ರಾಷ್ಟ್ರ ನಿರ್ಮಾಣಕ್ಕೆ ಚಂದ್ರಶೇಖರ್‌ ಆಜಾದ್‌ ಮಹತ್ತರ ಕೊಡುಗೆ: ಯೋಗೇಶ್ ಭಂಡಾರಿ

KannadaprabhaNewsNetwork |  
Published : Mar 15, 2024, 01:16 AM IST
ಚಿಕ್ಕೋಡಿ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಹೂಗುಚ್ಚ ನೀಡ ಬರಮಾಡಿಕೊಳ್ಳಲಾಯಿತು. ಯೋಗೇಶ್ ಭಂಡಾರಿ, ಪ್ರಾಚಾಯ ದರ್ಶನ ಬಿಳ್ಳೂರ, ಮನೋಹರ್ ದಂಡಗಿ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಚಿಕ್ಕೋಡಿ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯ ಮತ್ತು ರಾಷ್ಟ್ರೋತ್ಥಾನ ಪರಿಷತ್‌, ಬೆಂಗಳೂರು ಹಾಗೂ ಅಭ್ಯುದಯ ಟ್ರಸ್ಟ್ (ಸಂಕಲ್ಪನಾ-2047) ಸಹಯೋಗದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ವಿಷಯದ ಮೇಲೆ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಷ್ಟ್ರ ನಿರ್ಮಾಣದಲ್ಲಿ ಚಂದ್ರಶೇಖರ್‌ ಆಜಾದ್‌ ಅವರು ತಂದೆ-ತಾಯಿಗಿಂತ ರಾಷ್ಟ್ರಾಭಿಮಾನ ಮನದಲ್ಲಿ ಇಟ್ಟುಕೊಂಡಿದ್ದರು ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಸಂಪನ್ಮೂಲ ವ್ಯಕ್ತಿ ಯೋಗೇಶ್ ಭಂಡಾರಿ ಹೇಳಿದರು.

ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯ ಮತ್ತು ರಾಷ್ಟ್ರೋತ್ಥಾನ ಪರಿಷತ್‌, ಬೆಂಗಳೂರು ಹಾಗೂ ಅಭ್ಯುದಯ ಟ್ರಸ್ಟ್ (ಸಂಕಲ್ಪನಾ-2047) ಸಹಯೋಗದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ವಿಷಯದ ಮೇಲೆ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಈಗೀನ ಪ್ರಧಾನ ಮಂತ್ರಿಯವರ ಕೊಡುಗೆಗಳು ಶ್ಲಾಘನೀಯ ಎಂದರು.

ಭಾರತ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಶಕ್ತಿ ಮತ್ತು ವಿವೇಕ ಎರಡು ಯುವಕರಲ್ಲಿ ಇರುತ್ತದೆ. ಆದ ಕಾರಣ ದೇಶದ ನಿರ್ಮಾಣ ಯುವಕರ ಜವಾಬ್ದಾರಿ. ಘನತೆಯಿಂದ ಇರಬೇಕಾದರೇ ಎಚ್ಚರವನ್ನು ಕಳೆದುಕೊಳ್ಳಬಾರದು ಎಂದು ತಿಳಿಸಿದರು.

ನಮ್ಮ ದೇಶ ಬಲಿಷ್ಠಗೊಳ್ಳುವುದು ದೊಡ್ಡ ದೊಡ್ಡ ವಿಚಾರಗಳು ಸಣ್ಣ ಸಣ್ಣ ವ್ಯಕ್ತಿಗಳಿಂದ ಬಂದಾಗ ರಾಷ್ಟ ನಿರ್ಮಾಣವಾಗುವುದು. 2047ಕ್ಕೆ ನಮ್ಮ ದೇಶಕ್ಕೆ ಸ್ವತಂತ್ರ ದೊರೆತು ನೂರು ವರ್ಷಗಳಾಗಲಿವೆ. ಆದ್ದರಿಂದ ಇನ್ನು ಬರುವ ವರ್ಷಗಳಲ್ಲಿ ನಮ್ಮ ದೇಶ ವಿಶ್ವಗುರು ಆಗುವ ಸಂಕಲ್ಪ ನಾವೆಲ್ಲರೂ ಇಟ್ಟುಕೊಳ್ಳಬೇಕು. ವ್ಯಕ್ತಿತ್ವದ ನಿರ್ಮಾಣ ಮಾಡಿಕೊಳ್ಳಬೇಕು. ನಮ್ಮ ವ್ಯಕ್ತಿತ್ವ ಮೇಲೆ ದೇಶ ನಿರ್ಮಾಣ ನಿಂತಿದೆ. ಆದ ಕಾರಣ ನಮ್ಮನ್ನು ನಾವು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ದರ್ಶನ್ ಕುಮಾರ್ ಬಿಳ್ಳೂರ್, ರಾಷ್ಟ್ರೋತ್ಥಾನ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತ ಮನೋಹರ್ ದಂಡಗಿ, ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮೂನಿಕೆಶನ್‌ ವಿಭಾಗದ ಮುಖ್ಯಸ್ಥ ರಾಮಚಂದ್ರ ಎಸ್.ಖೋತ ಹಾಗೂ ಎನ್.ಎನ್.ಎಸ್ ವಿಭಾಗದ ಮುಖ್ಯಸ್ಥ ಎಚ್.ಬಿ.ಗೋಂಧಳಿ ಉಪಸ್ಥಿತರಿದ್ದರು. ಪದ್ಮಾ ಮಾಳಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!