ಗುತ್ತಿಗೆದಾರರು ಪುರಸಭೆ ನಿಯಮದಂತೆ ಸುಂಕ ವಸೂಲಿ ಮಾಡಿ

KannadaprabhaNewsNetwork |  
Published : Mar 17, 2026, 01:30 AM IST
16  | Kannada Prabha

ಸಾರಾಂಶ

ದೇವನಹಳ್ಳಿ: ಪುರಸಭೆ ವ್ಯಾಪ್ತಿಯ ನೆಲವಳಿ ಹಾಗೂ ಖಾಸಗಿ ಬಸ್ ನೆಲವಳಿ ಬಿಡ್ಡುದಾರರು ಪುರಸಭೆಯ ನಿಯಮಾವಳಿಗಳಂತೆ ಸುಂಕ ವಸೂಲಿ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ ತಿಳಿಸಿದರು

ದೇವನಹಳ್ಳಿ: ಪುರಸಭೆ ವ್ಯಾಪ್ತಿಯ ನೆಲವಳಿ ಹಾಗೂ ಖಾಸಗಿ ಬಸ್ ನೆಲವಳಿ ಬಿಡ್ಡುದಾರರು ಪುರಸಭೆಯ ನಿಯಮಾವಳಿಗಳಂತೆ ಸುಂಕ ವಸೂಲಿ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಮಾತನಾಡಿದ ಅವರು, ದೇವನಹಳ್ಳಿ ಪುರಸಭೆ ವ್ಯಾಪ್ತಿಯ ಹೊಸ ಹಾಗೂ ಹಳೆ ಬಸ್‌ ನಿಲ್ದಾಣ, ಪುರಸಭೆ ಕಚೇರಿ ಆವರಣ, ತಾಲೂಕು ಕಚೇರಿ ಆವರಣ ಬುಧವಾರ ಹಾಗೂ ಭಾನುವಾರ ಸಂತೆ ಹೊರತುಪಡಿಸಿ ನಿಲುಗಡೆಯಾಗಿರುವ ಪ್ಯಾಸೆಂಜರ್ ವಾಹನ, ಶುಲ್ಕವನ್ನು ಹಾಗೂ ಇಂದಿರಾ ಕ್ಯಾಂಟಿನ್ ಪಕ್ಕ ಹೊಸದಾಗಿ ನಿರ್ಮಿಸಿರುವ ಮುಚ್ಚು ಹರಾಜು ಕಟ್ಟೆಗಳು ಪುಟ್‌ಬಾತ್ ನೆಲವಳಿ, ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಭಾಗವಹಿಸಿ ಬಿಡ್ಡುಪಡೆದವರು ಪುರಸಭೆಯ ನಿಯಮಾವಳಿಗಳ ಪ್ರಕಾರ ಸುಂಕ ವಸೂಲಿ ಮಾಡಬೇಕು. ಹಾಗೂ ಮುಚ್ಚು ಹರಾಜು ಕಟ್ಟೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮೀಸಲಿಟ್ಟಿರುವ ಜಾಗಕ್ಕೆ ಯಾವುದೇ ಸುಂಕ ವಸೂಲಿ ಮಾಡುವಂತಿಲ್ಲ ಎಂದು ಹೇಳಿದರು.

ಕಳೆದ ಬಾರಿ ನೆಲವಳಿ ೧೨. ೧೮ ಲಕ್ಷ ಹರಾಜಾಗಿತ್ತು. ಈ ಬಾರಿ ಸುನಿತ ಅವರು ೧೬ ಲಕ್ಷ ಹರಾಜು ಕೂಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಪುರಸಭೆ ಹೆಚ್ಚಾಗಿ ಆದಾಯ ಬಂದಿದೆ. ಖಾಸಗಿ ಬಸ್‌ ನೆಲವಳಿ ಸುಂಕ ಕಳೆದ ಬಾರಿ ೩.೧೬ ಲಕ್ಷ ಹರಾಜಾಗಿತ್ತು.ಆದರೆ ಈ ಬಾರಿ ನಾಗೇಂದ್ರ ಅವರು ೨.೧೦ ಲಕ್ಷಕ್ಕೆ ಹರಾಜು ಕೂಗಿದ್ದು ಕಳೆದ ಸಾಲಿಗಿಂತ ಈ ಬಾರಿ ಕಡಿಮೆ ಹಣ ಕೂಗಿರುವುದರಿಂದ ಪುರಸಭೆ ಆಡಳಿತಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಇಲ್ಲವಾದರೆ ಮರು ಟೆಂಡರ್ ಕರೆಯಲಾಗುವುದು ಎಂದರು.

ಸಭೆಯಲ್ಲಿ ಪುರಸಭೆ ಕಂದಾಯ ಅಧಿಕಾರಿ ರಮೇಶ್‌ಬಾಬು, ಕಂದಾಯ ನಿರೀಕ್ಷಕ ಎ.ಮಂಜುನಾಥ್, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಮಂಜಪ್ಪ, ಪ್ರಥಮ ದರ್ಜೆ ಸಹಾಯಕ ಶ್ರೀನಿವಾಸ್, ಮಂಜುನಾಥ್, ಕರವಸೂಲಿಗಾರ ದೀಕ್ಷಿತ್ ಇತರರಿದ್ದರು.

೧೬ ದೇವನಹಳ್ಳಿ ಚಿತ್ರಸುದ್ದಿ: ೦೧ ದೇವನಹಳ್ಳಿ ಪುರಸಭೆ ಸಭಾಂಗಣದಲ್ಲಿ ನೆಲವಳಿ ಹಾಗು ಖಾಸಗಿ ಬಸ್ ನಿಲುಗಡೆ ನೆಲವಳಿ ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ಜಾರಿ ಸಂಬಂಧ ತೀರ್ಮಾನ ಕೈಗೊಳ್ಳಿ
ಪುಸ್ತಕ ಓದುವ ಸಂಸ್ಕೃತಿಗೆ ಉತ್ತೇಜನ ಅಗತ್ಯ