ಕನ್ನಡಪ್ರಭ ವಾರ್ಕೆ ಹಲಗೂರು
ಎಚ್.ವಿ.ರಾಜು ಅವರ ಮನೆ ಆವರಣದಲ್ಲಿ ನಡೆದ ಮಳವಳ್ಳಿ ತಾಲೂಕು ಆರ್ಯ ಈಡಿಗರ ಸಂಘದ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ನಾನು ವ್ಯಾಸಂಗ ಮಾಡುವಾಗ ತುಂಬಾ ಕಷ್ಟದಲ್ಲಿದ್ದೇವು. ಈಗ ದೇವರ ದಯೆಯಿಂದ ಉತ್ತಮ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಸಮಾಜಮುಖಿ ಸೇವೆ ಮಾಡುವಂತಾಗಿದೆ ಎಂದರು.
ಹಲಗೂರು ಹೋಬಳಿ ನಾಗರಿಕ ಹಿತ ರಕ್ಷಣಾ ಟ್ರಸ್ಟ್ ಮತ್ತು ನಾವು, ನಮ್ಮ ಸ್ನೇಹಿತರು ಸೇರಿ 30 ವರ್ಷದ ಹಿಂದೆ ಸಂಘ ಪ್ರಾರಂಭ ಮಾಡಿದ್ದು, ಸಂಘದ ಸದಸ್ಯರು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿ ಅದು ಇಂದಿಗೆ 59 ಲಕ್ಷ ಆಗಿದೆ. ಈಗ ಅದರ ಬಡ್ಡಿ ಹಣದಿಂದ ಹಲಗೂರು ಹೋಬಳಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ, ವಸ್ತ್ರ ಹಾಗೂ ಇತರ ಶಾಲೆಗೆ ಬೇಕಾದವಸ್ತುಗಳನ್ನು ನೀಡಿದ್ದೇವೆ ಎಂದರು.ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಅಪ್ಪಾಜಿಗೌಡ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಆರ್ಯ ಈಡಿಗ ಸಂಘ ಸ್ಥಾಪನೆ ಮಾಡಿ ಪ್ರಥಮ ವರ್ಷದ ವಾರ್ಷಿಕ ಸಭೆಯನ್ನು ಹಲಗೂರಿನಲ್ಲಿ ನಡೆಸುತ್ತಿರುವುದು ಶ್ಲಾಘನೀಯ. ಚಾಮರಾಜನಗರ, ಮೈಸೂರು ಜಿಲ್ಲೆ, ಹೊರತು ಪಡಿಸಿ ಮಂಡ್ಯ ಜಿಲ್ಲೆಯ ಏಳು ತಾಲೂಕುಗಳಿಗೆ ಹೊಲಿಸಿದರೆ ಹಲಗೂರಿನವರೇ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಹಣ ಕೊಡುಗೆಯಾಗಿ ಸಹಾಯ ಹಸ್ತ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲಗೂರು ವಾಸಿ ಹಾಗೂ ಮಳವಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಜಿ.ಟಿ.ಶ್ರೀಧರ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಸೇವೆ ದೊರಕುತ್ತಿದ್ದು, ಆಸ್ಪತ್ರೆಯಲ್ಲಿ ಸುಮಾರು 8 ರಿಂದ 10 ಸುಸಜ್ಜಿತ ಹಾಸಿಗೆ, ಐಸಿಯು ಇದೆ ಹಾಗೂ ಡಯಾಲಿಸಿಸ್ ಮಾಡುವವರಿಗೆ ಏಳು ಬೆಡ್ಡುಗಳು ಇದ್ದು, ಏಕಕಾಲದಲ್ಲಿ ಮಾಡಲಾಗುತ್ತದೆ ಹಾಗೂ ಕುಷ್ಟರೋಗ, ಕ್ಷಯರೋಗ, ಮಲೇರಿಯಾ ಇಂಥ ರೋಗಗಳಿಗೆ ಉಚಿತವಾಗಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳಲು ಗರ್ಭಿಣಿಯರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಘದಿಂದ ಅಧ್ಯಕ್ಷ ವೈ.ಅಶ್ವಥ್, ಎಚ್.ಡಿ.ಮೋಹನ ದಾಸ್, ಅಪ್ಪಾಜಿಗೌಡ, ಬಿ.ಟಿ.ಶ್ರೀಧರ್, ವಸಂತ್ ಕುಮಾರ್, ಸೌಮ್ಯ ಶ್ರೀನಿವಾಸ್ ಇವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಾದ ಆರ್.ದುಶ್ಯಂತ್, ಎಚ್.ಪಿ.ಭೂಮಿಕಾ, ಎಚ್.ಎಂ.ಪ್ರಣಯ್, ಎಚ್.ಕೆ.ಕುಶಾಲ್, ಎಂ.ಟಿ.ಪೂರ್ಣಿಮಾ, ಎಚ್.ಆರ್.ನಿಧಿ, ರಕ್ಷಿತಾರಿಗೆ ಕಿರು ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಳವಳ್ಳಿ ತಾಲೂಕು ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಪುಟ್ಟರಾಜು, ಉಪಾಧ್ಯಕ್ಷ ಎಚ್.ವಿ.ರಾಜು, ಕಾರ್ಯದರ್ಶಿ ಎಚ್.ಆರ್.ಪದ್ಮನಾಭ, ಸಹ ಕಾರ್ಯದರ್ಶಿ ಎಚ್.ವಿ.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಎಚ್.ಎನ್.ರಾಮಣ್ಣ, ಖಜಾಂಜಿ ಕೆ.ಜಿ.ಜೀವನ್ ಕುಮಾರ್ ಸೇರಿದಂತೆ ಇತರರು ಇದ್ದರು.