ಗಿಡನೆಟ್ಟು ಪೋಷಣೆ ಮಾಡಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿ: ಮಲ್ಲಿಕಾರ್ಜುನ್

KannadaprabhaNewsNetwork |  
Published : Jun 26, 2024, 12:40 AM IST
24ಕೆಎಂಎನ್ ಡಿ18 | Kannada Prabha

ಸಾರಾಂಶ

ಪರಿಸರ ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಮಾನವನಿಗೆ ದೊಡ್ಡ ಅಪಾಯ ಎದುರಾಗಲಿದೆ. ಪ್ರತಿಯೊಬ್ಬರು ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಹಬ್ಬಗಳ ಸಂಭ್ರಮದಲ್ಲಿ ಹಣ ಪೋಲು ಮಾಡುವ ಬದಲು ನಾಲ್ಕು ಗಿಡಗಳನ್ನು ನೆಟ್ಟು ಪೋಷಿಸಿದರೆ ಅದೇ ಪರಿಸರಕ್ಕೆ ನೀವು ನೀಡುವ ಕೊಡೆಯಾಗಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಕೊಡುಗೆ ನೀಡಬೇಕು ಎಂದು ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ ಸಲಹೆ ನೀಡಿದರು.

ತಾಲೂಕಿನ ಶೀಳನೆರೆ ಹೋಬಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಸಮಾಗಮ ವೆಲ್ಫೇರ್ ಫೌಂಡೇಶನ್‌ನಿಂದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತೀವರ್ಷ ವಿವಿಧ ಕಾರಣಗಳಿಂದಾಗಿ ಅರಣ್ಯದ ಪ್ರಮಾಣ ಕಡಿಮೆಯಾಗಿ ಪರಿಸರ ಅಸಮತೋಲನ ಉಂಟಾಗಿ ಹಲವು ಪರಿಣಾಮ ಎದುರುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಮಾನವನಿಗೆ ದೊಡ್ಡ ಅಪಾಯ ಎದುರಾಗಲಿದೆ. ಪ್ರತಿಯೊಬ್ಬರು ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಹಬ್ಬಗಳ ಸಂಭ್ರಮದಲ್ಲಿ ಹಣ ಪೋಲು ಮಾಡುವ ಬದಲು ನಾಲ್ಕು ಗಿಡಗಳನ್ನು ನೆಟ್ಟು ಪೋಷಿಸಿದರೆ ಅದೇ ಪರಿಸರಕ್ಕೆ ನೀವು ನೀಡುವ ಕೊಡೆಯಾಗಲಿದೆ ಎಂದರು.

ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ, ಸುತ್ತದಲ್ಲಿ ಆರೋಗ್ಯಕರ ಜೀವನಕ್ಕಾಗಿ ಮರ ಬೆಳೆಸಿ ನಾಡು ಉಳಿಸಿ ಇಲ್ಲದಿದ್ದರೆ ಉತ್ತಮ ಪರಿಸರವಿಲ್ಲದೆ ಬದುಕಲು ಸಾಧ್ಯವಿಲ್ಲ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಹಾಗೂ ಪರಿಸರವನ್ನು ಕೊಡುಗೆಯಾಗಿ ನೀಡಲು ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾಗಮ ವೆಲ್ಫೇರ್ ಫೌಂಡೇಶನ್ ನಿರ್ದೇಶಕ ಪಾಂಡು ಮಾತನಾಡಿ, ಹಳ್ಳಿಗಳಲ್ಲಿ ಸಗಣಿಯಿಂದ ತುಂಬುತಿದ್ದ ತಿಪ್ಪೆಗಳು ಇಂದು ಪ್ಲಾಸ್ಟಿಕ್‌ಗಳ ಗುಂಡಿಗಳಾಗಿವೆ. ಇದರಿಂದ ಉಷ್ಣಾಂಶ ಹೆಚ್ಚುತ್ತಾ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.

ಪ್ರಾಂಶುಪಾಲ ಕೆ.ಎಂ.ವಾಸು ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನಮುಟ್ಟುವಂತಿರಬೇಕು. ನಮ್ಮೆಲ್ಲರನ್ನು ರಕ್ಷಿಸುತ್ತಿರುವ ಪ್ರಕೃತಿಯನ್ನು ನಾವು ರಕ್ಷಿಸಬೇಕು ಎಂದರು.ಇದೇ ವೇಳೆ ಸಂಸ್ಥೆ ವತಿಯಿಂದ ಶಾಲಾ ಕಾಲೇಜು ಮಕ್ಕಳಿಗೆ ಪ್ರಬಂಧ ಹಾಗೂ ಭಾಷಣ ಏರ್ಪಡಿಸಿ ವಿಜೇತರಿಗೆ ಪುಸ್ತಕ ಹಾಗೂ ಟ್ರೋಫಿಗಳನ್ನು ನೀಡಲಾಯಿತು. ಗ್ರಾಪಂ ಅಧ್ಯಕ್ಷ ಯುವರಾಜ್, ಸದಸ್ಯ ಎಸ್.ಕೆ.ಪ್ರಕಾಶ್, ಮುಖ್ಯಶಿಕ್ಷಕಿ ನೀಲಮ್ಮ, ಸಮಾಗಮ ವೆಲ್ಫೇರ್ ಫೌಂಡೇಶನ್ ನಿರ್ದೇಶಕಿ ಸುಮಿತ, ವಕೀಲ ರಘು, ಆರ್ಥಿಕ ಸಲಹೆಗರರಾದ ಪ್ರಮೋದ್, ಕಿರಣ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!