ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ: ರವೀಂದ್ರ ನಾಯ್ಕ

KannadaprabhaNewsNetwork |  
Published : Nov 09, 2025, 03:00 AM IST
ಒಕ್ಕಲೆಬ್ಬಿಸುವ ಆದೇಶ ಪ್ರತಿ ಪ್ರದರ್ಶಿಸಿದರು  | Kannada Prabha

ಸಾರಾಂಶ

ಕಾನೂನು ಮತ್ತು ಸರ್ಕಾರದ ಆದೇಶ ಉಲ್ಲಂಘಿಸಿ, ರಾಜ್ಯದಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಮತ್ತು ಆದೇಶ ಮಾಡಲಾಗುತ್ತಿದೆ.

ಶಿರಸಿಯಲ್ಲಿ ನ.11ರಂದು ಸಮಾಲೋಚನೆಕನ್ನಡಪ್ರಭ ವಾರ್ತೆ ಕಾರವಾರ

ಕಾನೂನು ಮತ್ತು ಸರ್ಕಾರದ ಆದೇಶ ಉಲ್ಲಂಘಿಸಿ, ರಾಜ್ಯದಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಮತ್ತು ಆದೇಶ ಮಾಡಲಾಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ ಅರಣ್ಯವಾಸಿಗಳಿಗೆ ತೊಂದರೆ ಮಾಡುವ ಅರಣ್ಯಾಧಿಕಾರಿಯ ತಪ್ಪು ನೀತಿಯಿಂದ ಅರಣ್ಯವಾಸಿಗಳಿಗೆ ಅನ್ಯಾಯ ಆಗುತ್ತಿದ್ದು, ಈ ಹಿನ್ನೆಲೆ ಶಿರಸಿಯಲ್ಲಿ ನ.11 ರಂದು ಸಮಾಲೋಚನೆ ಸಭೆ ಏರ್ಪಡಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅರಣ್ಯಾಧಿಕಾರಿಗಳು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಹಾಗೂ ಒಕ್ಕಲೆಬ್ಬಿಸುವಿಕೆಯ ಆದೇಶದ ಪ್ರತಿ ಪ್ರದರ್ಶಿಸಿದರು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಚಟುವಟಿಕೆ ಮತ್ತು ಸಾಗುವಳಿಗೆ ಆತಂಕ ಗೊಳಿಸಬಾರದು ಹಾಗೂ ಅರ್ಜಿ ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವವರೆಗೆ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸತಕ್ಕದ್ದಲ್ಲ ಅಥವಾ ಯಾವುದೇ ಪ್ರಕ್ರಿಯೆ ಜರುಗಿಸದಂತೆ ನಿರ್ದೇಶನ ನೀಡದರೂ ಅರಣ್ಯಾಧಿಕಾರಿಗಳು ರಾಜ್ಯಾದ್ಯಂತ ಸರ್ಕಾರದ ಆದೇಶ ಮತ್ತು ಕಾನೂನು ನಿರ್ಲಕ್ಷಿಸುವುದನ್ನು ಖಂಡಿಸಿದರು.

ಸರ್ಕಾರವು ಅರಣ್ಯ ಒತ್ತುವರಿ ಮತ್ತು ಅರ್ಜಿದಾರನ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಮುಂದಿನ ಸೂಚನೆಯವರೆಗೆ ಒಕ್ಕಲೆಬ್ಬಿಸಬಾರದು ಹಾಗೂ ಏಪ್ರಿಲ್ 27, 1978ರ ನಂತರ 3 ಎಕರೆವರೆಗೆ ಅರಣ್ಯ ಒತ್ತುವರಿ ಮಾಡಿರುವ ಒತ್ತುದಾರರಿಗೆ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುವುದೆಂಬ ಸ್ಪಷ್ಟ ಸುತ್ತೋಲೆ ನೀಡಿದ್ದಾಗ್ಯೂ, ಕಾನೂನು ಬಾಹಿರ ಕೃತ್ಯ ಪದೇ ಪದೇ ಜರುಗುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಸಹಿತ ಅರಣ್ಯ ಹಕ್ಕು ಜಾರಿ, ಮಂಜೂರಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅರಣ್ಯವಾಸಿಗಳಿಗೆ ಆತಂಕಗೊಳಿಸದಂತೆ ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಹಾಗೂ ಮುಖ್ಯಕಾರ್ಯದರ್ಶಿ ಅವರಿಗೆ ಏ. 10, 2015ರಂದು ಲಿಖಿತ ನಿರ್ದೇಶನ ನೀಡಿದ್ದನ್ನು ರಾಜ್ಯದಲ್ಲಿ ಅರಣ್ಯಾಧಿಕಾರಿಗಳು ಪರಿಗಣಿಸದೇ ಇರುವುದು ಖೇದಕರವೆಂದು ಅವರು ತಿಳಿಸಿದರು.

ಕಾನೂನಾತ್ಮಕ ಅಂಶ ಸ್ಪಷ್ಟೀಕರಿಸುವ ಕುರಿತು ಹೋರಾಟಗಾರರ ವೇದಿಕೆಯು ನ.11ರ ಮುಂಜಾನೆ 10.30ಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೆನರಾ ಸರ್ಕಲ್ ಶಿರಸಿ ಕಚೇರಿಯಲ್ಲಿ ಸೌಹಾರ್ದಯುತ ಸಮಾಲೋಚನೆ ಸಭೆ ಜರುಗಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಜಿಲ್ಲಾ ಸಂಚಾಲಯಕ ಇಬ್ರಾಹೀಂ ಗೌಡಳ್ಳೀ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗನೂರು, ರಾಜೇಶ್ ಮಿತ್ರ ನಾಯ್ಕ ಸಂಚಾಲಕ, ಅಮೋಜ್, ಕಾಂಚನ ದೇಸಾಯಿ, ಕೆಂಚಲಯ್ಯ, ಮಾಬ್ಲೇಶ್ವರ ಹೊನ್ನಳಕರ್ ಉಳವಿ, ಪ್ರಕಾಶ್ ಕೃಷ್ಣ ಆಚಾರಿ ಮತ್ತು ಪುಷ್ಪಾ ಆಚಾರಿ ಇದ್ದರು.ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ವಿರುದ್ಧ ಕಾನೂನು ಹೋರಾಟ:

ಜಿಲ್ಲಾದ್ಯಂತ ಅರಣ್ಯ ಅತಿಕ್ರಮಣದಾರರನ್ನು ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ವಿಚಾರಣಾ ಪ್ರಾಧಿಕಾರದಿಂದ ನೊಟೀಸ್ ಜಾರಿ ಮಾಡಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಸುತ್ತಿರುವುದು ಕಾನೂನುಬಾಹಿರ. ಅರಣ್ಯ ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಕುಮಟಾ ಪಟ್ಟಣದಲ್ಲಿ ಅರಣ್ಯ ಹಕ್ಕು ಹೋರಾಟಗಾರರ ಸಭೆಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕ ಅರಣ್ಯ ಕಾಯಿದೆಯಲ್ಲಿ ಅನಧಿಕೃತ ಅತಿಕ್ರಮಣದಾರ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶವಿದೆ. ವಿಚಾರಣೆ ನಂತರ ಅನಧಿಕೃತ ಒತ್ತುವರಿದಾರರಿಗೆ ತಾವು ಅತಿಕ್ರಮಿಸಿರುವ ಒತ್ತುವರಿ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಒಪ್ಪಿಸಲು ಆದೇಶದ ದಿನದಿಂದ ೩೦ ದಿನಗಳ ಕಾಲಮಿತಿ ಇರುತ್ತದೆ. ಈ ಅವಧಿಯಲ್ಲಿ ಅತಿಕ್ರಮಿತ ಭೂಮಿ ಹಿಂತಿರುಗಿಸದಿದ್ದಲ್ಲಿ ಅರಣ್ಯ ಇಲಾಖೆಯು ಅತಿಕ್ರಮಿಸಿದ ಕ್ಷೇತ್ರ ವಶಪಡಿಸಿಕೊಳ್ಳಬಹುದಾಗಿದೆ. ಅದಕ್ಕೆ ತಗಲುವ ವೆಚ್ಚವನ್ನು ಅತಿಕ್ರಮಣದಾರನೇ ಭರಿಸಲು ಆದೇಶದಲ್ಲಿ ಉಲ್ಲೇಖವಾಗಿದೆ ಎಂದರು.ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸೀತಾರಾಮ ನಾಯ್ಕ ಬೊಗರಿಬೈಲ್, ಶಂಕರ ಸುಗ್ಗಿಗೌಡ ಕಂದೊಳ್ಳಿ, ಯೊಗೇಂದ್ರ ಗೌಡ, ಜ್ಯೋತಿ ಗೌಡ ಮಾನೀರ, ಸಾರಂಬಿ, ಕುಲಸುಂಭಿ, ಗಣಪತಿ ಮರಾಠಿ, ಸುನಿಲ ಗಣೇಶ ಹರಿಕಂತ್ರ, ಯಾಕುಬ್ ಸಾಬ, ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ