ಪ್ರವಾಸೋದ್ಯಮಕ್ಕೆ ಹೋಟೆಲ್ ಉದ್ಯಮಿಗಳ ಕೊಡುಗೆ ಅಪಾರ: ಅಲ್ಲಮಪ್ರಭು ಪಾಟೀಲ್‌

KannadaprabhaNewsNetwork | Published : Oct 21, 2024 12:49 AM

ಸಾರಾಂಶ

ಕಲಬುರಗಿಯ ಹೋಟೆಲ್ ಮಯೂರ್ ಬಹುಮನಿಯ ಯಾತ್ರಿಕ್ ನಿವಾಸ ಸಭಾಂಗಣದಲ್ಲಿ ಹೋಟೆಲ್ ಸಂಘದ ನೂತನ ಅಧ್ಯಕ್ಷ ನರಸಿಂಹ ಮೆಂಡನ್‌ಗೆ ಶಾಸಕ ಅಲ್ಲಮಪ್ರಭು ಪಾಟೀಲ್‌ ಅವರು ಸನ್ಮಾನ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಹೋಟೆಲ್ ಉದ್ಯಮಿಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ್ ಹೇಳಿದರು.

ಇಲ್ಲಿನ ಹೋಟೆಲ್ ಮಯೂರ್ ಬಹುಮನಿಯ ಯಾತ್ರಿಕ್ ನಿವಾಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಲಬುರಗಿ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿಗಳ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾದ ನರಸಿಂಹ ಮೆಂಡನ್ ಅವರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

ಕಲಬುರಗಿಯಲ್ಲಿ ಪೊಲೀಸ್ ಅಕಾಡೆಮಿ ತರಬೇತಿ ಕೇಂದ್ರ ನಾಲ್ಕು ವಿಶ್ವವಿದ್ಯಾಲಯಗಳು, ಇಎಸ್ಐ ಜಿಮ್ಸ್ ಜಯದೇವ ಆಸ್ಪತ್ರೆಗಳು ಹಾಗೂ ಸದ್ಯದಲ್ಲೇ ನೂತನ ಜವಳಿ ಪಾರ್ಕ್ ಆರಂಭವಾಗುವುದರಿಂದ ಪ್ರವಾಸೋದ್ಯಮ ರಂಗಕ್ಕೆ ಇಲ್ಲಿ ಹೆಚ್ಚು ಅವಕಾಶವಿದ್ದು ಹೋಟೆಲ್ ಉದ್ಯಮಿಗಳು ಉತ್ತಮ ಆಹಾರ, ವಸತಿ ವ್ಯವಸ್ಥೆ ಕಲ್ಪಿಸಿ ಅವಕಾಶ ಬಳಸಿಕೊಳ್ಳಬೇಕು. ಹೋಟೆಲ್ ಉದ್ಯಮಿಗಳ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆ ಮಾಡುವುದಲ್ಲದೆ ಈ ಕ್ಷೇತ್ರದ ಅಭಿವೃದ್ಧಿಗೆ ನೂತನ ಸಮಿತಿಯ ಜೊತೆ ವಿಸ್ತೃತ ಚರ್ಚೆ ನಡೆಸಲು ಸದಾ ಸಿದ್ಧ ಎಂದು ಹೇಳಿದರು.

ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆಲರ್‌ ಮಾತನಾಡಿ, ಹೋಟೆಲ್ ಉದ್ಯಮ ರಂಗವು ಬೆಳೆಯಲು ಪರಿಶ್ರಮದ ದುಡಿಮೆ ಮತ್ತು ಕಾಯಕವೇ ಕೈಲಾಸ ಎಂಬ ತತ್ವ ಮೂಲ ಪ್ರೇರಣೆಯಾಗಿದೆ. ಆತಿಥ್ಯ ಮತ್ತು ಉತ್ತಮ ಆಹಾರಕ್ಕೆ ಹೆಸರಾದ ಕರಾವಳಿಯ ಹೋಟೆಲ್ ಉದ್ಯಮಿಗಳು ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದು ಕಲಬುರಗಿಗು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ನಿರ್ಗಮಿತ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ಸತ್ಯನಾಥ ಶೆಟ್ಟಿ, ನೂತನ ಅಧ್ಯಕ್ಷ ನರಸಿಂಹ ಮಂಡನ್ ಮಾತನಾಡಿದರು. ಕಾರ್ಮಿಕ ನ್ಯಾಯ ಮತ್ತು ಹಕ್ಕುಗಳ ಕುರಿತಾಗಿ ಕಾರ್ಮಿಕ ಇಲಾಖೆಯ ಉಪಯುಕ್ತರಾದ ವೆಂಕಟೇಶ ಸಿಂಧಿಗಟ್ಟಿ, ಮಾತನಾಡಿದರು.

ನೂತನ ಗೌರವಾಧ್ಯಕ್ಷರಾದ ರಾಜಶೇಖರ ಶಿಳ್ಳಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆಯ ರವೀಂದ್ರನಾಥ ರವೀಂದ್ರ ಕುಮಾರ್ ಆಹಾರ ಸುರಕ್ಷತಾಧಿಕಾರಿ ಡಾ. ರತ್ನಾಕರ್ ತೋರಣ್, ಶ್ರೀಶೈಲ ಮಲ್ಲ, ಹಿರಿಯ ಉದ್ಯಮಿಗಳಾದ ಸತೀಶ್ ಗುತ್ತೇದಾರ್, ಮಾಜಿ ಗೌರವಾಧ್ಯಕ್ಷ ವಿಷ್ಣುಮೂರ್ತಿ ಛಾತ್ರಾ, ಸಾಹಿತಿಗಳಾದ ಏ.ಕೆ ರಾಮೇಶ್ವರ, ಎ. ಕೆ.ರಾಮೇಶ್ವರ ಸಿಎಸ್ ಆನಂದ ಉದ್ಯಮಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಎಂ ಕಡೇಚೂರ್, ಸುರೇಶ್ ಗುತ್ತೇದಾರ್ ಮಟ್ಟೂರು ತಿಮ್ಮಪ್ಪ ಗಂಗಾವತಿ ಅಂಬಯ್ಯ ಗುತ್ತೇದಾರ ಅಲ್ಪಸಂಖ್ಯಾತರ ನಿಗಮದ ವ್ಯವಸ್ಥಾಪಕರಾದ ರವಿ, ರಾಜೇಶ್ ಡಿ. ಗುತ್ತೇದಾರ್, ಪ್ರಶಾಂತ ಶೆಟ್ಟಿ ಇನ್ನಾ, ಚಂದ್ರಶೇಖರ್ ಶೆಟ್ಟಿ, ಸಂತೋಷ ಪೂಜಾರಿ, ಶಿವರಾಜ್ ಕೋಟ್ಯಾನ್, ಸುರೇಶ್ ಬಡಿಗೇರ್, ಮೋಹನ ಸೀತನೂರ್, ಮಾನಯ್ಯ ಬಡಿಗೇರ್, ಓಬಿಸಿ ಕಲಬುರಗಿ ದಕ್ಷಿಣದ ಅಧ್ಯಕ್ಷ ಧರ್ಮರಾಜ್ ಹೇರೂರ್, ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಎಸ್ ಮಾಲಿ ಪಾಟೀಲ್ ರಮೇಶ್ ಬಂಧು, ಮೊಯಿನುದ್ದಿನ್, ಲಕ್ಷ್ಮಣ ರಾವ್ ಪೋಲಿಸ್ ಪಾಟೀಲ್ ಮತ್ತಿತರರಿದ್ದರು. ಮಾಲಾ ಕಣ್ಣಿ ನಿರೂಪಿಸಿ ವಂದಿಸಿದರು.ಹೋಟೆಲ್ ಅಸೋಸಿಯೇಷನ್ ನೂತನ ಸಮಿತಿ:

ಇಲ್ಲ ಹೋಟೆಲ್ ಅಸೋಸಿಯೇಷನ್‌ನ 3 ವರ್ಷಗಳ ಅವಧಿಗೆ ನರಸಿಂಹ ಮೆಂಡನ್ (ಅಧ್ಯಕ್ಷ) ರಾಜಶೇಖರ್ ಶೆಳ್ಳಗಿ (ಗೌರವಾಧ್ಯಕ್ಷರು) ಮಹಾಕೀರ್ತಿ ಶೆಟ್ಟಿ (ಪ್ರಧಾನ ಕಾರ್ಯದರ್ಶಿ) ಅವಿನಾಶ್ ಹಾರಕೂಡ (ಸಹಕಾರ್ಯ ದರ್ಶಿ) ಉಪಾಧ್ಯಕ್ಷರಾಗಿ ಶರಣು ಪಾಟೀಲ್, ಗಿರಿಧರ ಭಟ್ (ವಸತಿ ವಿಭಾಗ) ಸುನಿಲ್ ಶೆಟ್ಟಿ (ಖಜಾಂಚಿ) ಮಾಲಾ ಕಣ್ಣಿ (ಪ್ರಚಾರ ಕಾರ್ಯದರ್ಶಿ) ಆಗಿ ಆಯ್ಕೆ ಹೊಂದಿದ್ದಾರೆ.

Share this article