ಮಾನ್ವಿಯಲ್ಲಿ ಸಿಸಿ ರಸ್ತೆ ಕಾಮಗಾರಿ ವಿಚಾರಕ್ಕೆ ಗಲಾಟೆ

KannadaprabhaNewsNetwork |  
Published : Nov 20, 2024, 12:33 AM IST
19-ಮಾನ್ವಿ-1 | Kannada Prabha

ಸಾರಾಂಶ

ಮಾನ್ವಿ: ರಸ್ತೆ ಕಾಮಗಾರಿ ವಿಚಾರಕ್ಕೆ ಅಧಿಕಾರಿಗಳು, ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾದ ಘಟನೆ ಸೋಮವಾರ ತಡರಾತ್ರಿ ಪಟ್ಟಣದಲ್ಲಿ ಜರುಗಿದೆ.

ಮಾನ್ವಿ: ರಸ್ತೆ ಕಾಮಗಾರಿ ವಿಚಾರಕ್ಕೆ ಅಧಿಕಾರಿಗಳು, ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾದ ಘಟನೆ ಸೋಮವಾರ ತಡರಾತ್ರಿ ಪಟ್ಟಣದಲ್ಲಿ ಜರುಗಿದೆ.

ಪರಿಶಿಷ್ಟ ಜಾತಿಗೆ ಮೀಸಲಿನ ಹಣವನ್ನು ದುರ್ಬಳಕೆ ಮಾಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಪುರಸಭೆ ಕಾರ್ಯಾಲಯದವರೆಗೆ ಕೆಕೆಆರ್ಡಿಬಿ ಎಸ್ಡಿಪಿ ಅನುದಾನದಲ್ಲಿ ಸುಮಾರು 1 ಕೋಟಿ ರು. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಈ ವೇಳೆ ಪರಸ್ಪರ ಮಾತಿನ ಚಕಮಕಿ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ತಕ್ಷಣ ಎಚ್ಚೇತ್ತ ಪೊಲೀಸರು ಗುಂಪು ಚದುರಿಸಲು ಲಘು ಲಾಟಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಸ್ಥಳಕ್ಕೆ ಲೋಕಪಯೋಗಿ ಇಲಾಖೆಯ ಜೆಇ ಸಂತೋಷ ಆಗಮಿಸಿ ಕಾಮಗಾರಿಯ ವಿವರ ನೀಡಿದರು. ಮಾನ್ವಿ ಪೊಲೀಸ್ ಠಾಣೆಯ ಪಿಐ ವೀರಭದ್ರಯ್ಯ ಹಿರೇಮಠ ಎರಡು ಪಕ್ಷದ ಮುಖಂಡರ ಮನವೋಲಿಸಿ ಯಾವುದೆ ಅಹಿತಕಾರ ಘಟನೆಗಳು ನಡೆಯದಂತೆ ನೋಡಿಕೊಂಡರು.

ಬಿಜೆಪಿ ಮುಖಂಡರಾದ ಅಯ್ಯಪ್ಪನಾಯಕ ಮ್ಯಾಕಲ್, ಹನುಮೇಶ ನಾಯಕ ಸಾದಪೂರ್, ರಾಯಪ್ಪ ವಕೀಲರು, ಗುರುಸಿದ್ದಪ್ಪ ಕಣ್ಣುರು, ನರಸಿಂಹ ನಾಯಕ ಕರಡಿಗುಡ್ಡ, ಬಸವರಾಜ ನಕ್ಕುಂದಿ ಸೇರಿದಂತೆ ಇತರ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!