ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ: ಅಶ್ವಿನಿಕುಮಾರ್

KannadaprabhaNewsNetwork |  
Published : Nov 06, 2025, 01:30 AM IST
ಸಾಗರದ ಶ್ರೀ ಸಮರ್ಥ ಲೀಜನ್ ಸಂಸ್ಥೆಯ ಸ್ಥಳೀಯ ಘಟಕವನ್ನು ಅಶ್ವಿನಿಕುಮಾರ್ ಉದ್ಘಾಟಿಸಿದರು | Kannada Prabha

ಸಾರಾಂಶ

ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾದ ಸಮಾಜಕ್ಕೆ ನಾವು ಒಂದಷ್ಟು ಕೊಡುಗೆ ನೀಡಬೇಕಾಗಿದ್ದು ನಮ್ಮ ಜವಾಬ್ದಾರಿ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.

ಸಾಗರ: ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾದ ಸಮಾಜಕ್ಕೆ ನಾವು ಒಂದಷ್ಟು ಕೊಡುಗೆ ನೀಡಬೇಕಾಗಿದ್ದು ನಮ್ಮ ಜವಾಬ್ದಾರಿ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.

ಪಟ್ಟಣದ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಸಾಗರ ಶ್ರೀ ಸಮರ್ಥ ಲೀಜನ್ ಸಂಸ್ಥೆಯ ಸ್ಥಳೀಯ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ವಿವಿಧ ಸಂಘಟನೆಗಳ ಅಗತ್ಯವಿದೆ. ಲಯನ್ಸ್, ರೋಟರಿ ಜೊತೆ ಸಾಗರ ಶ್ರೀ ಸಮರ್ಥ ಲೀಜನ್ ಸಹ ಸಮಾಜಮುಖಿ ಸಂಸ್ಥೆಯಾಗಿದೆ ಎಂದರು.ರೋಟರಿ, ಲಯನ್ಸ್ ಸಂಸ್ಥೆಗಳು ವಿದೇಶದಲ್ಲಿ ಜನ್ಮತಾಳಿ ಭಾರತದಾದ್ಯಂತ ವಿಸ್ತರಿಸಿದೆ. ಆದರೆ ಸಾಗರ ಶ್ರೀ ಸಮರ್ಥ ಲೀಜನ್ ಭಾರತದ ಕೊಚ್ಚಿನ್ನಲ್ಲಿ ಜನ್ಮ ತಾಳಿ ದೇಶಾದ್ಯಂತ ಸಮಾಜಸೇವಾ ಶಾಖೆಗಳನ್ನು ತೆರೆದು ಕಾರ್ಯನಿರ್ವಹಿಸುತ್ತಿದೆ. ೪೦ ವರ್ಷ ಮೇಲ್ಪಟ್ಟವರು ಸಿನಿಯರ್ ಛೇಂಬರ್ಸ್‌ ಮೂಲಕ ಸಮಾಜ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದು ಹೇಳಿದರು.ಸಮರ್ಥ ಲೀಜನ್ ರಾಷ್ಟ್ರ ಉಪಾಧ್ಯಕ್ಷೆ ಸುರೇಖಾ ಮುರಳೀಧರ್ ಮಾತನಾಡಿ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ಸೇವಾ ಕಾರ್ಯಕೈಗೊಳ್ಳುವುದು ಅಭಿನಂದರ್ಹಾ ಕೆಲಸ. ವಿಶ್ವದಾದ್ಯಂತ ನಮ್ಮ ಸಂಸ್ಥೆ ಸಾಮಾಜಿಕ ಕೆಲಸ ಮಾಡುತ್ತಿದೆ. ಕೌಟುಂಬಿಕ ನಿರ್ವಹಣೆ ಜೊತೆಗೆ ಸಾಮಾಜಿಕ ಸೇವೆ ಮಾಡಲು ಬಯಸುವ ಮಹಿಳೆಯರು ಇಂತಹ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬಹುದು ಎಂದು ತಿಳಿಸಿದರು.ಇದೇ ವೇಳೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜ್ಯೋತಿ ಮಣೂರು, ನೇತ್ರಾ ಉಡುಪ ಕಾರ್ಯದರ್ಶಿ, ಕಸ್ತೂರಿ ಕೃಷ್ಣಮೂರ್ತಿ ಖಜಾಂಚಿಯಾಗಿ ನೇಮಕ ಮಾಡಲಾಯಿತು. ಗಿರಿಜಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.

ಪ್ರೇಮ ಹೆಗಡೆ, ಸುಜಾತ.ಎಂ.ಎಚ್, ಶೈಲ, ಸುವರ್ಣ, ಭಾನುಶ್ರೀ, ಜ್ಯೋತಿ ಎಂ.ಕೆ.ಸುಜಾತ ವಸಂತ, ಸುವರ್ಣ, ನಾಗಶ್ರೀ, ಕೌಶಿಕ್ ಕಾನುಗೋಡು, ಗೋಪಿ ದೀಕ್ಷಿತ್, ಮ.ಸ.ನಂಜುಂಡಸ್ವಾಮಿ, ಪ್ರಭಾವತಿ ಮತ್ತಿತರರಿದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ