ಟಿಂಟ್‌... ರೌಡಿಸಂ ಚಟುವಟಿಕೆಗಳ ನಿಯಂತ್ರಣ: ಎಸ್ಪಿ

KannadaprabhaNewsNetwork |  
Published : Jan 07, 2026, 02:15 AM IST
5ಕೆಜಿಎಫ್‌2 | Kannada Prabha

ಸಾರಾಂಶ

ಹಾಜರಾಗಿದ್ದ ರೌಡಿ ಶೀಟರ್‌ಗಳಿಗೆ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ, ಸಾರ್ವಜನಿಕ ನೆಮ್ಮದಿಗೆ ತೊಂದರೆ ನೀಡದೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಲು ತಿಳುವಳಿಕೆ ನೀಡಿದರು.

ಕೆಜಿಎಫ್:ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಜಿಲ್ಲೆಯಲ್ಲಿ ಎಸ್‌ಪಿ ಶಿವಾಂಶು ರಜಪೂತ್ ಮತ್ತು ಡಿವೈಎಸ್‌ಪಿ ವಿ. ಲಕ್ಷ್ಮಯ್ಯ ನೇತೃತ್ವದಲ್ಲಿ ರೌಡಿ ಪೆರೇಡ್ ಅನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಪಿ ಶಿವಾಂಶು ರಜಪೂತ್, ಕೆಜಿಎಫ್ ಪೊಲೀಸ್ ಘಟಕದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 664 ರೌಡಿ ಶೀಟರ್‌ಗಳಿದ್ದು ಆ ಪೈಕಿ ಭಾನುವಾರ ನಡೆಸಲಾದ ರೌಡಿ ಪೆರೇಡ್‌ಗೆ ಒಟ್ಟು 280 ಮಂದಿ ಹಾಜರಾಗಿದ್ದರು. ಹಾಜರಾಗಿದ್ದ ರೌಡಿ ಶೀಟರ್‌ಗಳಿಗೆ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ, ಸಾರ್ವಜನಿಕ ನೆಮ್ಮದಿಗೆ ತೊಂದರೆ ನೀಡದೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಲು ತಿಳುವಳಿಕೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ (ಸೋಷಿಯಲ್ ಮೀಡಿಯಾ) ರೌಡಿ ವರ್ತನೆಗಳನ್ನು ತೋರಿಸುವ ರೀತಿಯಲ್ಲಿ ಪೋಸ್ಟ್ ಮತ್ತು ರೀಲ್ಸ್ ಮಾಡುವವರ ವಿರುದ್ದ ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ರೌಡಿ ಪೆರೇಡ್‌ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಎಸ್.ಟಿ.ಮಾರ್ಕೊಂಡಯ್ಯ, ಪಿ.ಎಂ.ನವೀನ್, ದಯಾನಂದ್, ರಂಗಶಾಮಯ್ಯ, ಆರ್.ಪಿ.ಐ ಸೋಮಶೇಖರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳಾದ ಬಿ.ಮಂಜುನಾಥ, ಚಂದ್ರಶೇಖರ್, ಗುರುರಾಜ ಚಿಂತಾಕಲ, ಸಂಗಮೇಶ್ ಕೋಲ್ಹಾರ್, ಕೃಷ್ಣಮೂರ್ತಿ, ರಾಜಣ್ಣ.ಎಸ್.ವಿ. ಎನ್.ಪಿ.ಸಿಂಗ್, ಲಕ್ಷ್ಮೀನಾರಾಯಣ, ಮಾಲಾ ಜಿ. ಹಾಜರಿದ್ದರು. ೫ಕೆಜಿಎಫ್೨ನಗರದ ಚಾಂಪಿಯನ್‌ರೀಪ್ಸ್‌ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೌಡಿ ಪೆರೇಡ್‌ನಲ್ಲಿ ಎಸ್‌ಪಿ ಶಿವಾಂಶು ರಜಪೂತ್ ರೌಡಿ ಆಸಾಮಿಗಳಿಗೆ ಸನ್ನಡತೆಯಿಂದ ನಡೆದುಕೊಳ್ಳುವಂತೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬೈನಿಂದ ಊಟಿಯವರೆಗೆ ಸೈಕಲ್ ಪ್ರವಾಸ
ಸಾಹೇಬ್ರ ನೀರ್ ಬರದಿದ್ರ ನಾವ್ ಬರ್ಬಾದಾಗ್ತೇವ್ರಿ: ರೈತರ ಅಳಲು