ಕನ್ನಡಪ್ರಭ ವಾರ್ತೆ ಪಾಂಡವಪುರ
ಶಾಲಾ ಆವರಣದಲ್ಲಿ ನಡೆದ ಹೋಮವನ್ನು ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರು ನೆರವೇರಿಸಿದರು.
ನಂತರ ಶಾಲಾ ಆವರಣದಿಂದ ಹೊರಟ ರಥೋತ್ಸವಕ್ಕೆ ರೈತ ಸಂಘದ ಮುಖಂಡರಾದ ಸುನೀತ ಪುಟ್ಟಣ್ಣಯ್ಯ ಚಾಲನೆ ನೀಡಿದರು. ಶಾಲಾ ಮಕ್ಕಳ ಪೂರ್ಣಕುಂಭ, ಬ್ಯಾಂಡ್ ಸೆಟ್, ಡೊಳ್ಳುಕುಣಿತ, ಗಾರುಡಿ ಬೊಂಬೆಗಳ ಸೇರಿದಂತೆ ವಿವಿಧ ಕಲಾ ತಂಡಗಳ ಮೂಲಕ ಸಾಗಿದ ರಥವು ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು.ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ನನ್ನ ಆರಾಧ್ಯ ಗುರುಗಳಾದ ಡಾ.ಶ್ರೀಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಜಯಂತಿ ಹಾಗೂ ಪುಣ್ಯ ಸ್ಮರಣೆಯನ್ನು ಹೇಮಗಿರಿ ಶಾಖಾ ಮಠದ ಎಲ್ಲಾ ಶಾಲೆಗಳಲ್ಲೂ ವಿಜೃಂಭಣೆಯಿಂದ ಪ್ರತಿ ವರ್ಷವು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಗುರುಗಳ ಹೆಸರಿನಲ್ಲಿ ಹೋಮ-ಹವನ, ರಥವನ್ನು ನಡೆಸುವ ಮೂಲಕ ಗುರುಗಳನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮನ್ಮುಲ್ ಮಾಜಿ ನಿರ್ದೇಶಕ ಎಲ್.ಸಿ.ಮಂಜುನಾಥ್, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಧನಂಜಯ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಬಿ.ಎಸ್.ಜಯರಾಮು, ಎಂ.ಗಿರೀಶ್, ದೀಪು (ಲೋಹಿತ್), ಕುಮಾರಸ್ವಾಮಿ, ಮುಖ್ಯಶಿಕ್ಷಕ ರಘು ಸೇರಿದಂತೆ ಹಲವರು ಇದ್ದರು.ಭೈರವೈಕ್ಯ ಶ್ರೀಬಾಲಗಂಗಾಧರನಾಥಸ್ವಾಮೀಜಿ ಜನ್ಮದಿನ, ಪುಣ್ಯಸ್ಮರಣೆಪಾಂಡವಪುರ
ಆದಿಚುಂಚನಗಿರಿ ಮಠದ ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಅಂಗವಾಗಿ ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆಯಲ್ಲಿ ವಿಶೇಷವಾಗಿ ನಡೆದ ಹೋಮ- ಹವನ ಹಾಗೂ ಪೂಜಾ ಕೈಂಕರ್ಯಗಳನ್ನು ಮಠದ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರು ನಡೆಸಿಕೊಟ್ಟರು.ಬಳಿಕ ಮಾತನಾಡಿದ ಅವರು, ಹೇಮಗಿರಿ ಶಾಖಾಮಠದ ವತಿಯಿಂದ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಅಂಗವಾಗಿ ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆಯಲ್ಲಿ ವಿಶೇಷವಾಗಿ ನಡೆದ ಹೋಮ- ಹವನ, ಪೂಜಾ ಕಾರ್‍ಯಕ್ರಮ ನಡೆಸಿಕೊಟ್ಟಿದ್ದೇವೆ. ಜ.12ರಿಂದ ಆರಂಭಗೊಂಡಿರುವ ಪೂಜಾ ಕಾರ್‍ಯಕ್ರಮ ಜ.28 ರವರೆಗೆ ನಿರಂತರವಾಗಿ ಹೇಮಗಿರಿ ಶಾಖಾಮಠದ ಎಲ್ಲಾ ಶಾಲೆಗಳಲ್ಲೂ ನಡೆಸಲಾಗುತ್ತಿದೆ ಎಂದರು.
ಶ್ರೀಗಳು ಮಠಕ್ಕೆ ಕೊಟ್ಟ ಸೇವಾಕಾರ್‍ಯ, ಕೆಲಸದಿಂದಾಗಿ ಮಠವು ಸಮಾಜದಲ್ಲಿ ದೊಡ್ಡಮರವಾಗಿ ಬೆಳೆಯಲು ಸಾಧ್ಯವಾಗಿದೆ. ಆ ಮೂಲಕ ಮಠವು ಹಲವು ಸಾಮಾಜಿಕ ಕೆಲಸ ಕಾರ್‍ಯಗಳನ್ನು ಸಹ ನಡೆಸಿಕೊಂಡು ಬರಲು ಸಾಧ್ಯವಾಗಿದೆ ಎಂದು ತಿಳಿಸಿದರು.ಗುರುಗಳು ನಮ್ಮೊಡನೆ ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ನಾವೆಲ್ಲರೂ ಅವರನ್ನು ಇಂತಹ ಪುಣ್ಯಸ್ಮರಣೆ ಕಾರ್‍ಯಕ್ರಮಗಳನ್ನು ನಡೆಸುವ ಮೂಲಕ ಸ್ಮರಿಸುವ ಕೆಲಸವನ್ನು ಪ್ರತಿವರ್ಷವೂ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಪೂಜಾ ಕಾರ್‍ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ವಸಂತ್‌ಕುಮಾರ್, ಸದಸ್ಯರಾದ ಜಯಲಕ್ಷ್ಮೀ, ಕೃಷ್ಣೇಗೌಡ, ಪರಮೇಶ್, ಸಿ.ಡಿ.ಮಹದೇವು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಬಿ.ಎಸ್.ಜಯರಾಮು, ಪ್ರಾಂಶುಪಾಲ ಚಿದಂಬರ್ ಸೇರಿದಂತೆ ಶಿಕ್ಷಕರು, ಮುಖಂಡರು ಭಾಗವಹಿಸಿದ್ದರು.