ಹರಪನಹಳ್ಳಿ: ಪೊಲೀಸರೊಂದಿಗೆ ಸಹಕರಿಸಿ ಶಾಂತಿಯುತವಾಗಿ ಈದ್ ಮಿಲಾದ್ ಆಚರಿಸಬೇಕು ಎಂದು ವಿಜಯನಗರ ಎಸ್ಪಿ ಎಸ್. ಜಾಹ್ನವಿ ಹೇಳಿದರು.
ಬ್ಯಾನರ್‌ಗಳನ್ನು ನಮ್ಮ ಗಮನಕ್ಕೆ ತಂದು ಹಾಕಬೇಕು. ಸೈಲನ್ಸರ ಇಲ್ಲದ ಬೈಕ್‌ಗಳ ಸಂಚಾರ ಕೈಗೊಂಡರೆ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು ಶಾಂತಿಯುತವಾಗಿ ಪರಸ್ಪರ ಸಹಬಾಳ್ವೆ ಹಾಗೂ ಖುಷಿಯಿಂದ ಹಬ್ಬ ಆಚರಿಸಿ ಎಂದು ತಿಳಿಸಿದರು.
ಡಿವೈಎಸ್ಪಿ ಡಾ. ಸಂತೋಷ ಚವ್ಹಾಣ ಮಾತನಾಡಿ, ನಮ್ಮ ಸಲಹೆ ಸೂಚನೆ ನೆನಪಿನಲ್ಲಿಟ್ಟುಕೊಂಡು ಜನರಿಗೆ ತಿಳಿವಳಿಕೆ ಹೇಳಿ ಇತರ ಧರ್ಮದವರ ಭಾವನೆಗಳಿಗೆ ಧಕ್ಕೆ ಬರದಂತೆ ಆಚರಿಸಿ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಕಾನೂನು ಚೌಕಟ್ಟಿನಲ್ಲಿ ಮೆರವಣಿಗೆ ನಡೆಸಿ ಎಂದು ಹೇಳಿದರು.ನಗರಸಭೆ ಎಂಜಿನಿಯರ್ ಅಮರೇಶ ಮಾತನಾಡಿ, ಹಬ್ಬಕ್ಕೆ ನಮ್ಮ ಕಡೆಯಿಂದ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಇತರ ಸಹಕಾರ ನೀಡುವುದಾಗಿ ತಿಳಿಸಿದರು.
ಹರಪನಹಳ್ಳಿ ಸಿಪಿಐ ಮಹಾಂತೇಶ ಸಜ್ಜನ್, ಹಡಗಲಿ ಸಿಪಿಐ ಮಲ್ಲಪ್ಪ ಹೂಗಾರ, ತಾಲೂಕಿನ ಪಿಎಸ್ ಐ ಗಳಾದ ಶಂಭುಲಿಂಗ ಹಿರೇಮಠ, ನಾಗರತ್ನಮ್ಮ, ಕಿರಣ್ ಕುಮಾರ, ವಿಜಯಕೃಷ್ಣ ಇದ್ದರು.