ಗಡಿನಾಡ ಸಾಂಸ್ಕೃತಿಕ ಉತ್ಸವಕ್ಕೆ ಸಹಕಾರ ನೀಡಿ: ಬಸವಲಿಂಗ ಶ್ರೀ

KannadaprabhaNewsNetwork |  
Published : Dec 27, 2024, 12:46 AM IST
ಚಿತ್ರ ಶೀರ್ಷಿಕೆ26ಎಂ.ಎಲ್ ಕೆ1ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠದ ಆವರಣದಲ್ಲಿ ನಡೆದ ಗಡಿನಾಡ ಸಾಂಸ್ಕೃತಿಕ ಉತ್ಸವ ಪೂರ್ವಭಾವಿಯಲ್ಲಿ ಬಸವಲಿಂಗ ಶ್ರೀ ಮಾತನಾಡಿದರು. | Kannada Prabha

ಸಾರಾಂಶ

ಪ್ರತಿ ವರ್ಷದಂತೆ ಈ ಬಾರಿ ಕೂಡ ಫೆ.15ರಿಂದ17 ರವರೆಗೆ ಮೂರು ದಿನಗಳ ಕಾಲ ಗಡಿನಾಡ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದ್ದು, ಸದ್ಭಕ್ತರು ಉತ್ಸವದ ಯಶಸ್ಸಿಗೆ ಸಹಕಾರ ನೀಡುವಂತೆ ಬಸವಲಿಂಗ ಶ್ರೀ ಹೇಳಿದರು. ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠದ ಆವರಣದಲ್ಲಿ ನಡೆದ ಗಡಿನಾಡ ಸಾಂಸ್ಕೃತಿಕ ಉತ್ಸವ ಪೂರ್ವಭಾವಿಯಲ್ಲಿ ಮಾತನಾಡಿದರು.

ಮೊಳಕಾಲ್ಮುರು: ಪ್ರತಿ ವರ್ಷದಂತೆ ಈ ಬಾರಿ ಕೂಡ ಫೆ.15ರಿಂದ17 ರವರೆಗೆ ಮೂರು ದಿನಗಳ ಕಾಲ ಗಡಿನಾಡ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದ್ದು, ಸದ್ಭಕ್ತರು ಉತ್ಸವದ ಯಶಸ್ಸಿಗೆ ಸಹಕಾರ ನೀಡುವಂತೆ ಬಸವಲಿಂಗ ಶ್ರೀ ಹೇಳಿದರು. ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠದ ಆವರಣದಲ್ಲಿ ನಡೆದ ಗಡಿನಾಡ ಸಾಂಸ್ಕೃತಿಕ ಉತ್ಸವ ಪೂರ್ವಭಾವಿಯಲ್ಲಿ ಮಾತನಾಡಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಮಠದಲ್ಲಿ ಫೆ.17 ರಿಂದ ಮೂರು ದಿನಗಳ ಕಾಲ ಗಡಿನಾಡ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಗಡಿ ಭಾಗದಲ್ಲಿ ಜರುಗುವ ಗಡಿನಾಡ ಜಾತ್ರೆಗೆ ನಾಡಿನ ಹಲವು ಮಠಾಧೀಶರು, ರಾಜಕೀಯ ಗಣ್ಯರನ್ನು ಆಹ್ವಾನಿಸಲಾಗುವುದು. ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು.

ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್ ಮಾತನಾಡಿ ರಾಜ್ಯದಲ್ಲೇ ಅತಿ ಹಿಂದುಳಿದಿರುವ ತಾಲೂಕಿನ ಗಡಿ ಭಾಗದಲ್ಲಿ ಬಸವಾದಿ ಶಿವಶರಣರ ತತ್ವ ವಿಚಾರಧಾರೆಗಳನ್ನು ಜನರಿಗೆ ಉಣ ಬಡಿಸುತ್ತಿರುವ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠದ ಸಾಂಸ್ಕೃತಿಕ ಗತವೈಭವವನ್ನು ಇಡೀ ನಾಡಿಗೆ ಪಸರಿಸುವ ಗಡಿನಾಡ ಸಾಂಸ್ಕೃತಿಕ ಉತ್ಸವಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ತಿಳಿಸಿದರು.

ಸಭೆಯಲ್ಲಿ ಬಸವ ಕೇಂದ್ರ ಉಪಾಧ್ಯಕ್ಷ ಕೆ. ಚಂದ್ರಪ್ಪ, ಕಾರ್ಯದರ್ಶಿ ಲಕ್ಷ್ಮಣ, ತಿಪ್ಪೇಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?