ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನರೇಂದ್ರಮೋದಿ ಭವನದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಚಳವಳಿ ಬಲಪಡಿಸುವ ವಿಚಾರ ಸಂಕಿರಣದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ರಾಜ್ಯ ಸಹಕಾರ ಮಹಾ ಮಂಡಳಿ ಬೆಂಗಳೂರು ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಸಮಾರಂಭ ನಡೆಯಿತು.ಕೇಂದ್ರ ಸರ್ಕಾರದ ವಿಕಸಿತ ಭಾರತದ ವೇಗಕ್ಕೆ ತಕ್ಕಂತೆ ಅರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರವನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಭಾರತ ಅರ್ಥಿಕವಾಗಿ ಪ್ರಪಂಚದ 4ನೇ ದೇಶವಾಗಿದ್ದು, 2028 ರಲ್ಲಿ 3ನೇ ಸ್ಥಾನ ಬರಲಿದೆ. ವಿವಿದ್ಧೋದ್ದೇಶ ಸಹಕಾರ ಸಂಘ ರಚಿಸಲು ಕೇಂದ್ರ ಸರಕಾರ ಅನುದಾನ ನೀಡುತ್ತಿರುವುದು ಆಧುನಿಕ ಕೃಷಿ ಪದ್ಧತಿಗೆ ಉತ್ತೇಜಿಸಲಾಗುತ್ತಿದೆ ಎಂದೂ ಹೇಳಿದರು.
ಅಧ್ಯಕ್ಷತೆ ವಹಿಸಿದ ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲರಂಡ ಮಣಿ ಉತ್ತಪ್ಪ, ರೈತರ ಅಭಿವೃದ್ಧಿಯಾದರೆ ದೇಶವು ಎಲ್ಲಾ ರಂಗಗಳಲಲ್ಲೂ ಸುಧಾರಿಸಲಿದೆ. ಸಹಕಾರಿಗಳ ಬೆಂಬಲದಿಂದ ಸಂಘ ಬಲಿಷ್ಠವಾಗಿ ಬೆಳೆದಿದೆ ಎಂದರು.
ಚೆಟ್ಟಳ್ಳಿ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಬಿದ್ದಂಡ ಅಚ್ಚಯ್ಯ, ಕೆ.ಎಂ.ಅಪ್ಪಣ್ಣ, ಮಾಜಿ ಉಪಾಧ್ಯಕ್ಷರಾದ ಕೊಜಾಲು ಪೂವಯ್ಯ, ಎಚ್.ಎಸ್.ತಿಮ್ಮಪ್ಪಯ್ಯ, ಮಾಜಿ ನಿರ್ದೇಶಕರಾದ ಟಿ.ಎಸ್.ದನಂಜಯ, ಅಡಿಕೇರ ಜಯ, ಸೀತಮ್ಮ ಸೇರಿದಂತೆ 27 ಮಂದಿಯನ್ನು ಸನ್ಮಾನಿಸಲಾಯಿತು.ಜಿಲ್ಲಾ ಹಾಪ್‌ಕಾಮ್ ಅಧ್ಯಕ್ಷ ರಮೇಶ್ ಚಂಗಪ್ಪ, ಜನತಾ ಬಜಾರ್ ಅಧ್ಯಕ್ಷ ರವಿ ಬಸಪ್ಪ, ಗುಡ್ಡೆಹೊಸೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಡಿ.ಮಲೇಶ್, ಸಹಕಾರಿ ಯೂನಿಯನ್ ಉಪಾಧ್ಯಕ್ಷ ಮನು ರಾಮಚಂದ್ರ, ಸಹಕಾರಿ ಇಲಾಖೆ ಉಪನಿಬಂಧಕಿ ಶೈಲಜಾ, ಮಾಜಿ ಅಧ್ಯಕ್ಷ ಬಿದ್ದಂಡ ಅಚ್ಚಯ್ಯ ಧ್ವಜಾರೋಹಣ ನೇರವೇರಿಸಿದರು.
ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿದರು. ಚೆಟ್ಟಳ್ಳಿ ವಿಎಸ್‌ಎಸ್‌ಎನ್ ಸಿಇಒ ನಂದಿನಿ ಪ್ರಾರ್ಥನೆ ನೇರವೇರಿಸಿದರು.