ವಿಶ್ವಕ್ಕೆ ಅರ್ಥಶಾಸ್ತ್ರಜ್ಞರ ಕೊಡುಗೆ ಅಪಾರ: ಶಿವಶರಣಪ್ಪ ಮೂಳೆಗಾವ

KannadaprabhaNewsNetwork |  
Published : Apr 02, 2024, 01:03 AM ISTUpdated : Apr 02, 2024, 01:04 AM IST
ಫೋಟೋ- 1ಜಿಬಿ10 | Kannada Prabha

ಸಾರಾಂಶ

ವಿಶ್ವ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಅರ್ಥಶಾಸ್ತ್ರಜ್ಞರ ಕೊಡುಗೆ ಅಪಾರವಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರು ಶಿವಶರಣಪ್ಪ ಮೂಳೆಗಾವ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಶ್ವ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಅರ್ಥಶಾಸ್ತ್ರಜ್ಞರ ಕೊಡುಗೆ ಅಪಾರವಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರು ಶಿವಶರಣಪ್ಪ ಮೂಳೆಗಾವ ಪ್ರತಿಪಾದಿಸಿದರು.

ಪಟ್ಟಣದ ಕಲಬುರ್ಗಿಯ ದಿಶಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅರ್ಥಶಾಸ್ತ್ರ ಮೌಲ್ಯಮಾಪನ ಕೇಂದ್ರದಲ್ಲಿ ಹಮ್ಮಿಕೊಂಡ ವಯೋನಿವೃತ್ತರ ಸನ್ಮಾನ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದವರಿಗೆ ಸನ್ಮಾನ ಮತ್ತು ಸಂಕಲ್ಪ ಫೌಂಡೇಶನ್ ಅಧ್ಯಕ್ಷರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬೀದರ್‌ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಚಂದ್ರಕಾಂತ ಶಾಹಾಬಾದಕರ ಮಾತನಾಡಿ ಸಂಕಲ್ಪ ಫೌಂಡೇಶನ್ ಅಧ್ಯಕ್ಷ ಶಿವಾನಂದ ಖಜುರ್ಗಿ ಮೌಲ್ಯಮಾಪಕರಿಗೆ ಸಕಲ ಸೌಲಭ್ಯ ಒದಗಿಸಿ ಇತರರಿಗೆ ಮಾದರಿಯಾಗಿದ್ದರೆ ಅವರ ತ್ಯಾಗಮಯ ಜೀವನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಮೌಲ್ಯಮಾಪನ ಕೇಂದ್ರದ ಮೇಲ್ವಿಚಾರಕ ಅಮೃತ ಬೆಳಮಗಿ, ಮಲ್ಲಮ್ಮ ಶಿವಣಕರ, ಅಶೋಕ ರಾಜೋಳೆ ಮಾತನಾಡಿದರು. ಸಂಕಲ್ಪ ಫೌಂಡೆಶನ ಅಧ್ಯಕ್ಷ ಶಿವಾನಂದ ಖಜುರ್ಗಿ ಮಾತನಾಡಿ ಪದವಿಧರರು ಸರ್ಕಾರಿ ನೌಕರಿ ಮೇಲೆ ಅವಲಂಬನೆ ಇರದೆ ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿ ಜೀವನ ನಡೆಸಲು ತೀರ್ಮಾನಿಸಬೇಕು ಎಂದರು.

ಗೌರವ ಸನ್ಮಾನ: ಉಪನ್ಯಾಸಕ ವಿರಣ್ಣ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಚಂದ್ರಕಾಂತ ಗಂಗಶೇಟ್ಟಿ, ಡಾ. ಪಪ್ಪು ಮೇತ್ರಿ, ಡಾ. ನಾಗಶೇಟ್ಟಿ ಹಾಗೂ ವೈಶಾಲಿ ಶಿವಾನಂದ ಖಜುರ್ಗಿ, ಶಿಬಿರಾಧಿಕಾರಿ ಪ್ರಾಚಾರ್ಯ ಗುರುಶಾಂತಪ್ಪ ಅಕ್ಕ ಹಾಗೂ ಕಾರ್ಯಾಲಯದ ಡಿ.ಸಿ.ಗಳಾದ ತಿಪ್ಪಾರೆಡ್ಡಿ, ರಾಜು ಗಂಗಾಧರ ಸೇರಿದಂತೆ ಉಪ ಮುಖ್ಯ ಮೌಲ್ಯಮಾಪಕರು ಹಾಗೂ ಸಹಾಯಕ ಮೌಲ್ಯಮಾಪಕರು ಉಪಸ್ಥಿತರಿದ್ದರು.

ಡಾ. ಚಂದ್ರಕಾಂತ ಗಂಗಶೆಟ್ಟಿ ಪ್ರಾರ್ಥನೆ ಗೀತೆ ನುಡಿದರು. ಪ್ರೊ. ಗಂಗಾ ಮೇಡಂ ಸ್ವಾಗತ ಗೀತೆ ನುಡಿದರು. ಪ್ರೊ. ಜ್ಯೋತಿ ಮೇಡಂ ನಿರೂಪಿಸಿದರು. ರಾಧಾಕೃಷ್ಣ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ