ಕನಕದಾಸರ ಜೀವನ ಮೌಲ್ಯ ತಿಳಿಯಿರಿ

KannadaprabhaNewsNetwork |  
Published : Nov 09, 2025, 03:00 AM IST
೦೮ ವೈಎಲ್‌ಬಿ ೦೧ಯಲಬುರ್ಗಾದಲ್ಲಿ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕು ತಿದ್ದಿದ ಮಹಾನ್ ದಾರ್ಶನಿಕರು

ಯಲಬುರ್ಗಾ: ಸಾಮಾಜಿಕ ನ್ಯಾಯ ಮತ್ತು ಏಕತೆಗಾಗಿ ಶ್ರಮಿಸಿದ ಕನಕದಾಸರ ಜೀವನ ಮೌಲ್ಯ ಎಲ್ಲರೂ ತಿಳಿಯಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದಲ್ಲಿ ತಾಲೂಕಾಡಳಿತದಿಂದ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.

ದಾಸಶ್ರೇಷ್ಟರಲ್ಲಿ ಕನಕದಾಸರು ಒಬ್ಬರು. ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಾರ್ಶನಿಕರನ್ನು ಯಾವುದೆ ಜಾತಿಗೆ ಸೀಮಿತಗೊಳಿಸಬಾರದು. ಮಹಾತ್ಮರು ಸಾಮಾಜಿಕ ಸಮಾನತೆ ಕುರಿತಂತೆ ಸಮಾಜಕ್ಕೆ ನೀಡಿದ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹಾಲುಮತ ಸಮಾಜದ ತಾಲೂಕಾಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿ, ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕು ತಿದ್ದಿದ ಮಹಾನ್ ದಾರ್ಶನಿಕರು. ಇವರ ಜೀವನ ತತ್ವಗಳು ಇಂದಿನ ಪೀಳಿಗೆಗೆ ಮಾದರಿ ಎಂದರು.

ಈ ಸಂದರ್ಭ ತಾಪಂ ಇಒ ನೀಲಗಂಗಾ ಬಬಲಾದ, ಪಪಂ ಮುಖ್ಯಾಧಿಕಾರಿ ನಾಗೇಶ, ಬಿಇಒ ಅಶೋಕ ಗೌಡರ, ಶೇಖರಗೌಡ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಕೆರಿಬಸಪ್ಪ ನಿಡಗುಂದಿ, ಸಾವೀತ್ರಿ ಗೊಲ್ಲರ್, ರಾಮಣ್ಣ ಸಾಲಭಾವಿ, ಆನಂದ ಉಳ್ಳಾಗಡ್ಡಿ, ಗದ್ದೇಪ್ಪ ಕುಡಗುಂಟಿ, ಹನುಮಂತಪ್ಪ ಕುರಿ, ಹನುಮಂತಪ್ಪ ಹನುಮಾಪುರ, ಶರಣಪ್ಪ ಗಾಂಜಿ, ಯಲ್ಲಪ್ಪ ಹೊಸ್ಮನಿ, ದೊಡ್ಡಯ್ಯ ಗುರುವಿನ, ಬಾಲಚಂದ್ರ ಸಾಲಭಾವಿ, ಶಿವಣ್ಣ ರಾಜೂರ, ರೇವಣಪ್ಪ ಹಿರೇಕುರುಬರ, ಅಮರೇಶ ಹುಬ್ಬಳ್ಳಿ, ಡಾ. ನಂದಿತಾ ದಾನರಡ್ಡಿ, ಹನುಮಂತಪ್ಪ ಭಜಂತ್ರಿ, ವಸಂತ ಭಾವಿಮನಿ, ಈಶ್ವರ ಅಟಮಾಳಗಿ, ಮಲ್ಲು ಜಕ್ಕಲಿ ಸೇರಿದಂತೆ ಮತ್ತಿತರರು ಇದ್ದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ