ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಡಾ. ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರವು ಶುಕ್ರವಾರ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕಯುತ ಸಂಸದೀಯಪಟು ವೈ. ರಾಮಕೃಷ್ಣ ಅವರ ಸಾಧನೆಗಳು ಬದುಕು, ಸಂಘಟನೆ ಮತ್ತು ರಾಜಕಾರಣ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವೈ. ರಾಮಕೃಷ್ಣ ಅವರು ವಿಧಾನಸಭೆಯಲ್ಲಿ ಮಾತನಾಡುವಂತಹ ಶೈಲಿಯೇ ಆಕರ್ಷಣೆಯಾಗಿತ್ತು. ರಾಜಕೀಯ ಪಕ್ಷಗಳು ಇವರನ್ನು ನಾಯಕನಾಗಿ ಮಾಡಿಕೊಳ್ಳಬೇಕೆಂದು ಪ್ರೋತ್ಸಾಹ ನೀಡುತ್ತಿದ್ದರು. ಇವರ ನಡವಳಿಕೆ, ಭಾಷಣಗಳು, ಕಮಿಟ್ ಮೆಂಟ್ ಗಳು ಇವರನ್ನು ಇಲ್ಲಿಯವರೆಗೂ ಕರೆ ತಂದಿತು. ಇವರು ಯಾರ ಜೊತೆ ಇದ್ದರೂ ರಾಯಲ್ ಆಗಿ ಸಿನ್ಸಿಯರ್ ಆಗಿ ಇರುತ್ತಿದ್ದರು ಎಂದು ಅವರು ಹೇಳಿದರು.ರಾಮಕೃಷ್ಣ ಅವರು ಕರ್ನಾಟಕದ ಜನಪ್ರಿಯ ರಾಜಕಾರಣಿಯಾಗಿದ್ದರು. ಸಾಮಾಜಿಕ ಸುಧಾರಣೆಗಾಗಿ, ಬದ್ಧತೆಗಾಗಿ, ಸಮಾಜದಲ್ಲಿ ಸುಧಾರಣೆ ತರಬೇಕೆಂದು ಹೋರಾಡಿದವರು ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಶ್ರಮಿಸಿದವರು ಎಂದು ಅವರು ಸ್ಮರಿಸಿದರು.
----
ಕೋಟ್...ಒಳಮೀಸಲಾತಿಗಾಗಿ ಹೆಚ್ಚು ಹೋರಾಟ ಮಾಡಿದವರು ವೈ. ರಾಮಕೃಷ್ಣ ಅವರು ಒಳಮೀಸಲಾತಿಗಾಗಿ ಉತ್ತಮವಾದಂತಹ ಕೊಡುಗೆ ನೀಡಿದ್ದಾರೆ. ಇಂತಹ ಲೀಡರ್ ಕರ್ನಾಟಕದಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ. ನಾವೆಲ್ಲರೂ ಜಾತಿ ಜಾತಿ ಎಂದು ಬೇಧ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಸಮಬಾಳ್ವೆಯಿಂದ ಬದುಕಬೇಕು. ಜೊತೆಗೆ ಇಂತಹ ಮಹಾನ್ ವ್ಯಕ್ತಿಗಳ ಹೆಸರು ಸವಿನೆನಪಾಗಿ ಉಳಿಯುವಂತೆ ಮಾಡಬೇಕು.
- ಸಿ.ಎಂ. ಇಬ್ರಾಹಿಂ, ಕೇಂದ್ರದ ಮಾಜಿ ಸಚಿವ