ಕನ್ನಡಪ್ರಭ ವಾರ್ತೆ ತರೀಕೆರೆ
ಭಾಷಾ ಬೆಳವಣಿಗೆಗೆ ರಂಗಭೂಮಿ ಮಹತ್ವದ ಕೊಡುಗೆ ನೀಡಿದೆ ಎಂದು ಜಿಲ್ಲಾ ಕನ್ನಡ ,ಸಾಹಿತ್ಯ ಪರಿಷತ್ತು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಸದ್ವಿದ್ಯಾ ಶಾಲೆ ಆವರಣದಲ್ಲಿ ಏರ್ಪಾಡಾಗಿದ್ದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯದಲ್ಲಿ ರಂಗ ಶಿಕ್ಷಣ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಹುಟ್ಟಿದ ಮಗುವಲ್ಲೂ ಕಲೆ ಎನ್ನುವುದು ಇರುತ್ತದೆ, ಕಲೆಯನ್ನು ಅಭಿವೃದ್ದಿಗೊಳಿಸಲು ಪರಿಸರವನ್ನು ಅವಲೋಕಿಸಬೇಕು, ಮೌನ ಕೂಡ ಅರ್ಥ ಕೊಡುತ್ತದೆ, ಶಾಲೆಯ ಕಲಿಕೆಗೂ ರಂಗ ಕಲಿಕೆಗೂ ಒಂದು ಗೆರೆಯ ವ್ಯತ್ಸಾಸವಿರುತ್ತದೆ, ಶುದ್ದ ಭಾಷೆಗೆ ಧ್ವನಿ ಕೊಟ್ಟಿದ್ದೇ ರಂಗಭೂಮಿ, ನಾಟಕ ಎನ್ನುವುದು ಒಂದು ಕ್ರಿಯಾಪದ, ಮನಸ್ಸಿನ ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕು, ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ರಂಗ ಶಿಕ್ಷಣ ಹೇಳಿಕೊಡುತ್ತದೆ ಎಂದು ಹೇಳಿದರು.ಸಾಂಸ್ಕೃತಿಕ ಮೌಲ್ಯವನ್ನು ರಂಗಶಿಕ್ಷಣ ಕಟ್ಟಿಕೊಡುತ್ತದೆ, ಬೇರೆ ಶಿಕ್ಷಣಕ್ಕಿಂಕ ರಂಗ ಶಿಕ್ಷಣಕ್ಕೆ ವ್ಯತ್ಯಾಸ ಇದೆ, ರಂಗ ಶಿಕ್ಷಣದಲ್ಲಿ ಹಾವಭಾವಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳ್ಳಬೇಕು, ವಿದ್ಯೆಯು ನಯ ವಿನಯ,ವಿದೇಯತೆಯನ್ನು ತಂದುಕೊಡುತ್ತದೆ, ಮಕ್ಕಳು ಉತ್ತಮ ಪ್ರಜೆಗಳಾಗಬೇಕು, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸದ್ವಿದ್ಯಾ ವಿದ್ಯಾ ಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಶಾಲಾ ಮಕ್ಕಳಿಗೆ ರಂಗಪ್ರಯೋಗ, ರಂಗೆ ಕಲೆ ಇವುಗಳ ಬಗ್ಗೆ ರಂಗಶಿಕ್ಷಣ ದೊರಕಬೇಕು, ಮಕ್ಕಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಇರುತ್ತದೆ ಎಂದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ, ಸದ್ವಿದ್ಯಾ ವಿದ್ಯಾ ಶಾಲೆ ಅತ್ಯಂತ ವ್ಯವಸ್ಥಿತವಾಗಿ ಮತ್ತು ಚೆನ್ನಾಗಿ ನೆಡೆಯುತ್ತಿದೆ. ಆಸಾಧ್ಯವಾದುದನ್ನು ಸಾಧ್ಯ ಮಾಡಿದ್ದಾರೆ, ಸಾವಿರಾರು ಮಕ್ಕಳ ಜೀವನವನ್ನು ಶಾಲೆ ರೂಪಿಸುತ್ತಿದೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನಿತ ಕಿರಣ್ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ಶಾಲೆಯ ಮುಖ್ಯೋಪಾಧ್ಯಾಯಿನಿ ಹರ್ಷಿಣಿ, ಕುಮಾರಸ್ವಾಮಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿದ್ಯಾರ್ಥಿಗಳಿಂದ ಶ್ರಾವಣ ಸಂಜೆ ರೂಪಕವನ್ನು ಏರ್ಪಡಿಸಲಾಗಿತ್ತು.