ಗದಗ: ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ದಾರ್ಶನಿಕರು ಸಮಸ್ತ ಭಾರತದ ಜನತೆಗೆ ಕಾಲ, ಕಾಲಕ್ಕೆ ಧರ್ಮದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡಿದ್ದು, ಅದರಲ್ಲಿ ಕನಕದಾಸರು ದಾಸರ ಪದಗಳಿಂದ ಜನಸಾಮಾನ್ಯರಿಗೆ ಮನ ಮುಟ್ಟುವ ಹಾಗೆ ಧರ್ಮದ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಇಂದಿನ ನಮ್ಮ ಪೀಳಿಗೆಗೆ ಇದು ಸಹಾಯಕವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪುರ ಹಾಗೂ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿದರು.
ರಾಘವೇಂದ್ರ ಯಳವತ್ತಿ, ಸುರೇಶ ಮರಳಪ್ಪನವರ, ಶ್ರೀಪತಿ ಉಡುಪಿ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಅಶೋಕ ಕರೂರ, ಚನ್ನಮ್ಮ ಹುಳಕಣ್ಣವರ, ಕಮಲಾಕ್ಷೀ ಗೊಂದಿ, ಕುಮಾರ ಮಾರನಬಸರಿ, ರವಿ ವಗ್ಗನವರ, ಸುರೇಶ ಚಿತ್ತರಗಿ, ಶಂಕರ ಕಾಕಿ, ಅಪ್ಪಣ್ಣ ಟೆಂಗಿನಕಾಯಿ, ಸುಭಾಸ ಸುಂಕದ, ಮೋಹನ ಕೋರಿ, ಮೋಹನ ಮದ್ದಿನ, ರಾಜು ಕುಲಕರ್ಣಿ, ರವಿ ಮಾನ್ವಿ, ಗೋಪಾಲ ನಾಯಕ, ರೇಣುಕಾರಾಜ ಗುಡಸಲಮನಿ, ದೇವರಪ್ಪ ಪೂಜಾರ ಹಾಗೂ ಪ್ರಮುಖರು ಇದ್ದರು.ಬಿಜೆಪಿ ರೋಣ ಮಂಡಲದಿಂದ ಕನಕದಾಸರ ಜಯಂತಿ ಆಚರಣೆ: ಗಜೇಂದ್ರಗಡ ಪಟ್ಟಣದ ಬಿಜೆಪಿ ರೋಣ ಮಂಡಲದ ವತಿಯಿಂದ ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಲ್ಲಿ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಯಿತು.
ಮಾಜಿ ಸಚಿವ ಕಳಕಪ್ಪ ಬಂಡಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಕನಕದಾಸರು ಸಾಹಿತ್ಯ ವಿವಿಧ ಪ್ರಕಾರಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲದೆ ಸಂಗೀತ ಕ್ಷೇತ್ರಕ್ಕೆ ಮಂಡಿಗೆಗಳ ರೂಪದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳು ಸಮಾಜವನ್ನು ಪ್ರೇರೇಪಿಸುವ ಜತೆಗೆ ಉನ್ನತಿಗೊಳಿಸುತ್ತವೆ. ಸಂತ ಹಾಗೂ ತತ್ವಜ್ಞಾನಿಯಾದ ಕನಕದಾಸರ ಜೀವನ ಬೋಧನೆಗಳು ಲಕ್ಷಾಂತರ ಜನರಿಗೆ ಮಾರ್ಗದರ್ಶನದ ಜತೆಗೆ ಸ್ಫೂರ್ತಿಯಾಗಿವೆ. ಹೀಗಾಗಿ ಕನಕದಾಸರ ಆದರ್ಶಗಳನ್ನು ಯುವ ಸಮೂಹ ಪಾಲಿಸಬೇಕು ಎಂದರು.ಈ ವೇಳೆ ಉಮೇಶ ಮಲ್ಲಾಪುರ, ಭಾಸ್ಕರ ರಾಯಬಾಗಿ, ಶಿವಾನಂದ ಮಠದ, ರಾಜೇಂದ್ರ ಘೋರ್ಪಡೆ, ಬಾಳಾಜಿರಾವ ಭೋಸಲೆ, ಅಂದಪ್ಪ ಅಂಗಡಿ, ರಂಗನಾಥ ಮೇಟಿ, ಸಂಜೀವಪ್ಪ ಲೆಕ್ಕಿಹಾಳ, ಯಮನಪ್ಪ ತಿರಕೋಜಿ, ಸುಗೂರೇಶ ಕಾಜಗಾರ, ಬಾಳು ಗೌಡರ, ಸುಭಾಸ ಹಡಪದ, ದೇವರಾಜ ವರಗರ, ಮಲ್ಲು ಕುರಿ, ಕಳಕೇಶ ರಾಠೋಡ, ರಾಜೇಖಾನ್ ಮುನ್ನಾ ಇದ್ದರು.