ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ದೈವಾರಾಧಕ ಉಮೇಶ್ ಪಂಬದ ಗಂಧಕಾಡು, ಹಿರಿಯ ಪಾಡ್ದನ ಕಲಾವಿದೆ ಸಿಂಧೂ ಗುಜರನ್ ಮೈಲೊಟ್ಟು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಪಾಡ್ದನದ ಹಾಡುಗಳ ಮೂಲಕ ತುಳು ಸಂಸ್ಕೃತಿಯನ್ನು ಜೀವಂತವಾಗಿಡುವಲ್ಲಿ ಸಿಂಧು ಗುಜರನ್ ಅವರ ಕೊಡುಗೆ ಅಪಾರವಾಗಿದೆ. ಉಮೇಶ್ ಪಂಬದ ಗಂಧಕಾಡು ಅವರು ಧೈವಾರಾಧನೆಯಲ್ಲಿ ತೊಡಗಿಸಿಕೊಂಡು ಧರ್ಮ ಸೇವಾ ನಿಷ್ಠೆಯನ್ನು ತೋರುವ ಮೂಲಕ ತುಳು ನೆಲದ ಆರಾಧನಾ ಪರಂಪರೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.ಡಾ.ಗಣನಾಥ ಎಕ್ಕಾರ್ ಉದ್ಘಾಟನೆ ನೆರವೇರಿಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಅಪಸ್ವರ ಇರದಂತೆ ಕಳೆದ 2 ವರ್ಷಗಳಿಂದ ನೀಡಲಾಗುತ್ತಿದ್ದು, ಎಲೆ ಮರೆಯ ಕಾಯಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ನಮ್ಮ ತುಳುನಾಡಿನ ಈ ಹಿರಿಯ ಚೇತನರನ್ನು ಆಯ್ಕೆ ಮಾಡಿದ್ದು ಶ್ಲಾಘನೀಯ ಎಂದರು. ಜಾನಪದ ಕಲಾವಿದರು ಯಾವುದೇ ಪ್ರತಿಫಲವನ್ನು ಬಯಸದೆ ಸೇವಾ ನಿರತರಾಗಿರುತ್ತಾರೆ, ಇಂತಹವರನ್ನು ಗುರುತಿಸುವ ಕೆಲಸ ಆಗಬೇಕು ಎಂದರು.
ಪಾಡ್ದನ ಹೇಳುವುದಲ್ಲ, ಅದು ಕಟ್ಟುವುದು. ಪಾಡ್ದನ ಕಟ್ಟುವ ಕಲೆ ಎಂದ ಅವರು, ಪಾಡ್ದನ ಮನೋರಂಜನೆಗಾಗಿ ಅಲ್ಲ, ದೈವಾರಧನೆಯು ತುಳುನಾಡಿನ ಶಕ್ತಿ ಮೂಲಸೆಲೆಯಾಗಿದೆ ಎಂದರು.ಪ್ರಮುಖರಾದ ಚಂಚಲಾ ತೇಜೋಮಯ, ಅಕ್ಷಯ ಶೆಟ್ಟಿ ಇದ್ದರು.