ಮೂಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೀಘ್ರದಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಮಲತ್ಯಾಜ್ಯ ಘಟಕ ಆರಂಭವಾಗಲಿದ್ದು, ಬಹು ಮಹಡಿ ಕಟ್ಟಡ ಮಾಲೀಕರು ಹೋಟೆಲ್ ಮಾಲೀಕರು ಸಹಕಾರ ನೀಡಬೇಕು. ಬಹು ಕೋಟಿ ಒಳಚರಂಡಿ ಯೋಜನೆ ಬಗ್ಗೆ ಯೋಜನೆ ಸಿದ್ದಗೊಂಡು ಕಾರ್‍ಯರೂಪಕ್ಕೆ ಬರಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಕಿನ್ನಿಗೋಳಿ ವ್ಯಾಪ್ತಿಯಲ್ಲಿ ದ್ರವ ತ್ಯಾಜ್ಯ ಸಮಸ್ಯೆ ಇದ್ದು, ಇದರಿಂದ ಬಿತ್ತುಲ್ ಪರಿಸರದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಬಗ್ಗೆ ಸಾಕಷ್ಟು ದೂರು ಬಂದು ಕೋರ್ಟ್ ಕೇಸು ಆಗಿರುವುದರಿಂದ ಸಮಸ್ಯೆಗೆ ಪರಿಹಾರ ವಾಗಬೇಕಿದ್ದು, ಸ್ವಚ್ಚ ಕಿನ್ನಿಗೋಳಿ ಆಗುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳಿನ ತನಕ ಕಟ್ಟಡದ ಮಾಲಿಕರು ಹಾಗೂ ಹೋಟೆಲ್ ಮಾಲೀಕರು ಸಹಕಾರ ನೀಡಬೇಕು. ಮೆನ್ನಬೆಟ್ಟುವಿನಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ಸಕ್ಕಿಂಗ್ ಮಾಡುವ ಘಟಕದ ಶೇ. 90ರಷ್ಟು ಕಾಮಗಾರಿ ಮುಗಿದಿದ್ದು, ಮುಂದಿನ ದಿನಗಳಲ್ಲಿ ಘಟಕ ಕಾರ್‍ಯಾರಂಭ ಮಾಡಲಿದೆ ಎಂದು ಹೇಳಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಮಾತನಾಡಿ, 3 ಕೋಟಿ ರು. ವೆಚ್ಚದಲ್ಲಿ ಮಲ ತ್ಯಾಜ್ಯ ಘಟಕ ಆರಂಭವಾಗಲಿದ್ದು, ಹೊಟೇಲ್ ಹಾಗೂ ಬಹು ಮಹಡಿ ಕಟ್ಟಡಗಳ ದ್ರವ ತ್ಯಾಜ್ಯವನ್ನು ಸಕ್ಕಿಂಗ್ ಮಾಡಿ ವಿಲೇವಾರಿ ಮಾಡಲಾಗುವುದು. ಪಟ್ಟಣ ಪಂಚಾಯಿತಿಗೆ ಯಂತ್ರಗಳು, ಸಕ್ಕಿಂಗ್ ವಾಹನಗಳು ಬರಲಿದ್ದು, ದಿನಕ್ಕೆ ಎರಡು ಲಾರಿಗಳ ವಿಲೇವಾರಿ ಮಾಡುವ ಸಾಮಥ್ಯ ಹೊಂದಿದೆ. ಮುಂದಕ್ಕೆ ಇದರ ಮೂಲಕವೇ ಬಹುಮಹಡಿ ಕಟ್ಟಡ ಹಾಗೂ ಹೊಟೇಲ್‌ಗಳಿಂದ ಮಲ ತ್ಯಾಜ್ಯ ವಿಲೇವಾರಿ ಮಾಡಲಾಗುವುದು. ಕಿನ್ನಿಗೋಳಿ ದಿನವಹಿ ಮಾರುಕಟ್ಟೆಯಲ್ಲಿ ದ್ರವ ತ್ಯಾಜ್ಯ ಸಮಸ್ಯೆ ಇದ್ದು, ಇದಕ್ಕೂ ಸೂಕ್ತ ಪರಿಹಾರ ಮಾಡಲಾಗುವುದು. ಹೊಸ ದ್ರವ ತ್ಯಾಜ್ಯ ಘಟಕದ ಜಾಗವನ್ನು ಗುರುತು ಮಾಡಲಾಗಿದ್ದು, ಮುಂದಿನ ದಿನದಲ್ಲಿ ಈ ಘಟಕಕ್ಕೆ ಶಾಸಕರ, ಸಂಸದರ ಮಾರ್ಗದರ್ಶನದಲ್ಲಿ ರೂಪುರೇಷಗಳನ್ನು ಸಿದ್ದ ಪಡಿಸಲಾಗಿದೆ ಎಂದು ಹೇಳಿದರು. ಉದ್ಯಮಿ ಡಾ. ಕಿಶೋರ್‌ಶೆಟ್ಟಿ, ಅಶೋಕ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಪ್ರಮೋದ್ ಕುಮಾರ್, ಹರೀಂದ್ರ ಸುವರ್ಣ, ಮಾಧವ ಶೆಟ್ಟಿಗಾರ್, ದಾಮೋದರ ಶೆಟ್ಟಿ, ಸ್ತಾನಿ ಪಿಂಟೊ ಮತ್ತಿತರರು ಸಮಸ್ಯೆಯನ್ನು ಸಭೆಯಲ್ಲಿ ತಿಳಿಸಿದರು. ಉಪಾಧ್ಯಕ್ಷೆ ಪದ್ಮಲತಾ ರಾವ್, ಸದಸ್ಯ ಪ್ರಣೀಕ್, ಸಂತಾನ್ ಡಿಸೋಜ, ಮಲ್ಲಿಕಾ ಗುತ್ತಕಾಡು, ಪ್ರಕಾಶ್ ಕಿನ್ನಿಗೋಳಿ, ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಜಯಶಂಕರ್ ಕಾರ್‍ಯಕ್ರಮ ನಿರೂಪಿಸಿದರು.ಕಿನ್ನಿಗೋಳಿಯಲ್ಲಿ ಶೀಘ್ರದಲ್ಲಿ ಒಳಚರಂಡಿ ಯೋಜನೆ ಜಾರಿ: ಶಾಸಕ ಉಮಾನಾಥ ಕೋಟ್ಯಾನ್
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೀಘ್ರದಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಮಲತ್ಯಾಜ್ಯ ಘಟಕ ಆರಂಭವಾಗಲಿದ್ದು, ಬಹು ಮಹಡಿ ಕಟ್ಟಡ ಮಾಲೀಕರು ಹೋಟೆಲ್ ಮಾಲೀಕರು ಸಹಕಾರ ನೀಡಬೇಕು. ಬಹು ಕೋಟಿ ಒಳಚರಂಡಿ ಯೋಜನೆ ಬಗ್ಗೆ ಯೋಜನೆ ಸಿದ್ದಗೊಂಡು ಕಾರ್‍ಯರೂಪಕ್ಕೆ ಬರಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.