ನೆಲಮಂಗಲ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ದುಡಿದವರಿಗೆ ಅಧಿಕಾರ ನೀಡಲಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಎಂದು ಹೇಳಿದರು.
ನಗರದ ಸದಾಶಿವನಗರದ ನಗರ ಯೋಜನಾ ಪ್ರಾಧಿಕಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಂ.ಕೆ.ನಾಗರಾಜು ಮತ್ತು ಸದಸ್ಯರಾಗಿ ಬಿನ್ನಮಂಗಲ ವೆಂಕಟೇಶ್, ಅಂಜನಮೂರ್ತಿ, ಪ್ರಕಾಶ್ ಅವರಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನಾ ಪ್ರಾಧಿಕಾರದ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರು, ಕೂಲಿಕಾರ್ಮಿಕರು ಹಾಗೂ ರೈತರಿಗೆ ಉಪಯುಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದರು.
ಪ್ರಾಧಿಕಾರದ ನೂತನ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಮುಖಂಡರ ಪ್ರಯತ್ನದ ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಲ್ಲಿಸಿದ ಅಳಿಲು ಸೇವೆಯನ್ನು ಗುರುತಿಸಿ ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ಸಂತೋಷಕರ ಸಂಗತಿ. ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸಿರುವ ಹಿರಿಯರು, ಶಾಸಕರ ಮಾರ್ಗದರ್ಶನದಲ್ಲಿ ನಮ್ಮ ಪಕ್ಷದ ಹಿರಿಯ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರಸಹಕಾರ ಪಡೆದು ಯೋಜನಾಬದ್ದ ನಗರ ನಿರ್ಮಾಣಕ್ಕೆ ಶ್ರಮಿಸುತ್ತೇನೆ ಎಂದರು.ಪ್ರಾಧಿಕಾರದ ನೂತನ ಸದಸ್ಯರಾದ ಬಿನ್ನಮಂಗಲ ವೆಂಕಟೇಶ್, ಅಂಜನಮೂರ್ತಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಎಲೆಮರೆಯಾಗಿ ಸೇವೆ ಸಲ್ಲಿಸಿದ್ದ ವ್ಯಕ್ತಿಗಳನ್ನು ಗುರಿತಿಸಿ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆ ಮಾಡಿದ ಶಾಸಕ ಶ್ರೀನಿವಾಸ್‌ರಿಗೆ ಧನ್ಯವಾದಗಳು. ಶಾಸಕರ ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ಕೈ ಬಲ ಪಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಿವಾನಂದ ಆಶ್ರಮದ ಶ್ರೀ ರಮಾನಂದನಾಥಸ್ವಾಮೀಜೀ, ನಗರಸಭೆ ಅದ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯ ಸಿ.ಪ್ರದೀಪ್, ಗಂಗಾಧರ್‌ರಾವ್, ನರಸಿಂಹಮೂರ್ತಿ, ನೆ.ಯೋ.ಪ್ರಾಧಿಕಾರ ನಿಟಕಪೂರ್ವ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಬಿ.ಜಿ.ವಾಸು, ರಂಗಸ್ವಾಮಿ, ಪ್ರಕಾಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೂದಿಹಾಲ್ ಮಂಜುನಾಥ್, ಸಿ.ಪ್ರದೀಪ್, ಹನುಮಂತೇಗೌಡ, ಶರ್ಮಾ, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಮುಖಂಡ ಸಿ.ಎಂ.ಗೌಡ, ಲಕ್ಷ್ಮೀನಾರಾಯಣ, ಅಗಲಕುಪ್ಪೆಗೋವಿಂದರಾಜು, ಕೆಂಪರಾಜು, ವಸಂತ್, ಮುನಿರಾಜು, ಬಿ.ಕೆ.ತಿಮ್ಮರಾಜು, ಗೋವಿಂದರಾಜು, ಚಂದ್ರಕುಮಾರ್, ಮಂಜುನಾಥ್, ದೇವರಾಜು, ಮನುಗೌಡ ಇತರರು ಉಪಸ್ಥಿತರಿದ್ದರು.ಪೊಟೊ-29 ಕೆಎನ್‌ಎಲ್‌ಎಮ್1-
ನೆಲಮಂಗಲ ಯೋಜನಾ ಪ್ರಾದಿಕಾರದ ಅಧ್ಯಕ್ಷರಾಗಿ ಎಂ.ಕೆ.ನಾಗರಾಜು ಮತ್ತು ಸದಸ್ಯರಾಗಿ ಬಿನ್ನಮಂಗಲ ವೆಂಕಟೇಶ್, ಅಂಜನಮೂರ್ತಿ, ಪ್ರಕಾಶ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಶಾಸಕ ಎನ್.ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಮುಖಂಡರು ಅಭಿನಂದಿಸಿ ಶುಭಕೋರಿದರು.