ಕುಕನೂರು: ಕನಕದಾಸರು ಮಾನವೀಯ ಮೌಲ್ಯದ ಸಂಪತ್ತು ಪಸರಿಸಿದರು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಕನಕದಾಸರ ಭಕ್ತಿ ಅಗಾಧವಾದದ್ದು.ಕನಕದಾಸರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮ ದರ್ಶನ ಭಾಗ್ಯ ನೀಡಿದೆ. ಭಕ್ತಿ ಪರಂಪರೆಯಲ್ಲಿ ಪ್ರತಿಯೊಬ್ಬರು ಸಾಗಬೇಕು. ಕನಕದಾಸರ ಭಕ್ತಿ ಅನುಗುಣವಾಗಿ ಅವರನ್ನು ಭಕ್ತ ಕನಕದಾಸರೆಂದೇ ಕರೆಯುತ್ತಾರೆ. ಅವರ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಿ ಬಾಳನ್ನು ಹಸನ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ಮುಖಂಡ ನವೀನ ಗುಳಗಣ್ಣವರ್ ಮಾತನಾಡಿ, ಕನಕದಾಸರ ಕೀರ್ತನೆಗಳಲ್ಲಿ ಅರ್ಥಗರ್ಭಿತ ಸಾಮಾಜಿಕ ಮೌಲ್ಯಗಳಿವೆ.ಅವುಗಳನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಕನಕದಾಸರ ಶ್ರೇಷ್ಠತೆ ಬಗ್ಗೆ ಅರಿಯಬೇಕು ಎಂದರು.ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮಂಜುನಾಥ ಕಡೆಮನಿ, ಶ್ರೀನಿವಾಸ ತಿಮ್ಮಾಪೂರ, ಶೇಖಪ್ಪ ಕಂಬಳಿ, ಲಕ್ಷ್ಮಣ ಬೆದವಟ್ಟಿ, ಮಹೇಶ ಗಾವರಾಳ ಇತರರಿದ್ದರು. ಪಟ್ಟಣದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಜರುಗಿತು.