ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 23578 ಅನರ್ಹರು ಬಿಪಿಎಲ್ ಕಾರ್ಡ ಹೊಂದಿರುವುದು ಬೆಳಕಿಗೆ ಬಂದಿದ್ದು, ಇದರಲ್ಲಿ ಈಗಾಗಲೆ 315 ಜನರ ಬಿಪಿಎಲ್ ಕಾರ್ಡಗಳನ್ನು ಎಪಿಎಲ್‌ಗೆ ಬದಲಾಯಿಸಲಾಗಿದೆ.
23578 ಕಾರ್ಡ್‌ಗಳನ್ನು ಪರಿಶೀಲನೆ ನಡೆಸುವಂತೆ ಸರ್ಕಾರದಿಂದ ಸೂಚನೆ ಬಂದಿದ್ದು, ಕಾರ್ಡ್‌ಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ.
ಯಲ್ಲಾಪುರ: ಭೂಮಿ ಹಕ್ಕಿಗಾಗಿ ತೊಡಗಿಸಿಕೊಂಡಿರುವ ಹೋರಾಟವನ್ನು ಗುರುತಿಸಿ ಅಭಿನಂದನೆ, ಸನ್ಮಾನ ನೀಡುವುದರಿಂದ ಹೋರಾಟಕ್ಕೆ ಸ್ಥೈರ್ಯ ಹೆಚ್ಚುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ನ. ೧೬ರಂದು ಸಂಜೆ ತಾಲೂಕಿನ ಹಾಸಣಗಿ ಗ್ರಾಪಂ ವ್ಯಾಪ್ತಿಯ ಗಜಾನನೋತ್ಸವ ಸಮಿತಿಯ ಸಂಭಾಗಣದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅರಣ್ಯವಾಸಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಿರಂತರ ೩೩ ವರ್ಷ ಐತಿಹಾಸಿಕ ಘಟ್ಟ ಯಶಸ್ಸಿನ ಹಾದಿಯಲ್ಲಿ ಹೋರಾಟ ನಡೆದಿದೆ. ದೇಶದ ಪ್ರತಿಯೊಂದು ಹೋರಾಟಕ್ಕೂ ಯಶಸ್ಸು ಸಿಕ್ಕಿರುವ ಇತಿಹಾಸವಿದೆ. ಅದರಂತೆ ೩೩ ವರ್ಷ ನಿರಂತರ ಹೋರಾಟಕ್ಕೂ ಮುಂದಿನ ದಿನಗಳಲ್ಲಿ ಯಶಸ್ಸು ಖಂಡಿತ ಇದೆ ಎಂದರು.ಸಭೆಯಲ್ಲಿ ಪ್ರಮುಖರಾದ ವಿನೋದ ಸುರೇಶ ತಳೇಕರ್, ಚಂದ್ರು ಪೂಜಾರಿ, ರಘುನಾಥ ಮರಾಠಿ, ಶಂಕರ ಹೆಗಡೆ, ನರಸಿಂಹ ನಾಯ್ಕ, ಕೃಷ್ಣ ನಾಯರ್, ಉಮೇಶ ನಾಯ್ಕ, ನಾರಾಯಣ ಪೂಜಾರಿ ಹೋಟಗೇರಿ, ಜಯ ಬಿಲ್ಲವ, ರಾಮಕೃಷ್ಣ ಬಿಲ್ಲವ ಉಪಸ್ಥಿತರಿದ್ದರು.