ದಾಬಸ್‍ಪೇಟೆ: ಪ್ಲಾಸ್ಟಿಕ್ ಬಳಕೆ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ. ಭೂಮಿಯಲ್ಲಿ ಕರಗದ ವಿಷಕಾರಿ ಹಾನಿಕಾರಕ ವಸ್ತುವಾಗಿ ಗೊತ್ತಿಲ್ಲದೆ ನಮ್ಮದೇಹ ಸೇರಿ ಅಂತರ್ಜಲ ವಿಷವಾಗುತ್ತಿದೆ. ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಅವಶ್ಯಕವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ತಿಳಿಸಿದರು.
ಜಾಗೃತಿ ಅವಶ್ಯ:
ಸ್ವಚ್ಛತಾ ಕಾರ್ಯ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ ಮತ್ತು ಮುಗಿಯುವಂತದ್ದಲ್ಲ. ಅದು ನಿರಂತರವಾಗಿ ನಾವು ಸ್ವಯಂ ಇಚ್ಚೆಯಿಂದ ಕೈಗೊಳ್ಳಬೇಕಾದ ಪ್ರಕ್ರಿಯೆ. ಆ ದಿಸೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಆಗಿಂದಾಗ್ಗೆ ತಾಲೂಕು, ಹೋಬಳಿ ಹಂತದ ಅಧಿಕಾರಿಗಳು, ಎನ್ ಜಿಒಗಳು, ಸ್ವಯಂ ಸೇವಕರ ಜೊತೆಗೂಡಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸುತ್ತಮುತ್ತಲ ನಾಗರಿಕರು ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಎಲ್ಲರ ಸಹಕಾರ ಅತ್ಯಗತ್ಯ:
ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು, ಸಿಐಎಸ್‌ಎಫ್ ತಂಡದವರು ಜೊತೆ ಜೊತೆಯಾಗಿ ಸ್ವಚ್ಛತೆಯ ಕಾರ್ಯಗಳಲ್ಲಿ ಭಾಗಿಯಾಗಿರುವುದು ಉತ್ತಮ ಬೆಳವಣಿಗೆ ಮತ್ತು ಇತರರಿಗೂ ಮಾದಿಯಾದ ಕೆಲಸ. ಸ್ವಚ್ಛತಾ ಅಭಿಯಾನ ಯಶಸ್ವಿಯಾಗಬೇಕಾದರೆ ಸಮಸ್ತ ನಾಗರಿಕರ ಸಹಕಾರ ಅತ್ಯಗತ್ಯ. ಅದಕ್ಕೆ ಇಂದು ನಮ್ಮೊಂದಿಗೆ ಕೈಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು.ಅಭಿವೃದ್ಧಿಗೆ ಸಹಕಾರ:
ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾತನಾಡಿ, ಈಗಾಗಲೇ ನಮ್ಮ ಜಿಲ್ಲಾಧಿಕಾರಿಗಳು ಶಿವಗಂಗೆ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕು, ಸ್ವಚ್ಛತೆಯನ್ನು ಕಾಪಾಡಬೇಕು ಎನ್ನುವ ಗುರಿಯನ್ನು ಹೊಂದಿ ಕಳೆದ ಎರಡೂ ಮೂರು ತಿಂಗಳಿಂದ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದಾರೆ. ನಾವು ಸಹ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಸ್ವಚ್ಛ ಸುಂದರ ಶಿವಗಂಗೆಯ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.ಪ್ರತಿಯೊಬ್ಬರ ಕರ್ತವ್ಯ:
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಸ್ವಚ್ಛತೆ ಎನ್ನುವುದು ಯಾರೋ ಒಬ್ಬರಿಗೆ ಅಥವಾ ಯಾವುದೋ ಒಂದು ವರ್ಗಕ್ಕೆ ಸೀಮಿತವಾದ ಕಾರ್ಯವಲ್ಲ. ಅದು ಪ್ರತಿಯೊಬ್ಬರ ಕರ್ತವ್ಯ. ಯಾರದೋ ಒತ್ತಾಯಕ್ಕೆ, ಯಾರದೋ ತೋರಿಕೆಗೆ ಮಾಡುವ ಬದಲು ಪ್ರತಿಯೊಬ್ಬರೂ ಸ್ವಇಚ್ಛೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದಾಗ ಮಾತ್ರ ಅದರ ಆಶಯ ಸಂಪೂರ್ಣ ಯಶಸ್ಸು ಕಾಣುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ಶಿವಗಂಗೆ ಬೆಟ್ಟವನ್ನು ಸ್ವಚ್ಛತೆ ಮಾಡುವ ಗುರಿ ಹೊಂದಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅವಶ್ಯ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಶಶಿಧರ್, ಧಾರ್ಮಿಕ ಧತ್ತಿ ಇಲಾಖೆಯ ಇಒ ಬೃಂದಾ, ಪಶುಸಂಗೋಪನಾ ಇಲಾಖೆಯ ಡಾ.ಶಿವರಾಮ್, ಕೃಷಿ ಇಲಾಖೆಯ ರಾಘವೇಂದ್ರ, ಪಿಡಿಒಗಳಾದ ಗಿರೀಶ್ ಕುಮಾರ್, ರವಿಶಂಕರ್, ಚಿರಂಜೀವಿ, ಕಂದಾಯ ಇಲಾಖೆಯ ಸಿಬ್ಬಂದಿ, ಸಿಐಎಸ್‌ಎಫ್ ತಂಡದ 400ಕ್ಕೂ ಹೆಚ್ಚು ಸಿಬ್ಬಂದಿ, ಜೈನ್ ಕಾಲೇಜಿನ ಎನ್‍ಎಸ್‍ಎಸ್ ಶಿಬಿರದ ವಿದ್ಯಾರ್ಥಿಗಳು ಸೇರಿದಂತೆ 800ಕ್ಕೂ ಹೆಚ್ಚು ಜನರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕೋಟ್...............ಶಿವಗಂಗೆ ಬೆಟ್ಟ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣವೂ ಆಗಿದೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಹಾಗೆಯೇ ಇಲ್ಲಿ ನಡೆಯುವ ಧಾರ್ಮಿಕ ಉತ್ಸವಗಳು, ಜಾತ್ರೆಗಳಿಂದ ಭಕ್ತರ ಹೆಚ್ಚಾಗಿಯೇ ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತರಲ್ಲಿಯೂ ಪ್ಲಾಸ್ಟಿಕ್ ಬಳಸಬಾರದೆಂಬ ಅರಿವು ಮೂಡಿಸುವುದು ಕೂಡ ಪ್ರತಿ ನಾಗರಿಕರ ಕರ್ತವ್ಯ. ಯಾವುದೇ ಕಾರ್ಯಕ್ಕೂ ಸಾಮೂಹಿಕ ಸಾರ್ವಜನಿಕರ ಸಹಕಾರ ಅಗತ್ಯವಾಗಿರಬೇಕು.
-ಬಸವರಾಜು, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಪೋಟೋ 2 :
ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ ಸಿಐಎಸ್‍ಎಫ್, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಶಿವಗಂಗೆ ಶೀರ್ಷಿಕೆಯಡಿ ಸ್ವಚ್ಛತಾ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ಚಾಲನೆ ನೀಡಿದರು. ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಧಾರ್ಮಿಕ ಧತ್ತಿ ಇಲಾಖೆಯ ಇಒ ಬೃಂದಾ ಇತರರು ಪಾಲ್ಗೊಂಡಿದ್ದರು.