ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ: ವಿ.ಪಿ. ಶಶಿಧರ್

KannadaprabhaNewsNetwork |  
Published : Jun 28, 2026, 03:45 AM IST
ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ | Kannada Prabha

ಸಾರಾಂಶ

ಸಮಾಜ ಸೇವೆ ಮೂಲಕ ಇತರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕೈಜೋಡಿಸುತ್ತಿರುವ ಕೊಡಗು ಜಿಲ್ಲೆಯ ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅಭಿಪ್ರಾಯಪಟ್ಟರು.

ಕುಶಾಲನಗರ: ಸಮಾಜ ಸೇವೆ ಮೂಲಕ ಇತರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕೈಜೋಡಿಸುತ್ತಿರುವ ಕೊಡಗು ಜಿಲ್ಲೆಯ ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅಭಿಪ್ರಾಯಪಟ್ಟರು.ಮಾಧ್ಯಮ ಸ್ಪಂದನ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ರಕ್ತನಿಧಿ ಕೇಂದ್ರ ಹಾಗೂ ಸೈರಸ್ ಆಸ್ಪತ್ರೆ ಆಶ್ರಯದಲ್ಲಿ ಕುಶಾಲನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಧ್ಯಮ‌ ಸ್ಪಂದನದ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಸಹಾಯಕ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಸಹಕಾರ ಮಾಡುವ ಮನಸ್ಥಿತಿ ಬರಬೇಕು. ಸೇವಾ ಕಾರ್ಯಗಳು ಸನ್ಮಾನ ಗೌರವಗಳಿಗೆ ಸೀಮಿತವಾಗಬಾರದು ಎಂದರು.

ರಕ್ತದಾನ ಶಿಬಿರದ ಮೂಲಕ ಸಂಗ್ರಹಿಸುವ ರಕ್ತ ರಕ್ತನಿಧಿ ಕೇಂದ್ರಕ್ಕೆ ನೀಡಲಾಗುತ್ತದೆ‌. ಇದರಲ್ಲಿ ಯಾವುದೇ ರೀತಿಯ ದುರುಪಯೋಗ ಅಸಾಧ್ಯ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ ಮಾತನಾಡಿ, ಇಂತಹ ಶಿಬಿರಗಳು ಹಲವಾರು ಜೀವಗಳನ್ನು ಉಳಿಸಲು ಸಹಕಾರಿ ಆಗುತ್ತದೆ ಎಂದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಮಾಧ್ಯಮ ಸ್ಪಂದನ ತಂಡ 2019 ರಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ ಎಂದರು. ಜಿ‌.ಎಲ್. ನಾಗರಾಜ್ ಗೌರವ ಅತಿಥಿಯಾಗಿದ್ದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿದರು. ಶಿಬಿರದ ಸಂಚಾಲಕ ಕೆ.ಬಿ‌. ಶಂಶುದ್ಧೀನ್ ಅಧ್ಯಕ್ಷತೆ ವಹಿಸಿದ್ದರು.

ಕೊಡಗು ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಕೆ.ಪಿ. ಕರುಂಬಯ್ಯ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡಿದರು. ಮಾಧ್ಯಮ ಸ್ಪಂದನ ತಂಡದ ಸದಸ್ಯ ರೆಜಿತ್ ಕುಮಾರ್ ನಿರೂಪಿಸಿದರು. ಟಿ.ಆರ್‌. ಪ್ರಭುದೇವ್ ಸ್ವಾಗತಿಸಿದರು. ಎಚ್‌.ಸಿ‌. ಜಯಪ್ರಕಾಶ್ ವಂದಿಸಿದರು.

ಸೈರಸ್ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸೆ ತಜ್ಞ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ಪಿ. ಜಿನಾಶ್, ಡಾ. ಜೈನುಲ್ ಅಬಿದೀನ್, ಹಾಸಿರ್, ವ್ಯವಸ್ಥಾಪಕ ಅಕ್ಷತ್, ಮಾಧ್ಯಮ ಸ್ಪಂದನ ತಂಡದ ಸದಸ್ಯ ವಿ.ವಿ. ಅರುಣ್, ಕುಶಾಲನಗರ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಎಚ್.ವಿ. ವಿನೋದ್, ರಘು ಹೆಬ್ಬಾಲೆ, ನಾಗರಾಜ ಶೆಟ್ಟಿ, ಮೊಹಮ್ಮದ್ ಮುಸ್ತಫಾ, ಕೆ.ಜೆ. ಶಿವರಾಜ್, ಕುಡೆಕಲ್ ಗಣೇಶ್, ಕರುಣ್ ಕಾಳಯ್ಯ, ಪಿ.ವಿ. ಅಕ್ಷಯ್, ಪ್ರದೀಪ್, ಮಾಧ್ಯಮ ಸ್ಪಂದನ ಸದಸ್ಯರು, ರಕ್ತ ನಿಧಿ ಕೇಂದ್ರದ ಸಿಬ್ಬಂದಿ, ಸೈರಸ್ ಆಸ್ಪತ್ರೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ