ಕನ್ನಡಪ್ರಭ ವಾರ್ತೆ ಕೋಲಾರಜಾಗತಿಕ ತಾಪಮಾನ ನಿಯಂತ್ರಣ ಮಾಡಲು ನೂರು ವರ್ಷಗಳ ಹಿಂದಿನಿಂದಲೂ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಬಾಲಕ ಮತ್ತು ಬಾಲಕಿಯರಿಗೆ ಪರಿಸರದ ಅಭಿವೃದ್ದಿಗೆ ಪೂರಕವಾದ ಸೇವಾ ಕಾರ್ಯ ಕೈಗೊಂಡಿದೆ ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ರಮೇಶ್ ತಿಳಿಸಿದರು. ನಗರದ ಹಳೇ ಬಸ್ ನಿಲ್ದಾಣದಲ್ಲಿ ಆವರಣದಲ್ಲಿ ವಂಶೋಧಯ ಆಸ್ವತ್ರೆ, ನಗರಸಭೆ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಹಾಗೂ ರೋಟರಿ ಕೋಲಾರ ನಂದಿನಿಯಿಂದ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾಲಿನ್ಯಕ್ಕೆ ಮಾನವನೇ ಕಾರಣ
ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಮಾತನಾಡಿ, ವಿದ್ಯಾರ್ಥಿಗಳು ಮತ್ತು ನಗರ ವಾಸಿಗಳು ತಮ್ಮ ಹುಟ್ಟು ದಿನದ ನೆನಪಿಗಾಗಿ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸವನ್ನು ರೂಡಿಸಿಕೊಂಡು ಪರಿಸರ ಅಭಿವೃದ್ದಿಗೆ ಸಹಕರಿಸಬೇಕು , ತಮ್ಮ ಮನೆಗಳ ಸಮೀಪ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಸಮಾಜ ಸೇವೆಯನ್ನು ಮಾಡಬೇಕು ಎಂದು ತಿಳಿಸಿದರುವಂಶೋಧಯ ಆಸ್ವತ್ರೆಯ ವೈದ್ಯ ಡಾ.ಅರವಿಂದ್, ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ, ನೀರಾವರಿ ಹೋರಾಟಗಾರ ರಾಜೇಶ್, ಸ್ಕೌಟ್ ಬಾಬು, ವಂಶೋಧಯ ಆಸ್ವತ್ರೆಯ ಈ ಯೋಜನೆಯ ಸಂಚಾಲಕಿ ಪವಿತ್ರ, ಜಿಲ್ಲಾ ಖಚಾಂಚಿ ಉಮೆಶ್, ಅರಣ್ಯ ಇಲಾಖೆಯ ಮನೋಹರ್ ಚರಣ್, ನಗರಸಭೆಯ ನವಾಜ್ ಅಹ್ಮದ್, ಪ್ರವೀಣ್, ಬತ್ತೆಪ್ಪ, ಮಧು, ಸ್ವಯಂ ಸೇವಕರಾದ ತೇಜಾನಂದ,ವಸಂತ್ ಗೌಡ, ಸುರೇಶ್, ರಘು, ರಾಜಕುಮಾರ್, ನಿರಂಜನ್, ಹರೀಶ್, ಚೇತನ್ ಶಶಿಕುಮಾರ್ ಇದ್ದರು.