ಸಂಸ್ಕಾರ ಶಿಕ್ಷಣ ಪ್ರಸ್ತುತ ಅವಶ್ಯಕ: ಆರ್‌ಟಿಒ ಮಲ್ಲಿಕಾರ್ಜುನ್

KannadaprabhaNewsNetwork |  
Published : Jan 19, 2026, 12:30 AM IST
18ಕೆಎಂಎನ್ ಡಿ21 | Kannada Prabha

ಸಾರಾಂಶ

ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬ ಪಾಲಕರ-ಶಿಕ್ಷಕರ-ವಿದ್ಯಾರ್ಥಿಗಳ ಸಮಾಗಮ ಸಂಗಮವಾಗಿದೆ. ಪಾಶ್ವಿಮಾತ್ಯ ನೃತ್ಯ, ಕ್ಯಾಸೆಟ್ ಹಾಡಿನ ನೃತ್ಯಗಳಿಂದ ನಮ್ಮಜಾನಪದ ಸಂಸ್ಕೃತಿ ಕಲೆಗಳು ಮರೆಯಾಗುತ್ತಿವೆ. ಮೊದಲು ನಮ್ಮಜಾನಪದ ಕಲೆ ಉಳಿಸಲು ಶಾಲೆಗಳು ಇಂತಹ ಕಾರ್ಯಕ್ರಮವನ್ನು ವೇದಿಕೆಯಾಗಿ ರೂಪಿಸಿಕೊಳ್ಳಬೇಕಿದೆ.

ಕಿಕ್ಕೇರಿ:

ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣ ಪ್ರಸಕ್ತವಾಗಿ ಮಕ್ಕಳಿಗೆ ಬಲು ಅವಶ್ಯವಿದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಹೇಳಿದರು.

ಹೋಬಳಿಯ ದಬ್ಬೇಘಟ್ಟದ ಅನ್ನಪೂರ್ಣೇಶ್ವರಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳು ಹೆಚ್ಚು ಅಂಕಗಳಿಸಿದರೆ ಸಾಕು ಮೊದಲು ಇಂಗ್ಲಿಷ್‌ ಕಲಿಯಲಿ. ಇದೇ ಭವಿಷ್ಯಕ್ಕೆ ಆಧಾರ ಎನ್ನುವಂತಾಬಾರದು. ಎಲ್ಲ ಭಾಷೆಗಳಿಗೂ ಕಲಿಕೆ ಆಧಾರ ಮಾತೃಭಾಷೆ ಎಂಬುದನ್ನು ಮರೆಯದೆ ಸುಲಲಿತವಾಗಿ ಕನ್ನಡ ಭಾಷೆ ಓದಿ, ಬರೆಯಿಸಿ. ಇದೇ ಶಿಕ್ಷಣದ ಜ್ಞಾನದಾಹಕ್ಕೆ ಮೊದಲ ಮೆಟ್ಟಿಲು ಎಂದರು.

ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬ ಪಾಲಕರ-ಶಿಕ್ಷಕರ-ವಿದ್ಯಾರ್ಥಿಗಳ ಸಮಾಗಮ ಸಂಗಮವಾಗಿದೆ. ಪಾಶ್ವಿಮಾತ್ಯ ನೃತ್ಯ, ಕ್ಯಾಸೆಟ್ ಹಾಡಿನ ನೃತ್ಯಗಳಿಂದ ನಮ್ಮಜಾನಪದ ಸಂಸ್ಕೃತಿ ಕಲೆಗಳು ಮರೆಯಾಗುತ್ತಿವೆ. ಮೊದಲು ನಮ್ಮಜಾನಪದ ಕಲೆ ಉಳಿಸಲು ಶಾಲೆಗಳು ಇಂತಹ ಕಾರ್ಯಕ್ರಮವನ್ನು ವೇದಿಕೆಯಾಗಿ ರೂಪಿಸಿಕೊಳ್ಳಬೇಕಿದೆ. ಮಕ್ಕಳಲ್ಲಿ ನೈಜ್ಯ ಪ್ರತಿಭೆಗಳಿವೆ. ಎಕ್ಕಿ ಹೊರ ತೆಗೆಯುವ ಕೆಲಸವಾಗಬೇಕಿದೆ ಎಂದರು.

ಶಾಲಾ ಮಕ್ಕಳ ನೃತ್ಯ ವೈಭವ, ವಿವಿಧಸಾಂಸ್ಕೃತಿಕ ಪ್ರದರ್ಶನ ರಂಜಿಸಿತು. ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ ವ್ಯವಸ್ಥಾಪಕ ಮಹೇಶ್, ಮುಖ್ಯಶಿಕ್ಷಕ ಹರೀಶ್, ಗ್ರಾಪಂ ಅಧ್ಯಕ್ಷದೇವರಾಜು, ಬೀರುವಳ್ಳಿ ಸತೀಶ್, ಮಾರ್ಗೋನಹಳ್ಳಿ ನಾಗರಾಜು, ಮೋಹನ್, ಅಭಿಷಕ್,ಗಂಜಿಗೆರೆ ಮಹೇಶ್‌ಭಾಗವಹಿಸಿದ್ದರು.ಮಾಸಾಶನ ಫಲಾನುಭವಿಗೆ ವಾತ್ಸಲ್ಯಮನೆ ರಚನೆಗಾಗಿ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ ಮದ್ದೂರು

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ಮಾತೃಶ್ರೀ ಅವರ ಆಶಯದಂತೆ ಕದಲೂರು ಕಾರ್ಯ ಕ್ಷೇತ್ರದ ಮಾಸಾಶನ ಫಲಾನುಭವಿ ಜಯಮ್ಮರಿಗೆ ವಾತ್ಸಲ್ಯಮನೆ ರಚನೆಗಾಗಿ ಮನ್ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ರಾಮಕೃಷ್ಣ ಅವರು, ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ, ಜೀವನ ನಡೆಸಲು ಆಸರೆಯಾಗಿ ಹಲವು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಯೋಜನಾಧಿಕಾರಿ ಮಾತನಾಡಿ, ಯಾರು ಇಲ್ಲದೆ, ದುಡಿದು ತಿನ್ನಲು ಅಸಹಾಯಕರಾದ ಜೀವಗಳಿಗೆ ಮಾಸಾಶನ ಸೌಲಭ್ಯ ನೀಡಿ, ಫಲಾನುಭವಿಗಳಿಗೆ ವಾತ್ಸಲ್ಯಮನೆ, ಬೆಳಕಿನ ವ್ಯವಸ್ಥೆಗಾಗಿ ಸೋಲಾರ್, ನೀರಿನ ವ್ಯವಸ್ಥೆ ಶೌಚಾಲಯ, ಸ್ನಾನ ಗೃಹ ಹೀಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುತ್ತಿರುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಗುರು, ಒಕ್ಕೂಟದ ಅಧ್ಯಕ್ಷೆ ಹೇಮಾವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ತೇಜಾವತಿ ಎನ್, ವಲಯ ಮೇಲ್ವಿಚಾರಕಿ ಲತಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಮುಖಿ ಸೇವೆ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ: ಮೋಹನ್ ದಾಸ್
ಬಿಜಿಎಸ್ ಶಾಲೆಯಲ್ಲಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ ರಥೋತ್ಸವ