನವಾಗಿ ಪರಿವರ್ತಿಸಲು ಸಹಕಾರಿಯಾದ ಭಗವಂತನಿಗೆ ಮತ್ತು ಮಾತಾಪಿತೃಗಳಿಗೆ ನಾನು ಋಣಿ ಎಂದರು.ಮುಖ್ಯ ಅತಿಥಿಯಾಗಿ ಅರ್ಥಶಾಸ್ತ್ರಜ್ಞ ಹಾಗೂ ಕ್ರಿಯಾಶೀಲ ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿರವರು ಮಾತನಾಡಿ, ಸ್ತ್ರೀ ಶಿಕ್ಷಣ, ಸುರಕ್ಷೆ ಮತ್ತು ಅವರ ಪರಿಶ್ರಮಕ್ಕೆ ತಕ್ಕ ಗೌರವವನ್ನು ನೀಡುವುದು ಸಮಾಜದ ಮಾನವೀಯ ದೃಷ್ಟಿಕೋನವಾಗಬೇಕಿದೆ ಎಂದರು.ಮಕ್ಕಳಲ್ಲಿ ಬುದ್ಧಿಯ ಅರಿವು ಮೂಡುವುದಕ್ಕೆ ಮೊದಲೇ ಧನಾತ್ಮಕ ಚಿಂತನೆಯನ್ನು ಬಿತ್ತಬೇಕು. ಸಮಾಜವನ್ನು ತೆರೆದ ಹೃದಯದಿಂದ ವೀಕ್ಷಿಸಿದಾಗ ನಾವು ಅರಿಯಬಹುದಾದ ಸತ್ಯವೇನೆಂದರೆ ಅಧಿಕಾರಿಯ ಮಗುವು ಅಧಿಕಾರಿಯಾಗುವುದಕ್ಕಿಂತ ಆಟೋಚಾಲಕನ ಮಗು ಅಧಿಕಾರಯಾದದ್ದು ನೈಜ ಸತ್ಯ. ಅಂತೆಯೇ ಸ್ತ್ರೀಯರಿಗಿಂದು ಬೇಕಿರುವುದು ಕೇವಲ ತಾತ್ಕಾಲಿಕ ಶ್ಲಾಘನೆಯಲ್ಲ. ಬದಲಾಗಿಅವರ ಬದುಕಿಗೆ ಪ್ರೇರಣೆ ಪ್ರೋತ್ಸಾಹಗಳನ್ನು ನೀಡುವುದು ಪುರುಷರ ನಡವಳಿಕೆಯಲ್ಲಿ ಕಂಡುಬಂದಲ್ಲಿಅದು ನಿಜಾರ್ಥದಲ್ಲಿಜೀವಂತದುರ್ಗಾಪೂಜೆಯಾಗುತ್ತದೆ ಎಂದುಅಭಿಪ್ರಾಯಪಟ್ಟರು.ಬೆಂಗಳೂರಿನ ಖ್ಯಾತಉದ್ದಿಮೆದಾರರೂ ಸಮಾಜ ಸೇವಕರೂ ಆದ ವೀರಭದ್ರ ಬ್ಯಾಡಗಿರವರು ಹಾಗೂ ಶಿಲ್ಪಾ ಬ್ಯಾಡಗಿರವರುಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶ್ರಮದ ಸೇವಾಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ತುಮಕೂರು ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಹಾಗೂ ರಸ್ತೆಗಳಲ್ಲಿ ಭಿಕ್ಷೆಬೇಡುವ ಸುಮಾರು 225 ದೀನ ದಲಿತ ತಾಯಂದಿರನ್ನು ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಿ ಆಶ್ರಮಕ್ಕೆ ಆಹ್ವಾನಿಸಿ ಅವರನ್ನು ಸಾಕ್ಷಾತ್ ಶ್ರೀಶಾರದಾದೇವಿ ಎಂದೇ ವೇದೋಕ್ತವಾಗಿ ಪೂಜಿಸಿ, ಶ್ರೀ ಲಲಿತಾಸಹಸ್ರನಾಮ ಪಾರಾಯಣದೊಂದಿಗೆ ವಸ್ತ್ರದಾನ, ಅನ್ನದಾನ ಮತ್ತು ಧಾನ್ಯದಾನಗಳೊಂದಿಗೆ ಸತ್ಕರಿಸಲಾಯಿತು. ಶ್ರೀಹರಿಶಾಸ್ತ್ರಿ ಮತ್ತು ವಿವೇಕಾನಂದ ಯುವಕ ಸಂಘದ ಶ್ರೀನಿಧಿರವರು ವೇದಘೋಷ ನೆರವೇರಿಸಿದರು. ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದಜೀ, ಸ್ವಾಮಿ ಧೀರಾನಂದಜೀ, ಸ್ವಾಮಿ ಪರಮಾನಂದಜೀ ಹಾಗೂ ಚಿತ್ರದುರ್ಗರಾಮಕೃಷ್ಣ ವಿವೇಕಾನಂದಆಶ್ರಮದ ಅಧ್ಯಕ್ಷರಾದ ಸ್ವಾಮಿ ಬ್ರಹ್ಮನಿಷ್ಠಾನಂದಜೀರವರು ಭಗವನ್ನಾಮ ಸಂಕೀರ್ತನೆಯನ್ನು ನೆರವೇರಿಸಿಕೊಟ್ಟರು. ಸ್ವಾಮಿ ವೀರೇಶಾನಂದಜೀರವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪ್ರೊ.ರಮ್ಯ ವಿ.ಕಲ್ಲೂರ್‌ರವರು ನಿರೂಪಿಸಿ, ಸ್ವಾಮಿ ಪರಮಾನಂದಜೀರವರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ